ಮಡಿಕೇರಿ, ಸೆ. ೪: ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ೧೭ ಶಿಕ್ಷಕರುಗಳು ಭಾಜನರಾಗಿದ್ದಾರೆ.
ಮಡಿಕೇರಿ ತಾಲೂಕಿನ ಮೊಣಕಾಲ್ಮುರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಆರ್. ಶಾಲಿನಿ, ಅರೆಕಾಡು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಎ.ಡಿ. ಮೀನಾಕ್ಷಿ, ಹಾಕತ್ತೂರು ಸರಕಾರಿ ಪ್ರೌಢಶಾಲಾ ಶಿಕ್ಷಕಿ ಎಂ. ವನಜಾ, ಸೋಮವಾರಪೇಟೆ ತಾಲೂಕಿನ ಬಡುಬನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ವಿ. ಜಾನ್ಸಿ, ಕೂಡಿಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್.ಎ. ಯೋಗೇಶ್, ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಮುಖ್ಯ ಶಿಕ್ಷಕ ಎಂ.ಎಸ್. ಅಬ್ದುಲ್ ರಬ್, ವೀರಾಜಪೇಟೆ ತಾಲೂಕಿನ ಎಮ್ಮೆಗುಂಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಎ.ಕೆ. ಮಾಚಮ್ಮ, ಚೆನ್ನಂಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಕೆ. ಸುಶಾ, ದೇವಣಗೇರಿ ಬಿ.ಸಿ. ಪ್ರೌಢಶಾಲೆ ಮುಖ್ಯ ಶಿಕ್ಷಕ ಹೆಚ್.ಡಿ. ಲೋಕೇಶ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಖಾಸಗಿ ಶಾಲಾ ವಿಭಾಗಕ್ಕೆ ಕೊಡಮಾಡುವ ಪ್ರಶಸ್ತಿಗೆ ಮಡಿಕೇರಿ ಸಂತ ಮೈಕಲರ ಶಾಲೆಯ ರೆಜಿನಾ ವಿನ್ಸೆಂಟ್, ೪ಆರನೆಮೊದಲ ಪುಟದಿಂದ)
ಕ್ರೆಸೆAಟ್ ಶಾಲೆಯ ಟಿ.ಇ. ಸುಲ್ಹತ್, ವೀರಾಜ ಪೇಟೆ ಕಾವೇರಿ ಶಾಲೆಯ ಬಿ.ಎಸ್. ಸುದೇಶ್, ಕುಶಾಲನಗರ ಕ್ರೆöÊಸ್ಟ್ ಶಾಲೆಯ ಮಾರ್ಗರೆಟ್ ನೆವಿಲ್, ಯೂನಿಕ್ ಅಕಾಡೆಮಿಯ ಎಸ್. ಚೈತ್ರಾ, ಅಮ್ಮತ್ತಿ ಮಾಚಿಮಂಡ ದೇವಯ್ಯ ಮೆಮೋರಿಯಲ್ ಸ್ಕೂಲ್ ಶಿಕ್ಷಕಿ ಝಾನ್ಸಿ ತಮ್ಮಯ್ಯ, ವೀರಾಜಪೇಟೆಯ ಬ್ರೆöÊಟ್ ಪಬ್ಲಿಕ್ ಶಾಲೆಯ ಬಿ.ಆರ್. ಪದ್ಮಾವತಿ, ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ವೇದ ಬೋಪಣ್ಣ ಭಾಜನರಾಗಿದ್ದಾರೆ. ತಾ. ೫ ರಂದು ಬೆಳಗ್ಗೆ ೧೦ ಗಂಟೆಗೆ ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.