ಕೂಡಿಗೆ, ಸೆ. ೧೩: ಕುಶಾಲನಗರ ಇಂಡಸ್ಟಿçಯಲ್ ಏರಿಯ ವರ್ಕರ್ಸ್ ಯೂನಿಯನ್ ಆಶ್ರಯದಲ್ಲಿ ಸಿಐಟಿಯುಗೆ ಸೇರ್ಪಡೆ ಸಮಾವೇಶವು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರಿನ ಖಾಸಗಿ ಸಭಾಂಗಣದಲ್ಲಿ ನಡೆಯಿತು.

ಸಿ.ಐ.ಟಿ.ಯು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ವೇತನ ಏರಿಕೆ ಆಗುತ್ತಿಲ್ಲ. ಸರಕಾರದ ನಿಗದಿಪಡಿಸಿದ ವೇತನ ದೊರಕಬೇಕಿದೆ ಎಂದರು.

ಸಿಐಟಿಯು ಜಿಲ್ಲಾ ಖಜಾಂಚಿ ಎನ್.ಡಿ ಕುಟ್ಟಪ್ಪನ್ ಮಾತನಾಡಿ, ನಮ್ಮ ಬೇಡಿಕೆಗಳು, ಹೋರಾಟಗಳಿಗೆ ಸಮರ್ಪಕ ಫಲ ದೊರೆಯುತ್ತಿಲ್ಲ. ನಮ್ಮ ಮೂಲಭೂತ ಹಕ್ಕುಗಳಿಗಾಗಿ ನಾವು ಸದಾ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆಂದರು. .

ಇಂಡಸ್ಟಿçಯಲ್ ಏರಿಯ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಮಂಜು ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೂಡ್ಲೂರು ಕೈಗಾರಿಕಾ ಕೇಂದ್ರ ಎಸ್.ಎಲ್.ಎನ್. ಕಾಫಿ, ಓಲಂ ಕಾಫಿ, ಸಿ.ಪಿ. ಕಾಫಿ ಎಕ್ಸ್ಪೋರ್ಟ್ನ ಮಹಿಳಾ ಕಾರ್ಮಿಕ ಸಂಘಟನೆ ಪ್ರಮುಖರಾದ ಲೀಲಾವತಿ, ಗೌರಮ್ಮ, ಶಾಂತ, ಇಂದ್ರಮ್ಮ, ಪೂರ್ಣಿಮಾ, ಮಮತಾ ಸೇರಿದಂತೆ ಪದಾಧಿಕಾರಿಗಳು ಇದ್ದರು. ಮೂರು ಸಂಘಟನೆಗಳು ಸೇರಿ ಒಂದು ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಯಿತು.