ಸೋಮವಾರಪೇಟೆ, ಸೆ. ೧೨: ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಶಿಕ್ಷಕ ದಿನಾಚರಣೆಯನ್ನು ಒಕ್ಕಲಿಗರ ಸಮುದಾಯಭವನದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ವೇದಿಕೆ ಅಧ್ಯಕ್ಷೆ ಚಂದ್ರಿಕಾ ಕುಮಾರ್ ಉದ್ಘಾಟಿಸಿದರು. ಇದೇ ಸಂದರ್ಭ ನಿವೃತ್ತ ಶಿಕ್ಷಕಿಯರಾದ ಹೆಚ್.ಎನ್. ತಂಗಮ್ಮ, ತಿಲೋತ್ತಮೆ ನಂದಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.

ಗೌರಿ-ಗಣೇಶ ಹಬ್ಬದ ಪ್ರಯುಕ್ತ ವೇದಿಕೆಯ ಸದಸ್ಯರಿಗೆ ಶ್ರೀಗೌರಿ ವಸ್ತಾçಲಂಕಾರ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಪ್ರಥಮ ಬಹುಮಾನ ಪಡೆದರು.

ವೇದಿಕೆಯ ಮಾಜಿ ಅಧ್ಯಕ್ಷೆ ಕವಿತಾ ವಿರೂಪಾಕ್ಷ ದ್ವಿತೀಯ ಹಾಗೂ ನಂದಿನಿ ಗೋಪಾಲ್, ಅರುಣಾ ಮುತ್ತಣ್ಣ ತೃತೀಯ ಸ್ಥಾನ ಗಳಿಸಿದರು. ವೇದಿಕೆಯ ಉಪಾಧ್ಯಕ್ಷೆ ಹಂಸ ಭರತ್, ಕಾರ್ಯದರ್ಶಿ ಅನಿತಾ ಆನಂದ್, ಖಜಾಂಚಿ ಜಾನ್ಸಿ ಗಿರೀಶ್ ಇದ್ದರು.