‘ಸ್ವಲ್ಪ ಕೆಲಸವನ್ನಾದರೂ ಅತ್ಯಂತ ಉತ್ತಮ ರೀತಿಯಲ್ಲಿ ಮಾಡುವುದೇ ದೊಡ್ಡ ಸಾಧನೆಗೆ ದಾರಿ ತೆರೆದಂತೆ’ ಎಂಬ ತತ್ವವನ್ನು ಸಾರಿದ ಮಹಾನ್ ವ್ಯಕ್ತಿ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನವಾದ ೧೫ ಸೆಪ್ಟೆಂಬರ್‌ಅನ್ನು ಪ್ರತಿವರ್ಷ ‘ಇಂಜಿನಿರ‍್ಸ್ ದಿನ’ ಎಂದು ಆಚರಿಸಲಾಗುತ್ತದೆ.

ತಮ್ಮ ಪರಿಶ್ರಮ, ಬುದ್ಧಿವಂತಿಕೆ ಮತ್ತು ಶಿಸ್ತುಗಳಿಂದ ಭಾರತದ ಅತೀ ಮಹಾನ್ ಇಂಜಿನಿಯರ್ ಮಾತ್ರವಲ್ಲದೇ ವಿಶ್ವ ಪ್ರಸಿದ್ಧ ವ್ಯಕ್ತಿತ್ವವಾಗಿಯೂ ಹೊರಹೊಮ್ಮಿದರು.

ಗಣಿತ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದ ಇವರು ೧೮೮೧ ರಲ್ಲಿ ಬಿ.ಎ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಪಡೆದು, ತಮ್ಮ ವಿದ್ಯಾರ್ಥಿ ವೇತನದಲ್ಲಿ ಇಂಜಿನಿಯರಿAಗ್ ಶಿಕ್ಷಣಕ್ಕಾಗಿ ಪುಣೆಗೆ ತೆರಳಿದರು.

ಸಿವಿಲ್ ಇಂಜಿನಿಯರ್ ವಿಭಾಗದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆದರು. ಮೂರು ವರ್ಷದ ಅವಧಿಯ ಶಿಕ್ಷಣವನ್ನು ಕೇವಲ ಎರಡೂವರೆ ವರ್ಷದಲ್ಲಿ ಮುಗಿಸಿ ಬೊಂಬಾಯಿ ಪ್ರಾಂತ್ಯಕ್ಕೆ ಪ್ರಥಮ ಸ್ಥಾನಗಳಿಸಿದರು. ಅದಕ್ಕಾಗಿ ಅವರಿಗೆ ಜೇಮ್ಸ್ ಬರ್ಕ್ಲೆ ಬಂಗಾರದ ಪದಕ ದೊರಕಿತು.

ವಿಶ್ವೇಶ್ವರಯ್ಯ ಅವರ ಅತ್ಯಂತ ಪ್ರಮುಖ ಸಾಧನೆಯಲ್ಲಿ ಅವರ ನೀರಾವರಿ ಮತ್ತು ಅಣೆಕಟ್ಟು ಯೋಜನೆಗಳು. ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ (ಕೆ.ಆರ್.ಎಸ್.) ಅಣೆಕಟ್ಟನ್ನು ಮೈಸೂರು ರಾಜ್ಯದಲ್ಲಿ ನಿರ್ಮಿಸಿದರು. ಆಗಿನ ಕಾಲದಲ್ಲಿ ಇಂತಹ ದೊಡ್ಡ ಯೋಜನೆ ಭಾರತದಲ್ಲೇ ಮೊದಲ ಬಾರಿಗೆ ನಿರ್ಮಾಣ ಹೊಂದಿದ್ದು ಇಂದಿಗೂ ಈ ಅಣೆಕಟ್ಟು ನೀರಿನ ನಿರ್ವಹಣೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ಸಹಾಯ ಮಾಡುತ್ತಿದೆ.

ಅದರ ತಂತ್ರಜ್ಞಾನ ಬುದ್ಧಿವಂತಿಕೆಯನ್ನು ತೋರಿಸುವ ಮತ್ತೊಂದು ಉದಾಹರಣೆಯಾದ ಂuಣomಚಿಣiಛಿ Wಚಿಣeಡಿ ಈಟooಜ ಉಚಿಣes ತಂತ್ರ. ಈ ತಂತ್ರವನ್ನು ಮೊಟ್ಟಮೊದಲ ಬಾರಿಗೆ ೧೯೦೩ ರಲ್ಲಿ ಪುಣೆಯ ಖಡಕ್ ವಾಸ್ಲಾ ಜಲಾಶಯದಲ್ಲಿ ಅಳವಡಿಸಲಾಯಿತು. ಈ ಆವಿಷ್ಕಾರ ಜಲ ಸಂಪನ್ಮೂಲದ ನಿಯಂತ್ರಣದಲ್ಲಿ ಕ್ರಾಂತಿಯನ್ನುAಟುಮಾಡಿತು.

