ಮಡಿಕೇರಿ, ಸೆ. ೧೪: ಕೊಡವ ಹಾಕಿ ಅಕಾಡೆಮಿಗೆ ಸೆ. ೨೮ ರಂದು ನಡೆಯಲಿರುವ ಚುನಾವಣೆಗೆ ಹಾಲಿ ಕಾರ್ಯಾಧ್ಯಕ್ಷರಾಗಿರುವ ಮೇಕೇರಿರ ರವಿ ಪೆಮ್ಮಯ್ಯ ಅವರ ನೇತೃತ್ವದಲ್ಲಿ ಮತ್ತೊಂದು ತಂಡ ಸಿದ್ಧವಾಗಿದೆ.

ಪಾಂಡAಡ ಕೆ. ಬೋಪಣ್ಣ ಅವರ ನೇತೃತ್ವದ ತಂಡ ಈಗಾಗಲೇ ತಮ್ಮ ಬಣದ ಅಭ್ಯರ್ಥಿಗಳ ಹೆಸರನ್ನು ಪ್ರಕಟ ಮಾಡಿದೆ. ಇದೀಗ ರವಿ ಪೆಮ್ಮಯ್ಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದು, ಇವರ ತಂಡದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮಡಿಕೇರಿ ತಾಲೂಕಿನಿಂದ ಮಾದಂಡ ಪೆಮ್ಮಯ್ಯ, ಸೋಮವಾರಪೇಟೆ ತಾಲೂಕಿನಿಂದ ಕಲ್ಮಾಡಂಡ ತರುಣ್, ವೀರಾಜಪೇಟೆ ತಾಲೂಕಿನಿಂದ ಮೀದೇರಿರ ಗನ್ನು ಸೋಮಣ್ಣ, ಕಾರ್ಯದರ್ಶಿ ಸ್ಥಾನಕ್ಕೆ ಬುಟ್ಟಿಯಂಡ ಚಂಗಪ್ಪ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮಚ್ಚಾರಂಡ ಪ್ರವೀಣ್ ಅವರುಗಳು ಸ್ಪರ್ಧಿಸಲಿದ್ದಾರೆ.ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾಗಿ ಕುಂಞAಡ ನಿರನ್ ನಾಣಯ್ಯ, ಪಟ್ಟಮಾಡ ಡಿ. ಪೊನ್ನಪ್ಪ, ಕಾಂಡAಡ ರಶ್ಮಿ ಲಾಲಪ್ಪ (ಮಹಿಳೆ) ಮೈಂದಪAಡ ಅಯ್ಯಣ್ಣ, ಚಂದುರ ಸಂದೇಶ್, ನೆರವಂಡ ಅನೂಪ್ ಉತ್ತಯ್ಯ, ಬಲ್ಟಿಕಾಳಂಡ ಸುಜಿತ್, ಅಂಜಪರವAಡ ಕುಶಾಲಪ್ಪ (ಕುಶ) ಅವರುಗಳು ಸ್ಪರ್ಧಿಸುತ್ತಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಒಲಿಂಪಿಯನ್ ಸಿ.ಎಸ್. ಪೂಣಚ್ಚ ಸ್ಪರ್ಧಿಸಿರುವುದರಿಂದ ಈ ಸ್ಥಾನಕ್ಕೆ ತಮ್ಮ ತಂಡದಿAದ ಅಭ್ಯರ್ಥಿ ಹಾಕುತ್ತಿಲ್ಲ ಎಂದು ರವಿ ಪೆಮ್ಮಯ್ಯ ಅವರು ತಿಳಿಸಿದ್ದಾರೆ.