ಮಡಿಕೇರಿ ಸೆ. ೧೩: ಕುಶಾಲನಗರದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ಸಮಾಜ ಸೇವಕಿ ಹಾಗೂ ಉದ್ಯಮಿ ಛಾಯಾ ನಂಜಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ದೇಶ ವಿಶ್ವಗುರುವಾಗಲು ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವ ಶಿಕ್ಷಕರ ಜವಾಬ್ದಾರಿ ಮತ್ತು ಕರ್ತವ್ಯ ಪ್ರಜ್ಞೆ ಬಹಳ ಮುಖ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ನಿಸ್ವಾರ್ಥದಿಂದ ವಿದ್ಯಾದಾನ ಮಾಡುವ ಶಿಕ್ಷಕರ ಅವಿರತ ಶ್ರಮ ದೇಶಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಲಿಂಗಪ್ಪ, ಸದಸ್ಯರಾದ ಅನಂತ ಪದ್ಮನಾಭ, ಶೋಭ ಅನಂತ ಪದ್ಮನಾಭ ಹಾಗೂ ಶಾಲೆಯ ಪ್ರಾಂಶುಪಾಲರಾದ ಎಸ್.ಎಂ.ಸತ್ಯ ಸುಲೋಚನ ಉಪಸ್ಥಿತರಿದ್ದರು.

ಛಾಯಾ ನಂಜಪ್ಪ ಹಾಗೂ ಶಾಲೆಯ ಹಿರಿಯ ಶಿಕ್ಷಕಿ ದೀಪ ಆಂಡ್ರಸನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭ ಓಣಂ ಹಬ್ಬವನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಂಭ್ರಮದಿAದ ಆಚರಿಸಿದರು. ಆಕರ್ಷಕ ಹೂವುಗಳ ರಂಗೋಲಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು.