ಮಡಿಕೇರಿ, ಸೆ. ೪: ಕೊಡಗು ಜಿಲ್ಲೆಯ ಪತ್ರಿಕಾ ವಿತರಕರ ಸಂಘÀÀದಲ್ಲಿ ಕ್ಷೇಮಾಭಿವೃದ್ಧಿ ಸ್ಥಾಪಿಸಲು ಶಕ್ತಿ ಪತ್ರಿಕಾ ಸಂಸ್ಥೆ ಒಂದು ಲಕ್ಷ ರೂಪಾಯಿ ದೇಣಿಗೆ ಪ್ರಕಟಿಸಿತು.

ಕೊಡಗು ಪತ್ರಕರ್ತರ ಸಂಘ ಹಾಗೂ ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕದ ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅವರು ಸಂಸ್ಥೆಯ ಪರವಾಗಿ ದೇಣಿಗೆ ಮೊತ್ತವನ್ನು ಪ್ರಕಟಿಸಿದರಲ್ಲದೆ, ಸಂಘ ಈ ಮೊತ್ತವನ್ನು ಹೆಚ್ಚಿಸಿ ನಿರಖು ಠೇವಣಿ ಇಟ್ಟು ಸದ್ಬಳಕೆ ಮಾಡುವಂತೆ ಕಿವಿಮಾತು ಹೇಳಿದರು.

ಕೆಲ ದಶಕಗಳ ಹಿಂದೆ ಮನೆ ಮನೆಗೆ ನಡೆದುಕೊಂಡು ಹೋಗಿ ಪತ್ರಿಕೆ ವಿತರಣೆಯನ್ನು ಪತ್ರಿಕಾ ವಿತರಕರು ಮಾಡುತ್ತಿದ್ದರಾದÀರೂ ಇಂದು ದ್ವಿಚಕ್ರ ವಾಹನಗಳು ವಿತರಕರ ನೆರವಿಗೆ ಬಂದಿವೆ ಎನ್ನುವುದನ್ನು ಬಿಟ್ಟಲ್ಲಿ ಉಳಿದೆಲ್ಲ ಕೆಲಸ ಕಾರ್ಯಗಳು ಹಿಂದಿನAತೆಯೇ ನಡೆದುಕೊಂಡು ಬರುತ್ತಿದೆ. ಯಾವುದೇ ಸಂಕಷ್ಟದ ಅವಧಿಯಲ್ಲಿ ಜಿಲ್ಲೆಯ ಪತ್ರಿಕಾ ವಿತರಕರು ತಮ್ಮ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದ್ದಾರೆ. ಪತ್ರಿಕೆ ವಿತರಣೆ ಎನ್ನುವುದÀನ್ನು ಕೇವಲ ಆರ್ಥಿಕ ದೃಷ್ಟಿಯಿಂದ ನೋಡುವುದರ ಬದಲಾಗಿ, ಪತ್ರಿಕೆಯ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಮಾಡುತ್ತಿರುವುದರಿಂದ ಇದು ಸಾಧ್ಯವಾಗಿದೆಯೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಮುದ್ರಣ ಮಾಧ್ಯಮ ಗಟ್ಟಿಮುಟ್ಟಾಗಿದೆ

ದೃಶ್ಯ ಮಾಧ್ಯಮಗಳ ಭರಾಟೆಯ ನಡುವೆ ಮುದ್ರಣ ಮಾಧ್ಯಮ ಮರೆಯಾಗುವ ಆತಂಕ ಸೃಷ್ಟಿಯಾಗಿತ್ತು. ಆದರೆ, ಪತ್ರಿಕಾ ಮಾಧ್ಯಮ ಗಟ್ಟಿಯಾಗಿಯೇ ಮುಂದುವರೆದಿದೆ. ಇಂದಿನ ಸಾಮಾಜಿಕ ಜಾಲತಾಣಗಳಲ್ಲಿನ ವಿಚಾರಗಳು ಕೇವಲ ತಾತ್ಕಾಲಿಕ, ನೋಡಿ ಮರೆತುಹೋಗುವಂತದ್ದು. ಆದರೆ, ಪತ್ರಿಕೆಗಳಲ್ಲಿನ ವಿಚಾರಗಳು ಶಾಶ್ವತ ಮತ್ತು ಸಮಾಜದ ಪರಿಣಾಮಗಳನ್ನು ಬೀರುವಂತದ್ದೆನ್ನುವುದನ್ನು ಜನ ಅರ್ಥೈಸಿಕೊಂಡಿದ್ದಾರೆAದು ಮುಕ್ತವಾಗಿ ನುಡಿದ ಅವರು, ಒಂದು ಪತ್ರಿಕೆಗೆ ಓದುಗರು, ಏಜೆಂಟರು, ವಿತರಕರು, ಜಾಹೀರಾತುದಾರರು ಮತ್ತು ಸಿಬ್ಬಂದಿ ವರ್ಗ ಆಧಾರ ಸ್ತಂಭವಾಗಿರುವುದಾಗಿ ಅಭಿಪ್ರಾಯಪಟ್ಟರು.

