*ಗೋಣಿಕೊಪ್ಪ, ಸೆ. ೧೪: ೩೭ನೇ ವರ್ಷದ ಸ್ತಬ್ಧಚಿತ್ರ ಮೆರವಣಿಗೆಗೆ ನಾಡಹಬ್ಬ ದಸರಾ ಸಮಿತಿ ಪೂರ್ವ ತಯಾರಿ ಕೈಗೊಂಡಿದೆ ಎಂದು ನಾಡ ಹಬ್ಬ ದಸರಾ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ತಿಳಿಸಿದ್ದಾರೆ.
ಸಮಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಪೌರಾಣಿಕ ವಿಭಾಗಗಳಲ್ಲಿ ಸ್ತಬ್ಧಚಿತ್ರÀ್ರ ಮೆರವಣಿಗೆ ಆಕರ್ಷಣೆ ಆಗಲಿದೆ. ದಸರಾ ಆಚರಣೆಯ ಪ್ರಮುಖವಾಗಿ ಸ್ತಬ್ಧಚಿತ್ರÀ್ರ ಗಮನ ಸೆಳೆಯುತ್ತಿರುವುದು ವಿಶಿಷ್ಟ.
ಈ ಹಿನ್ನೆಲೆ ವಿವಿಧ ಸಂಘ-ಸAಸ್ಥೆಗಳು ಸ್ತಬ್ಧಚಿತ್ರÀ್ರಗಳ ಮಾದರಿ ತಯಾರಿಗಳನ್ನು ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೆಲ ವರ್ಷಗಳ ಹಿಂದೆ ೩೨ಕ್ಕೂ ಹೆಚ್ಚು ಸ್ತಬ್ಧಚಿತ್ರÀ್ರ ಭಾಗವಹಿಸಿ ಗಮನ ಸೆಳೆದಿದ್ದವು. ತದನಂತರ ೨೫ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ಮೆರವಣಿಗೆ ಆಕರ್ಷಣೆಯನ್ನು ಕಂಡಿದೆ. ಈ ವರ್ಷ ವಿಶೇಷವಾಗಿ ನಾಡಹಬ್ಬ ದಸರಾ ಸಮಿತಿಯ ಸ್ತಬ್ಧಚಿತ್ರ ಮೆರವಣಿಗೆಯನ್ನು ಜನಾಕರ್ಷಣೆಯಾಗಿ ಮಾಡಲು, ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಸರ್ಕಾರದ ವಿವಿಧ ಇಲಾಖೆಗಳು ಮಾದರಿ ತಯಾರಿಕೆಗಳ ಮೂಲಕ ಸ್ತಬ್ಧಚಿತ್ರ್ರ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಅದರಂತೆ ವಿವಿಧ ಸಂಘಟನೆಗಳು ಸೇರಿ ಈಗಾಗಲೇ, ಮೆರವಣಿಗೆಯಲ್ಲಿ ಭಾಗವಹಿಸುವ ಭರವಸೆಯನ್ನು ನೀಡಿದ್ದಾರೆ. ಸಾಕಷ್ಟು ಸಂಸ್ಥೆಗಳು ಈ ತಯಾರಿಯನ್ನು ಈಗಾಗಲೇ ಪ್ರಾರಂಭಿಸಿವೆ. ಈ ಬಾರಿ ಸುಮಾರು ೪೦ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಆಕರ್ಷಣೆಯಾಗಬೇಕು ಎಂಬುದು ಸಮಿತಿಯ ಕನಸಾಗಿದೆ ಎಂದು ಹೇಳಿದರು.
ಭಾಗವಹಿಸಿದ ಸಮಿತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಎಂದು ಕಳೆದ ಬಾರಿ ನೀಡಿದ ನಗದು ಬಹುಮಾನಕ್ಕಿಂತ ಹೆಚ್ಚಿನ ಆಕರ್ಷಣೆಯ ನಗದು ಮತ್ತು ಟ್ರೋಫಿಯನ್ನು ನೀಡಲು ಸಮಿತಿ ನಿರ್ಧರಿಸಿದೆ.
ಜೊತೆಗೆ ಭಾಗವಹಿಸಿದ ಎಲ್ಲಾ ಕಲಾ ತಂಡಗಳಿಗೂ ಪ್ರೋತ್ಸಾಹ ಬಹುಮಾನ ನೀಡಲಾಗುವುದು. ಹೆಚ್ಚಿನ ದರದಲ್ಲಿ ಅನುದಾನ ಸಂಗ್ರಹವಾದರೆ, ಅದರ ಪೂರ್ಣ ಹಣವನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿಗೆ ನೀಡುವ ನಿರ್ಧಾರದೊಂದಿಗೆ ಸಮಿತಿ ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.
ನಂತರ ಸಂಜೆ ನಡೆಯುವ ಶೋಭಾಯಾತ್ರೆ ಮೆರವಣಿಗೆಯಲ್ಲಿ ಡಿಜೆ ಅಳವಡಿಸದೆ ಮಾದರಿ ಮೆರವಣಿಗೆಯಾಗಿ ಸಾಗಿಬರಲು ಸಮಿತಿ ಚಿಂತನೆ ಹರಿಸಿದೆ. ಕೊಡಗಿನ ವಾಲಗ, ಚಂಡೆಗಳನ್ನು ಮಾತ್ರ ಬಳಸಿಕೊಂಡು ಭಾರತ ಮಾತೆಯನ್ನು ಆರಾಧಿಸುವ ನಿಟ್ಟಿನಲ್ಲಿ ನಾಡಹಬ್ಬ ದಸರಾ ಸಮಿತಿ ಜನಮನ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸ್ತಬ್ಧಚಿತ್ರÀ್ರ ನಿರ್ಮಿಸುವ ವಿವಿಧ ಸಂಘಟನೆಗಳು, ನಾಡಹಬ್ಬ ದಸರಾ ಸಮಿತಿಯಲ್ಲಿ ತಮ್ಮ ಸಮಿತಿಯ ಹೆಸರನ್ನು ನೋಂದಾಯಿಸಿಕೊAಡಾಗ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಅನುಕೂಲವಾಗಲಿದೆ. ಹೀಗಾಗಿ ಸಮಿತಿಯವರು ೮೭೬೨೪೭೮೯೮೨ ಹೆಚ್ಚಿನ ಮಾಹಿತಿ ಹಾಗೂ ನೋಂದಾಯಿಸಿಕೊಳ್ಳಲು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಾರಿತ್ತಾಯ, ಖಜಾಂಚಿ ರಜಿತ್ ಕುಟ್ಟ, ಸದಸ್ಯರಾದ ಸುಬ್ರಮಣಿ ಎಂ.ಜಿ ಉಪಸ್ಥಿತರಿದ್ದರು.