ಮಡಿಕೇರಿ, ಸೆ. ೧೨: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ೨೦೨೪-೨೫ನೇ ಸಾಲಿನಲ್ಲಿ ಒಟ್ಟಾರೆ ರೂ. ೧೦೭.೦೬ ಲಕ್ಷದಷ್ಟು ಒಟ್ಟು ಲಾಭಗಳಿಸಿದ್ದು, ಆದಾಯ ತೆರಿಗೆ ಮತ್ತು ಇತರ ಬಾಪ್ತುಗಳಿಗೆ ಕಾದಿರಿಸಿದ ನಂತರ ರೂ. ೪೧.೨೨ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಜಿ.ಎಂ. ಸತೀಶ್ ಪೈ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬ್ಯಾಂಕ್ ಪ್ರಸ್ತುತ ೨೪೯೬ ಮಂದಿ ಸದಸ್ಯರನ್ನು ಹೊಂದಿದೆ. ಬ್ಯಾಂಕ್‌ನ ಅಧಿಕೃತ ಪಾಲು ಬಂಡವಾಳ ರೂ. ೧೮೦.೭೪ ಲಕ್ಷ ಸಂಗ್ರಹಗೊAಡಿದೆ. ಹಾಗೂ ಎ ತರಗತಿ ಪಾಲು ಒಂದರ ಮುಖಬೆಲೆ ರೂ. ೧,೦೦೦ ಆಗಿದೆ.
ಬ್ಯಾಂಕ್‌ನ ದುಡಿಯುವ ಬಂಡವಾಳವು ರೂ. ೫೪೪೧.೦೦ ಲಕ್ಷ ಆಗಿದ್ದು, ಕಳೆದ ಸಾಲಿಗಿಂತ ರೂ. ೧೨೬.೨೩ ಲಕ್ಷದಷ್ಟು ಅಧಿಕಗೊಂಡಿದೆ. ಬ್ಯಾಂಕ್ ಪ್ರಸ್ತುತ ರೂ. ೪೮೬೭.೬೮ ಲಕ್ಷದಷ್ಟು ವಿವಿಧ ಠೇವಣಾತಿಗಳನ್ನು ಹೊಂದಿದ್ದು, ಕಳೆದ ಸಾಲಿಗಿಂತ ರೂ. ೩೯.೨೫ ಲಕ್ಷದಷ್ಟು ಏರಿಕೆಯಾಗಿದೆ. ಅಲ್ಲದೆ ತಾನು ಹೊಂದಿರುವ ಠೇವಣಾತಿಗಳ ಮೇಲೆ ಪೂರ್ಣ ಪ್ರಮಾಣದಲ್ಲಿ ಡಿಪಾಜಿಟ್ ಇನ್ಯೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್‌ನಲ್ಲಿ ವಿಮೆ ಇಳಿಸಲಾಗಿದೆ. ಬ್ಯಾಂಕ್ ತನ್ನ ದ್ರವ್ಯಾಸ್ಥಿಯನ್ನು ನಿಗದಿತ ಮಿತಿಯೊಳಗೆ ಕಾಯ್ದುಕೊಂಡು ಬರುತ್ತಿದೆ.
ಸುಮಾರು ರೂ. ೬೭೪.೯೧ ಲಕ್ಷದಷ್ಟು ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ವಿನಿಯೋಗಿಸಲಾಗಿದ್ದು, ಸರಕಾರಿ ಭದ್ರತಾ ಪತ್ರದಲ್ಲಿ ರೂ. ೧೪೩೪.೩೦ ಲಕ್ಷದಷ್ಟು ಧನ ವಿನಿಯೋಗಿಸಲಾಗಿದೆ. ಬ್ಯಾಂಕ್ ಗ್ರಾಹಕರಿಗಳಿಗೆ ರೂ. ೨೯೭೭.೯೦ ಲಕ್ಷದಷ್ಟು ವಿವಿಧ ರೂಪದ ಸಾಲಗಳನ್ನು ನೀಡಿದ್ದು ಈ ಪೈಕಿ ರೂ. ೬೦೦.೧೧ ಲಕ್ಷ ಜಾಮೀನು ಸಾಲ ಹಾಗೂ ರೂ. ೮೭೨.೫೦ ಲಕ್ಷ ಮನೆ ಆಧಾರ ಸಾಲ ಹಾಗೂ ರೂ. ೧೨೫೬.೨೯ ಲಕ್ಷದಷ್ಟು ಬೆಲೆಯ ಚಿನ್ನಾಭರಣಗಳ ಈಡಿನ ಮೂಲಕ ಸಾಲ ನೀಡಿದ್ದು, ಒಟ್ಟು ಸಾಲ ನೀಡಿಕೆಯಲ್ಲಿ ಅನುತ್ಪಾದಕ ಆಸ್ತಿಯ (ಎನ್‌ಪಿಎ) ಪ್ರಮಾಣವು ರೂ. ೬೩.೨೭ ಲಕ್ಷವಾಗಿದೆ. ಬ್ಯಾಂಕ್ ಆರ್.ಟಿ.ಐ. ನಿಯಮದಂತೆ ರೂ. ೨೩೫೬.೭೭ ಲಕ್ಷದಷ್ಟು ಸಾಲವನ್ನು ಆದ್ಯತಾ ವಲಯಕ್ಕೆ ನೀಡಿದೆ. ಪ್ರಸ್ತುತ ಸಾಲಿನಲ್ಲಿ ಒಟ್ಟು ರೂ. ೫೧೨.೮೩ ಲಕ್ಷದಷ್ಟು ವಹಿವಾಟು ನಡೆಸಿದೆ ಎಂದರು.
