ಮಡಿಕೇರಿ, ಸೆ.೧೨ : ರಾಜ್ಯ ಸರಕಾರದ ವತಿಯಿಂದ ನಡೆಯುವ ಜಾತಿ ಜನಗಣತಿ ಸಂದರ್ಭ ನಗಣ್ಯ ಆ್ಯನಿಮಿಸ್ಟೆಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಜಾತಿ, ಭಾಷೆ, ಮಾತೃಭಾಷೆ ಮತ್ತು ಧರ್ಮದ ಕಾಲಂ ನಲ್ಲಿ ಸರ್ವ ಕೊಡವರು “ಕೊಡವ” ಎಂದು ನಮೂದಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಇದೇ ಸೆ.೨೨ ರಿಂದ ನಡೆಸುವ ಜಾತಿ ಜನಗಣತಿಯಲ್ಲಿ ಉತ್ತಮ ನಾಳೆಗಾಗಿ ಮತ್ತು ಕೊಡವರ ಸಮಗ್ರ ಸಬಲೀಕರಣಕ್ಕಾಗಿ “ಕೊಡವ” ಎಂದು ನಮೂದಿಸುವುದು ಅತ್ಯವಶ್ಯಕವಾಗಿದೆ. ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಹಕ್ಕುಗಳು ಖಾತ್ರಿಯಾಗಬೇಕಾದಲ್ಲಿ ಕೊಡವ ಎಂದು ದಾಖಲಿಸಿ ಎಂದು ಕರೆ ನೀಡಿದ್ದಾರೆ.

ಕೊಡವರು ಯಾವುದೇ ಪಂಥಗಳು ಅಥವಾ ಉಪಪಂಗಡಗಳಿಲ್ಲದ ಏಕೈಕ, ಏಕ-ಜನಾಂಗೀಯ ಗುಂಪಾಗಿದ್ದಾರೆ. ವಿಭಿನ್ನ ಗುರುತು, ಭಾಷೆ ಮತ್ತು ಸಂಸ್ಕöÈತಿಯನ್ನು ಹೊಂದಿರುವ ವಿಶಿಷ್ಟ ಜನಾಂಗೀಯ ಸಮುದಾಯವಾಗಿದ್ದಾರೆ. ಜನಗಣತಿದಾರರು ನಿಮ್ಮ ಮನೆ ಮನೆಗೆ ಭೇಟಿ ನೀಡುವಾಗ, ಪ್ರತಿಯೊಬ್ಬ ಕೊಡವರೂ ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ “ಕೊಡವ” ಎಂದೇ ನಮೂದಿಸಬೇಕು. ಇದು ರಾಜಕೀಯ, ಆರ್ಥಿಕ ಸಬಲೀಕರಣ ಮತ್ತು ಸಾಂಸ್ಕöÈತಿಕ, ಜಾನಪದ ಉನ್ನತಿಯನ್ನು ಸಾಧಿಸಲು ನಿರ್ಣಾಯಕವಾಗಿದೆ. ಅಲ್ಲದೆ ನಮ್ಮ ಸೂಕ್ಷö್ಮತೀಸೂಕ್ಷö್ಮ ಡೇಟಾವನ್ನು ದೃಢೀಕರಿಸುತ್ತದೆ.

ಈ ಪ್ರಕ್ರಿಯೆಯು ಕೇಂದ್ರ ಸರಕಾರದ ೨೦೨೬-೨೭ ರ ರಾಷ್ಟಿçÃಯ ಜನಸಂಖ್ಯಾ ಗಣತಿಯ ಪ್ರಸ್ತಾವಿತ ಅನುಷ್ಠಾನಕ್ಕೆ ಮತ್ತು ಅಖಿಲ ಭಾರತ ಜಾತಿ ಗಣತಿಗೆ ಆಧಾರವಾಗಿ ಸಾಂವಿಧಾನಿಕ ಖಾತರಿಯನ್ನು ಪಡೆಯಲು ಮತ್ತಷ್ಟು ಆಧಾರವಾಗಲಿದೆ ಎಂದು ಎನ್.ಯು.ನಾಚಪ್ಪ ಅಭಿಪ್ರಾಯಪಟ್ಟಿದ್ದಾರೆ.