ಇದೇ ರೀತಿಯಲ್ಲಿ ಹೈಡ್ರೋಲಿಕ್ ಇಂಜಿನಿಯರಿAಗ್ ಕ್ಷೇತ್ರದಲ್ಲಿ ಅವರು ಅನುಸರಿಸಿದ ಕ್ರಮಗಳು ಹಲವಾರು ರಾಜ್ಯಗಳಿಂದ ಮೆಚ್ಚುಗೆ ಪಡೆದವು. ಹಗರಿಬೊಮ್ಮನಹಳ್ಳಿ ಗಂಗಾವತಿ ಯೋಜನೆ ಹಾಗೂ ಇತರ ಹಲವಾರು ನೀರಾವರಿ ಯೋಜನೆಗಳಲ್ಲಿ ಅವರ ಸಲಹೆಗಳು ದೇಶದ ರೈತರ ಜೀವನ ಶೈಲಿಯನ್ನು ಬೆಳೆಸಲು ಸಹಾಯ ಮಾಡಿತು.

ಇವರು ಕೇವಲ ಇಂಜಿನಿಯರಿAಗ್ ಮಾತ್ರವಲ್ಲದೆ ಒಬ್ಬ ಸಮರ್ಥ ಆಡಳಿತಗಾರರಾಗಿಯೂ ಖ್ಯಾತಿಗಳಿಸಿದ್ದಾರೆ. ೧೯೧೨ರಲ್ಲಿ ಅವರನ್ನು ಮೈಸೂರಿನ ದಿವಾನರಾಗಿ ನೇಮಕ ಮಾಡಲಾಯಿತು. ದಿವಾನರಾಗಿ ಅವರು ಆರ್ಥಿಕ ಅಭಿವೃದ್ಧಿ, ಕೈಗಾರಿಕಾವೃದ್ಧಿ, ಶಿಕ್ಷಣ ಹಾಗೂ ಸಮಾಜದ ಪರಿವರ್ತನೆಗೆ ಅನೇಕ ಮಹತ್ವದ ನೀತಿಗಳನ್ನು ಪರಿಚಯಿಸಿದರು.

ಮೈಸೂರು ಸಿಲ್ಕ್ ಇಂಡಸ್ಟಿçÃಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್ ಹಾಗೂ ಹಲವಾರು ಕೈಗಾರಿಕಾ ಕ್ಷೇತ್ರಗಳ ಸ್ಥಾಪನೆ ಇತರರ ನೇರ ಕೊಡುಗೆಯಿಂದಲೇ ಸಾಧ್ಯವಾಯಿತು. ಇಂದಿನ ಯುವ ಪೀಳಿಗೆಗೆ ವಿಶ್ವೇಶ್ವರಯ್ಯ ಅವರ ಜೀವನ ಒಂದು ಮಾರ್ಗದರ್ಶಕವಾಗಿದೆ.

ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ದಾಗ ಬ್ರಿಟಿಷ್ ಸರಕಾರಿ ‘ಸರ್’ ಪದವಿಯನ್ನು ನೀಡಿತು. ೧೯೫೫ ರಲ್ಲಿ ಭಾರತ ಸರಕಾರ ಅತ್ಯುಚ್ಛ ಗೌರವವಾದ ‘ಭಾರತ ರತ್ನ’ ಪ್ರಶಸ್ತಿ ನೀಡಿತು. ‘ಭಾರತ ರತ್ನ’ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರೆನಿಸಿದರು.

ವಿಶ್ವೇಶ್ವರಯ್ಯ ಅವರು ಜನತೆಗೆ ‘ನೀವು ದುಡಿದರೆ ಮಾತ್ರ ಉದ್ಧಾರವಾಗುತ್ತೀರಿ ಇಲ್ಲವಾದರೆ ವಿನಾಶಗೊಳ್ಳುತ್ತೀರಿ’ ಎನ್ನುವ ಸಂದೇಶವನ್ನು ನೀಡಿದರು. ಸ್ವತಃ ದುಡಿದು ದುಡಿಮೆಯ ಹಿರಿಮೆಯನ್ನು ತೋರಿಸಿದರು. ತಮ್ಮ ೧೦೨ನೇ ವಯಸ್ಸಿನಲ್ಲಿ ಏಪ್ರಿಲ್ ೧೪, ೧೯೬೨ರಲ್ಲಿ ನಿಧನರಾದರು. ಇಂಜಿನಿರ‍್ಸ್ ದಿನದ ಶುಭಾಶಯಗಳು. - ಬಿ.ಯು. ಯಶೋಧ, ಶ್ರೀಮಂಗಲ.