ಮಡಿಕೇರಿ, ಸೆ. ೪: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲ್‌ಪೊಳ್ದ್ / ಕೈಲ್ ಮುಹೂರ್ತ ಆಚರಣೆ ಬುಧವಾರದಂದು ಜಿಲ್ಲೆಯಾದ್ಯಂತ ನಡೆಯಿತು.
ಕೃಷಿ ಪರಿಕರಗಳು, ಕೋವಿ - ಕತ್ತಿಯಂತಹ ಆಯುಧಗಳಿಗೆ ಪೂಜೆ, ವಿವಿಧ ಕ್ರೀಡಾಕೂಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಸೇರಿದಂತೆ ಹಿರಿಯರಿಂದ ಕಿರಿಯರಿಗೆ ಬಳುವಳಿಯಾಗಿ ಪರಿಪಾಲನೆಯಾಗುವ ಹಲವು ಸಾಂಪ್ರದಾಯಿಕ ಆಚರಣೆಗಳ ಮೂಲಕ ಕೊಡಗಿನಲ್ಲಿ ಕೈಲ್‌ಪೊಳ್ದ್ನ ಸಂಭ್ರಮ ಜರುಗುತ್ತದೆ.
ಆದರೆ ಪ್ರಸಕ್ತ ವರ್ಷ ಮಳೆಯ ಕಾರಣದಿಂದಾಗಿ ಹೆಚ್ಚಿನ ಸಂಭ್ರಮಾಚರಣೆಗೆ ಅಡಚಣೆಯಾಗಿದ್ದು, ಜನರು ಒಂದಷ್ಟು ನಿರಾಸೆಯನ್ನೂ ಅನುಭವಿಸುವಂತಾಗಿತ್ತು. ಕೆಲವೆಡೆಗಳಲ್ಲಿ ನಿಗದಿತ ಕ್ರೀಡಾಕೂಟಗಳು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಮುಂದೂಡಲಾಯಿತು. ಮಳೆಯ ವಾತಾವರಣದ ನಡುವೆಯೂ ಇನ್ನು ಕೆಲವೆಡೆಗಳಲ್ಲಿ ಸಾರ್ವತ್ರಿಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಮಳೆಯ ಕಾರಣದಿಂದ ಮನೆ - ಮನೆಗಳಲ್ಲಿ, ಐನ್‌ಮನೆಗಳಲ್ಲಿ ಹೆಚ್ಚಾಗಿ ಜನರು ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿದ್ದು, ಸಾಂಪ್ರದಾಯಿಕವಾದ ಪದ್ದತಿಯ ಪರಿಪಾಲನೆಯೊಂದಿಗೆ ಕೊಡಗಿನ ಆಯುಧಪೂಜೆ ಎಂದೇ ಈ ಹಬ್ಬ ಪರಿಗಣಿಸಲ್ಪಟ್ಟಿದೆ.
ವಿಶೇಷವಾಗಿ ಪೊನ್ನಂಪೇಟೆಯಲ್ಲಿ ಅಲ್ಲಿನ ಕೊಡವ ಸಮಾಜ ಹಾಗೂ ಕೊಡವ ಹಿತರಕ್ಷಣಾ ಬಳಗ ಕಿಗ್ಗಟ್ಟ್ನಾಡ್‌ನ ವತಿಯಿಂದ ಕೈಲ್‌ಪೊಳ್ದ್ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು. ಇಲ್ಲಿ ಕೋವಿ - ಕತ್ತಿ ಸೇರಿದಂತೆ ಕೃಷಿ ಪರಿಕರಗಳಿಗೆ ಪೂಜೆಯೊಂದಿಗೆ, ವಾಹನ ಪೂಜೆ ಹಾಗೂ ಪಟ್ಟಣದಲ್ಲಿ ವಾಹನ ಮೆರವಣಿಗೆ ನಡೆಸಲಾಯಿತು. ಕಾಕೋಟುಪರಂಬು, ಮೂರ್ನಾಡುವಿನಲ್ಲಿ ವರ್ಷಂಪ್ರತಿ ಹೆಚ್ಚಿನ ಸಂಭ್ರಮದಿAದ ಜರುಗುತ್ತಿದ್ದ ಆಚರಣೆ ಈ ಬಾರಿ ಮಳೆಯಿಂದಾಗಿ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಬಲಂಬೇರಿಯಲ್ಲಿ ಕ್ರೀಡಾಕೂಟದ ಸಂಭ್ರಮದೊAದಿಗೆ ಹಬ್ಬಾಚರಣೆ ಮಾಡಲಾಗಿದೆ. ಶ್ರೀಮಂಗಲ : ಕೊಡವ ಹಿತರಕ್ಷಣಾ ಬಳಗ ಕ್‌ಗ್ಗಟ್ಟ್ನಾಡ್, ಪೊನ್ನಂಪೇಟೆ ಹಾಗೂ ಪೊನ್ನಂಪೇಟೆ ಕೊಡವ ಸಮಾಜ ಆಶ್ರಯದಲ್ಲಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕೈಲ್‌ಪೊಳ್ದ್ ಹಬ್ಬವನ್ನು ಸಾಂಪ್ರದಾಯಿಕವಾಗಿ ಕೃಷಿ ಪರಿಕರ, ಕೋವಿ, ವಾಹನಗಳಿಗೆ ಪೂಜೆ ಸಲ್ಲಿಸಿ ಆಚರಿಸಲಾಯಿತು.