ಓದು ನಿಲ್ಲಿಸಿದಲ್ಲಿ ಸಮಾಜದ ಮೇಲೆ ದುಷ್ಪರಿಣಾಮ

ಯಾವುದೇ ಓದುಗ ತನ್ನ ಪತ್ರಿಕಾ ಓದನ್ನು ನಿಲ್ಲಿಸಿದ ಎಂದಲ್ಲಿ, ಅದು ಯಾವುದೋ ಒಂದು ವಿಧದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇಂದಿನ ಯುವ ಸಮೂಹಕ್ಕೆ ಓದಿನ ಬಗ್ಗೆ ತಾಳ್ಮೆ ಇಲ್ಲವೆಂದು ಅಭಿಪ್ರಾಯಿಸಿ, ಜನರಲ್ಲಿ ಓದಿನ ಬಗ್ಗೆ ಪ್ರೇರಣೆ ನೀಡುವ, ಮನವೊಲಿಸುವ ಕಾರ್ಯ ಎಲ್ಲರಿಂದ ನಡೆಯಬೇಕಾಗಿದೆಯೆಂದು ತಿಳಿಸಿದರು.

ಅಂಚೆ ಕಚೇರಿಯಲ್ಲಿ ಕೇವಲ ೫೦೦ ರೂಪಾಯಿಗೆ ೧೦ ಲಕ್ಷ ರೂಪಾಯಿ ಅಪಘಾತ ವಿಮೆ ಇದ್ದು ಅದನ್ನು ಬಳಸಿಕೊಳ್ಳುವುದು ೪ ಮೊದಲ ಪುಟದಿಂದ)

ಉಚಿತ ಎಂದು ಅವರು ಸಲಹೆ ನೀಡಿದರು. ಮಾಧ್ಯಮ ಕ್ಷೇತ್ರದಲ್ಲಿ ಪತ್ರಿಕೆಗಳೇ ವಿತರಕರನ್ನು ನೇಮಿಸಿ ಹೆಚ್ಚಿನ ಉದ್ಯೋಗ ಕಲ್ಪಿಸುತ್ತಿದೆ ಎಂದು ಚಿದ್ವಿಲಾಸ್ ವಿವರಿಸಿದರು.

ಪ್ರಾಸ್ತಾವಿಕವಾಗಿ ಕೊಡಗು ಪತ್ರಿಕಾ ಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಮಾತನಾಡಿ, ಜನನಾಡಿಯಾಗಿ ಕಾರ್ಯನಿರ್ವಹಿಸುವವರೇ ಪತ್ರಿಕಾ ವಿತರಕರು; ಹತ್ತು ಹಲವು ಸಂಕಷ್ಟಗಳ ನಡುವೆಯೂ ವಿತರಕರು, ಪತ್ರಿಕೆಯನ್ನು ಮನೆ ಬಾಗಿಲಿಗೆ ವಿತರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಪತ್ರಿಕೆ ಮತ್ತು ಓದುಗರ ನಡುವಿನ ಸಂಪರ್ಕ ಸೇತುವೆಯೇ ವಿತರಕರಾಗಿದ್ದಾರೆಂದು ಬಣ್ಣಿಸಿದ ಅವರು, ಇಂದು ಯಾವುದೇ ಪತ್ರಿಕೆ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ತಲುಪುತ್ತಿದೆ ಎಂದರೆ, ಅದರ ಹಿಂದೆ ವಿತರಕರÀ ಅಪಾರ ಪರಿಶ್ರಮ ಅಡಗಿದೆಯೆಂದು ತಿಳಿಸಿದರು.

