ಸುಂಟಿಕೊಪ್ಪ, ಸೆ. ೧೨: ೭ನೇ ಹೊಸಕೋಟೆ ಸಂತ ಸೆಬಾಸ್ಟೀನ್ ದೇವಾಲಯದಲ್ಲಿ ಕನ್ಯಾಮಾತೆ ಮರಿಯಮ್ಮನವರ ಜನ್ಮ ದಿನೋತ್ಸವದ ಅಂಗವಾಗಿ ಬಲಿ ಪೂಜೆಯನ್ನು ನೇರವೇರಿಸಲಾಗಿದ್ದು, ಆಗಮಿಸಿದ್ದ ನೂರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಮಾತೆಯ ಜಯಂತಿಯ ಸಂಭ್ರಮಕ್ಕೆ ಸಾಕ್ಷಿಯಾದರು. ಸಂತ ಸೆಬಾಸ್ಟೀನ್ ದೇವಾಲಯದ ಧರ್ಮಗುರುಗಳಾದ ರೇ.ಫಾ ವಿ.ಎಂ.ಮಾಣಿ ಹಾಗೂ ಕೊಪ್ಪ ಸಂತಮೇರಿ ಸೆಮಿನಿರಿ ಸಿಎಂಐ ರೆಕ್ಟರ್ ರೇ.ಫಾ.ನೀಬಿನ್ ಕನ್ಯಾಮಾತೆ ಮರಿಯಮ್ಮನವರ ಜನ್ಮದಿನೋತ್ಸವದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿ ಪೂಜೆಯನ್ನು ಸಮರ್ಪಿಸಿದರು. ದೇವಾಲಯದ ಧರ್ಮ ಗುರುಗಳು, ಕನ್ಯಾಸ್ತಿçÃಯರು ಹಾಗೂ ಕ್ರೆöÊಸ್ತಭಕ್ತಾದಿಗಳು ಮಾತೆ ಬೊಂಬಿನ ಅವರ ಪ್ರತಿಮೆಯನ್ನು ಹಿಡಿದುಕೊಂಡು ದೇವಾಲಯದ ಆವರಣದಲ್ಲಿ ಜಪಸರ ಪ್ರಾರ್ಥನೆಯನ್ನು ನೇರವೇರಿಸುವ ಮೂಲಕ ಮೊಂತಿಫೆಸ್ಟ್ನ ಆಶೀರ್ವಚನವನ್ನು ನೀಡಿದರು. ಭಕ್ತಾದಿಗಳು ಪರಸ್ಪರ ಮಾತೆ ಮರಿಯಮ್ಮನವರ ಜನ್ಮದಿನದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.