ಪದ್ಧತಿಯಂತೆ ಕೃಷಿ ಪರಿಕರಗಳಾದ ನೇಗಿಲು, ನೊಗಗಳಿಗೆ ಕೊಡವ ಹಿತರಕ್ಷಣಾ ಬಳಗದ ಆಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಅವರು ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯ ಚೇಲೆ ಧರಿಸಿ ಪೂಜೆ ಸಲ್ಲಿಸಿದರು.
ಕೋವಿ ಕತ್ತಿಗಳಿಗೆ ಆಯುಧ ಪೂಜೆ ಮಾಡಿ "ಕಾರೋಣ"ರಿಗೆ ಹಾಗೂ ಬೇಟೆಯಲ್ಲಿ ಜೊತೆ ಸಾಗುವ ಶ್ವಾನ ಗಳಿಗೆ ಪದ್ಧತಿಯಂತೆ ಪ್ರತ್ಯೇಕವಾಗಿ ಎಡೆ ಇಡಲಾಯಿತು. ವಾಹನಗಳಿಗೆ ಸಾಮೂಹಿಕವಾಗಿ ಹೂವಿನ ಮಾಲೆಯಲ್ಲಿ ಅಲಂಕರಿಸಿ, ಆಯುಧ ಪೂಜೆ ಸಲ್ಲಿಸಿ ಆರತಿ ಬೆಳಗಿ ಪೂಜೆ ಸಲ್ಲಿಸಲಾಯಿತು.
ನಂತರ ಕೋವಿಗಳನ್ನು ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸಿ "ಹುಲಿ -ಹಂದಿ ಬರುವ ದಾರಿಯಿಂದ ಸರಿದು ಬೇಟೆಯಾಡು, ಶತ್ರುವನ್ನು ಕೆಣಕಬೇಡ, ಶತ್ರುವಿನೊಂದಿಗೆ ದಾರಿ ಎದುರು ನಿಂತು ಹೋರಾಡು, ಮಿತ್ರನಿಗೆ ಮಿತ್ರನ್ನಾಗಿ ಇರು, ದೇವರನ್ನು ಮರೆಯಬೇಡ" ಎಂದು ಕೊಡವ ಭಾಷೆಯಲ್ಲಿ ತಪ್ಪಡ್ಕ ಕಟ್ಟಿ ಕೋವಿ ಹಸ್ತಾಂತರಿಸ ಲಾಯಿತು. ಕೋವಿ ಹಸ್ತಾಂತರಿಸಿದ ನಂತರ ಸಾಮೂಹಿಕವಾಗಿ ಆಕಾಶಕ್ಕೆ ಗುಂಡು ಹಾರಿಸಲಾಯಿತು.
ವಾಹನಗಳಿಗೆ ಸಾಮೂಹಿಕ ಆಯುಧ ಪೂಜೆ ಸಲ್ಲಿಸಿ, ಪೊನ್ನಂಪೇಟೆ ಪ
ಟ್ಟಣದ ಮುಖ್ಯರಸ್ತೆಯಲ್ಲಿ ವಾಹನಗಳ ಮೆರವಣಿಗೆ ನಡೆಯಿತು. ಹಬ್ಬದ ವಿಶೇಷ ಊಟೋಪಚಾರದಲ್ಲಿ ಸಾಮೂಹಿಕವಾಗಿ ಎಲ್ಲರೂ ಭಾಗವಹಿಸಿದ್ದರು.
