ಮಡಿಕೇರಿ, ಸೆ. ೧೨: ಒಗ್ಗಟ್ಟಿನಿಂದ ಪಕ್ಷ ಬಲಪಡಿಸುವ ಮೂಲಕ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ತಂದುಕೊಡಲು ಶ್ರಮಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ. ರಮೇಶ್ ಕರೆ ನೀಡಿದ್ದಾರೆ.

ಚೆಂಬು ಗ್ರಾಮದ ಆನ್ಯಾಳದಲ್ಲಿ ನಡೆದ ಚೆಂಬು ವಲಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಯಕರ್ತರ ಅಹವಾಲುಗಳನ್ನು ಶಾಸಕರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ಗಮನಕ್ಕೆ ತರುವುದಾಗಿ ತಿಳಿಸಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ರವಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಪ್ರಮುಖರಾದ ವಾಸು ರೈ, ಶ್ರೀಧರ್, ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯರುಗಳಾದ ಗಿರೀಶ್ ಹೊಸೂರು, ಕುಸುಮ ಯೋಗೀಶ್ವರ್, ಶಶಿಕಲ ಕಟ್ಟಪ್ಪಾರೆ, ಬೂತ್ ಅಧ್ಯಕ್ಷರುಗಳಾದ ಪಕೀರ ಮಂಗಳಪಾರೆ, ಚೆನ್ನಪ್ಪ ನಡುಬೆಟ್ಟು, ರಘುನಾಥ್ ಬಾಲಂಬಿ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಮಂಗಳಪಾರೆ, ಸಮಿತಿ ಸದಸ್ಯರುಗಳಾದ ನವೀನ್ ರಾಮಕಜೆ, ಜಯಪ್ರಕಾಶ್ ಪನ್ನೇಡ್ಕರ್ ಕೊಪ್ಪದ, ಸುಧಾಕರ ಕೊಪ್ಪದ, ಭುವನೇಶ್ವರ ಮತ್ತಿತರ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಇದೇ ಸಂದರ್ಭ ಕಾರ್ಯಕರ್ತರು ತಮ್ಮ ಅಹವಾಲುಗಳನ್ನು ಸಭೆಯಲ್ಲಿ ಮಂಡಿಸಿದರು.