ಮಡಿಕೇರಿ, ಸೆ. ೧೪: ಮಡಿಕೇರಿ ಕೊಡವ ಸಮಾಜದ ಕಲ್ಚರಲ್ ಆ್ಯಂಡ್ ಸೋಷಿಯಲ್ ವೆಲ್‌ಫೇರ್ ಸೆಂಟರ್‌ನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷರಾಗಿರುವ ಮುಳ್ಳಂಡ ರತ್ತು ಚಂಗಪ್ಪ ಅವರು ನೇಮಕಗೊಂಡಿದ್ದಾರೆ.
ಸAಸ್ಥೆಯ ಕಾರ್ಯದರ್ಶಿಯಾಗಿ ಬಿದ್ದಂಡ ಬೆನ್ ಬೆಳ್ಯಪ್ಪ, ಉಪಾಧ್ಯಕ್ಷರಾಗಿ ಚೆರುಮಂದAಡ ಮಣಿ ಪೊನ್ನಪ್ಪ, ಖಜಾಂಚಿಯಾಗಿ ಬೊಪ್ಪಂಡ ಶ್ಯಾಮ್ ಪೂಣಚ್ಚ ಆಯ್ಕೆಯಾಗಿದ್ದಾರೆ. ನಿನ್ನೆ ಸಂಸ್ಥೆಯ ನೂತನ ಆಡಳಿತ ಮಂಡಳಿ ಸಭೆ ಜರುಗಿತು. ಸಭೆಯಲ್ಲಿ ನೂತನ ನಿರ್ದೇಶಕರುಗಳಾಗಿರುವ ಮಾಜಿ ಅಧ್ಯಕ್ಷ ಮೂವೆರ ಶಂಭು ಸುಬ್ಬಯ್ಯ, ಮುಂಡAಡ ಬಿ. ಸೋಮಣ್ಣ, ನಾಳಿಯಂಡ ಅಯ್ಯಪ್ಪ, ಪಡೇಟಿರ ಹರೀಶ್ ಮುತ್ತಪ್ಪ, ಕೆಚ್ಚೆಟ್ಟೀರ ರ‍್ಯಾಲಿ ಬಿದ್ದಪ್ಪ, ಕಾಯಪಂಡ ಶಶಿ ಸೋಮಯ್ಯ, ಚೌರೀರ ಪೂವಣ್ಣ, ಮುಕ್ಕಾಟಿರ ಅಶ್ವಥ್, ಬೈರೇಟಿರ ಪಟ್ಟು ರಮೇಶ್, ಮಂಡೇಟಿರ ಸುನಿಲ್ ಮಂದಪ್ಪ ಪಾಲ್ಗೊಂಡಿದ್ದರು.