ವಿತರಕರ ಭವನ ನಿರ್ಮಾಣವಾಗಲಿ

ಮಳೆ, ಗಾಳಿ ಎನ್ನದೆ ಪತ್ರಿಕಾ ವಿತರಣೆಯಲ್ಲಿ ತೊಡಗಿಸಿಕೊಂಡಿರುವ ವಿತರಕರ ಅನಕೂಲಕ್ಕಾಗಿ ನಗರದಲ್ಲಿ ಪತ್ರಿಕಾ ವಿತರಕರ ಭವನ ನಿರ್ಮಾಣ ಅವಶ್ಯವಾಗಿದೆ. ಇಂತಹ ಭವನ ಇದ್ದಲ್ಲಿ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೆಲಸ ಕಾರ್ಯಗಳನ್ನು, ವಿತರಕರ ಪತ್ರಿಕೆಯ ಕೆಲಸ ಕಾರ್ಯಗಳನ್ನು ಅಲ್ಲಿ ನಡೆಸಲು ಅನುಕೂಲವಾಗುತ್ತದೆಂದು ಅನಿಸಿಕೆ ವ್ಯಕ್ತಪಡಿಸಿದರು.

ಯಾವುದೇ ವೃತ್ತಿಯನ್ನು ಕಡೆಗಣಿಸುವಂತಿಲ್ಲ

ಪ್ರಾಕೃತಿಕ ಏರು ಪೇರುಗಳ ನಡುವೆಯೂ ಪತ್ರಿಕೆ ಮತ್ತು ಓದುಗರ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುವ ವಿತರಕರನ್ನು ಗುರುತಿಸಿ, ಅವರ ಕಾರ್ಯವನ್ನು ಶ್ಲಾಘಿಸುವುದು ಅತ್ಯವಶ್ಯ. ಯಾವುದೇ ವೃತ್ತಿಯನ್ನು ಕಡೆಗಣಿಸುವಂತಿಲ್ಲ. ಮಾಡುವ ಕಾರ್ಯವನ್ನು ನಿಷ್ಠೆ ಮತ್ತು ಪ್ರೀತಿಯಿಂದ ಮಾಡಿದಲ್ಲಿ ಯಶಸ್ಸು ದೊರಕುತ್ತದೆಂದು ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್ ಹೇಳಿದರು.

ಪತ್ರಿಕಾ ವಿತರಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಂಡ ಹಲವರು, ತಮ್ಮ ಬದುಕಿನ ಆರಂಭಿಕ ಕಾಲಘಟ್ಟದಲ್ಲಿ ಪತ್ರಿಕಾ ವಿತರಣೆ ಮಾಡುತ್ತಿದ್ದುದನ್ನು ಸ್ಮರಿಸಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ನಿಧಿಯನ್ನು ಸ್ಥಾಪಿಸಿದಲ್ಲಿ ಅಗತ್ಯ ನೆರÀವು ನೀಡುವುದಾಗಿ ತಿಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಕೊಡಗು ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಮಾತನಾಡಿ, ಕೊಡಗು ಪತ್ರಕರ್ತರ ಸಂಘದಿAದ ೨೦೨೨ ರಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆಯೆಂದು ತಿಳಿಸಿ, ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಕ್ಷೇಮಾಭಿವೃದ್ಧಿ ನಿಧಿಗೆ ಆದÀಷ್ಟು ಶೀಘ್ರ ಚಾಲನೆ ನೀಡಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ನಿವೃತ್ತ ನೌಕರರು ಹಾಗೂ ಪತ್ರಿಕಾ ಓದುಗ ಪಿ.ಎ. ನಾಣಯ್ಯ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ. ಸತೀಶ್ ಉಪಸ್ಥಿತರಿದ್ದರು. ಪತ್ರಿಕಾ ವಿತರಕರಾದ ಸುಂಟಿಕೊಪ್ಪದ ವಸಂತ್ ಮಾತನಾಡಿದರು. ಇದೇ ಸಂದರ್ಭ ಪತ್ರಿಕಾ ವಿತರಕರಿಗೆ ಕಿರುಕಾಣಿಕೆಯನ್ನಿತ್ತು ಗೌರವಿಸಲಾಯಿತು.

ಕೊಡಗು ಪತ್ರಕರ್ತರ ಸಂಘÀದ ಸ್ಥಾಪಕಾಧ್ಯಕ್ಷ ಎಸ್.ಎ. ಮುರಳೀಧರ್ ಪ್ರಾರ್ಥಿಸಿ, ಕೊಡಗು ಪತ್ರಕರ್ತರ ಸಂಘÀದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿದರು. ಸಂಘದ ಸದಸ್ಯರಾದ ಪಿ.ಎಂ .ರವಿ ಕಾರ್ಯಕ್ರಮ ನಿರೂಪಿಸಿ, ಸಂಘದ ನಿರ್ದೇಶಕ ಅರುಣ್ ಕೂರ್ಗ್ ವಂದಿಸಿದರ