ಬ್ಯಾAಕ್ ತನ್ನ ಜಿ.ಟಿ. ರಸ್ತೆ ಶಾಖೆಯಲ್ಲಿ ರೂ. ೧೦೯.೦೨ ಲಕ್ಷದಷ್ಟು ಒಟ್ಟು ವ್ಯವಹಾರ ನಡೆಸಿದ್ದು, ರೂ. ೨೧.೦೦ ಲಕ್ಷದಷ್ಟು ಪ್ರಸ್ತುತ ಲಾಭಗಳಿಸಿದೆ. ಪ್ರಸ್ತುತ ಸಾಲಿನಲ್ಲಿ ಶಾಖೆ ರೂ. ೧೦೨೮.೧೭ ಲಕ್ಷ ಠೇವಣಿ ಹೊಂದಿದ್ದು, ರೂ. ೬೩೪.೮೪ ಲಕ್ಷದಷ್ಟು ವಿವಿಧ ಸಾಲ ನೀಡಿದೆ. ಹಾಗೂ ಸದಸ್ಯರುಗಳಿಗೆ ಬ್ಯಾಂಕ್‌ನ ಸೌಲಭ್ಯ ನೀಡುವುದರೊಂದಿಗೆ ಶಾಖೆಯ ವ್ಯವಹಾರಗಳನ್ನು ವೃದ್ಧಿಸಿ, ಹೆಚ್ಚಿನ ಲಾಭದಾಯಕವಾಗಿ ಅಭಿವೃದ್ಧಿಯಲ್ಲಿ ಸಾಗುತ್ತಿದೆ.
ಬ್ಯಾಂಕ್ ತನ್ನ ಗ್ರಾಹಕರಿಗೆ ವಿವಿಧ ರೂಪದ ಸಾಲಗಳಾದ ಜಾಮೀನು ಸಾಲ, ಆಭರಣ ಸಾಲ, ಮನೆ ಖರೀದಿ ಸಾಲ, ವಾಹನ ಖರೀದಿ ಸಾಲ, ಪಿಗ್ಮಿ ಅಲ್ಪಾವಧಿ ಸಾಲಗಳನ್ನು ನೀಡುತ್ತಿದ್ದು, ಪ್ರಸ್ತುತ ಸಾಲಿನಲ್ಲಿ ಶೇ. ೯೮.೩೧ ರಷ್ಟು ಸಾಲ ವಸೂಲಾತಿ ಮಾಡಿದೆ.
ಬ್ಯಾಂಕ್‌ನಲ್ಲಿಡುವ ಠೇವಣಾತಿಗಳಿಗೆ ಕನಿಷ್ಟ ಶೇ. ೨:೦೦ ರಿಂದ ಗರಿಷ್ಠ ಶೇ. ೭:೨೫ ರವರೆಗೆ ಆಕರ್ಷಕ ಬಡ್ಡಿ ನೀಡಲಾಗುತ್ತಿದ್ದು, ಹಿರಿಯ ನಾಗರಿಕರಿಗೆ, ಒಂದು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟು ಇಡುವಂತಹ ಠೇವಣಿಗಳಿಗೆ ಶೇ. ೦:೫೦ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ. ಬ್ಯಾಂಕ್‌ನ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಪದವಿ ತರಗತಿಗಳಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಬ್ಯಾಂಕ್‌ನ ವ್ಯವಹಾರ ಗಣನೀಯವಾಗಿ ನಡೆಯುತ್ತಿದ್ದು ಲಾಭದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬAದಿದೆ. ಬ್ಯಾಂಕ್‌ನಲ್ಲಿ ಪ್ರಸ್ತುತ ಮರಣೋತ್ತರ ಸಹಾಯಧನ ನಿಧಿ ಯೋಜನೆ ಜಾರಿಯಲ್ಲಿದ್ದು ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರುಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಬ್ಯಾಂಕ್‌ನ ಕಟ್ಟಡದ ಮೇಲಂತಸ್ತಿನಲ್ಲಿ ಅಂದಾಜು ರೂ. ೧೨ ಲಕ್ಷಕ್ಕೆ ಒಳಪಟ್ಟು ನೂತನ ಸಭಾಂಗಣವನ್ನು ನಿರ್ಮಿಸಲಾಗಿದೆ ಹಾಗೂ ಬ್ಯಾಂಕ್‌ನ ಪ್ರಧಾನ ಕಚೇರಿ ಮತ್ತು ಶಾಖೆಯ ಕಚೇರಿಯಲ್ಲಿ ಅಳವಡಿಸಲಾದ ಸಿಸಿ ಕ್ಯಾಮಾರಗಳನ್ನು ನವೀಕರಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ಯಾಂಕ್ ೨೦೨೩-೨೪ನೇ ಸಾಲಿನ ವರ್ಷಾಂತ್ಯಕ್ಕೆ ರೂ. ೧೬೮.೨೯ ಲಕ್ಷ ಎನ್.ಪಿ.ಎ. ಇದ್ದು ಶೇ. ೫.೯೧ ರಷ್ಟು ಹೊಂದಿತ್ತು. ಆಡಳಿತ ಮಂಡಳಿಯ ಮಾರ್ಗದರ್ಶನದೊಂದಿಗೆ ಸಿಬ್ಬಂದಿಗಳ ಅವಿರತ ಪ್ರಯತ್ನದಿಂದ ೨೦೨೪-೨೫ನೇ ಸಾಲಿನ ಎನ್.ಪಿ.ಎ. ಪ್ರಮಾಣವನ್ನು ರೂ. ೧೦೩.೦೨ ಲಕ್ಷಕ್ಕೆ ಇಳಿಸಿ ಶೇ. ೩.೪೫ ರಷ್ಟಿದ್ದು ಆರ್.ಬಿ.ಐ.ನ ಮಿತಿಯೊಳಗಿದೆ ಎಂದು ತಿಳಿಸಿದರು. ೨೦೨೪-೨೫ನೇ ಸಾಲಿನ ಮಹಾಸಭೆಯನ್ನು ಮಡಿಕೇರಿ ಕೊಡವ ಸಮಾಜದಲ್ಲಿ ತಾ. ೧೩ ರಂದು ಏರ್ಪಡಿಸಲಾಗಿದೆ. ಸದಸ್ಯರು ಹೊಂದಿರಬೇಕಾದ ಕನಿಷ್ಟ ಪಾಲು ಹಣ ರೂ. ೧ ಸಾವಿರ ಆಗಿದ್ದು, ಸದಸ್ಯರು ಹೊಂದಿರಬಹುದಾದ ಕನಿಷ್ಟ ಠೇವಣಿ ರೂ. ೨,೫೦೦ ಆಗಿರುತ್ತದೆ. ಸದಸ್ಯರು ತನ್ನ ಚಾಲ್ತಿ ಖಾತೆ ಅಥವಾ ಉಳಿತಾಯ ಖಾತೆಗಳಲ್ಲಿ ೨ ವಾರ್ಷಿಕ ವ್ಯವಹಾರಗಳನ್ನು ನಡೆಸಬಹುದಾಗಿದೆ.
ಸದಸ್ಯರು ಹಿಂದಿನ ೫ ವಾರ್ಷಿಕ ಮಹಾಸಭೆಗಳ ಪೈಕಿ ಕನಿಷ್ಟ ೨ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು ಅಥವಾ ೨ ನಿರಂತರ ಸಹಕಾರ ವರ್ಷಗಳಲ್ಲಿ ಮೇಲಿನ ಯಾವುದೇ ರೀತಿಯ ವ್ಯವಹಾರ ನಡೆಸದಿದ್ದಲ್ಲಿ ಸದಸ್ಯರು ಮತದಾನದ ಹಕ್ಕನ್ನು ೧ ವರ್ಷದವರೆಗೆ ಸಾಮಾನ್ಯ ಸಭೆ ಮತ್ತು ನಿರ್ದೇಶಕರ ಚುನಾವಣೆಯಲ್ಲೂ ಸ್ಪರ್ಧಿಸುವ ಹಕ್ಕನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸತೀಶ್ ಪೈ ಮಾಹಿತಿಯಿತ್ತರು.
ಗೋಷ್ಠಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ನಾಗೇಶ್, ನಿರ್ದೇಶಕರುಗಳಾದ ಬಿ.ಕೆ. ಜಗದೀಶ್, ಬಿ.ಎಂ. ರಾಜೇಶ್, ಬಾಲಕೃಷ್ಣ, ಗಿರೀಶ್ ಉಪಸ್ಥಿತರಿದ್ದರು.