ಈ ಸಂದರ್ಭ ಕೊಡವ ಹಿತರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ, ಉಪಾಧ್ಯಕ್ಷ ಚೆಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್ ದೇವಯ್ಯ, ಖಜಾಂಚಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಅಡ್ಡಂಡ ಡಾಲಿ ಜನಾರ್ಧನ, ಉಳುವಂಗಡ ಲೋಹಿತ್ ಭೀಮಯ್ಯ, ಕೋಟ್ರಂಗಡ ಬಿಪಿನ್, ಅಜ್ಜಿಕುಟ್ಟಿರ ಶುಭಾ, ಅಜ್ಜಿಕುಟ್ಟಿರ ರಂಜಿ, ಚೇಯಂಡ ಶಮ್ಮಿ, ಅಡ್ಡಂಡ ಸುನಿಲ್ ಸೋಮಯ್ಯ, ಚೆಟ್ಟಂಗಡ ವಸಂತ, ಮಲ್ಲಪನೇರ ಕಾರ್ಯಪ್ಪ, ಚೆಟ್ಟಂಗಡ ಉತ್ತಪ್ಪ, ಗಾಂಡAಗಡ ಸವಿನ, ಚೆಕ್ಕೇರ ವಾಣಿ ಸಂಜು, ಬೊಳ್ಳಿಮಾಡ ಧನು ದೇವಯ್ಯ, ಪುಳ್ಳಂಗಡ ಪವನ್, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕ ಕಳ್ಳಿಚಂಡ ಚಿಪ್ಪ ದೇವಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸೇರಿದಂತೆ ಪ್ರಮುಖರು ಹಾಜರಿದ್ದರು.ವೀರಾಜಪೇಟೆ: ವೀರಾಜಪೇಟೆಯಾದ್ಯಂತ ಸಂಭ್ರಮ ಸಡಗರದಿಂದ ಕೈಲ್ ಮುಹೂರ್ತ ಹಬ್ಬವನ್ನು ಆಚರಿಸಲಾಯಿತು. ಕೋವಿ, ಕತ್ತಿ ಸೇರಿದಂತೆ ಸಾಂಪ್ರದಾಯಿಕ ಆಯುಧಗಳಿಗೆ ಪೂಜೆ ಸಲ್ಲಿಸಿದ ಜನರು ಬಳಿಕ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು.
ಬೆಳಗ್ಗೆಯೇ ಆಯುಧಪೂಜೆಗೆ ಸಿದ್ಧತೆ ಮಾಡಿಕೊಂಡ ಜನರು ಭತ್ತದ ಕೃಷಿಗೆ ಹೆಗಲು ನೀಡಿದ ಎತ್ತುಗಳಿಗೆ ಸ್ನಾನ ಮಾಡಿಸಿ, ಎಣ್ಣೆ ಅರಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಎತ್ತುಗಳನ್ನು ಪೂಜಿಸಿ ಪ್ರಾರ್ಥಿಸಿದರು. ನಂತರ ಅಕ್ಕಿಯಿಂದ ಮಾಡಿದ ಮುದ್ದೆ ಪುಟ್ಟ್, ಪಣಿಪುಟ್ಟ್ ಎಂದು ಕರೆಯುವ ವಿಶೇಷ ತಿನಿಸುಗಳನ್ನು ತಯಾರಿಸಿ ಎತ್ತುಗಳಿಗೂ ತಿನ್ನಿಸಿದರು.
ಆಯುಧ ಪೂಜೆ
ಸಾಂಪ್ರದಾಯಿಕ ಆಯುಧಗಳಾದ ಕೋವಿ, ಕತ್ತಿ, ಗುದ್ದಲಿ, ನೇಗಿಲು, ನೊಗ ಸೇರಿದಂತೆ ಕೃಷಿಗೆ ಬಳಸಿದ ಸಾಮಗ್ರಿಗಳನ್ನೆಲ್ಲ ಚಾಪೆಯಲ್ಲಿ ಇಟ್ಟು ನೆಕ್ಕಿಸೊಪುö್ಪ, ನೇರಳೆಸೊಪುö್ಪ, ಗೌರಿ ಹೂವು (ತೋಕ್ ಪೂ)ನಿಂದ ಅಲಂಕಾರ ಮಾಡಿದರು. ನಂತರ ಮಂಗಳಾರತಿ, ದೂಪದ ಹೊಗೆ ಇಟ್ಟು ಪೂಜಿಸಿದರು. ಹಿರಿಯರೆಲ್ಲಾ ಸೇರಿ ದೇವರನ್ನು ಪ್ರಾರ್ಥಿಸಿ, ಕಿರಿಯರು ಹಿರಿಯರ ಕಾಲು ಮುಟ್ಟಿ ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡರು. ಬಳಿಕ ಮನೆಯಲ್ಲಿ ಮಾಡಿದ ಭಕ್ಷ ಭೋಜನ ಹಾಗೂ ಮದ್ಯದೊಂದಿಗೆ ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು.
ಕ್ರೀಡಾ ಕೂಟ: ಪೂಜೆ, ಭೋಜನದ ನಂತರ ಜಿಲ್ಲೆಯ ನಾನಾ ಕಡೆ ಕೈಲ್ ಮೂಹೂರ್ತ ಕ್ರೀಡಾಕೂಟ ನಡೆಯಿತು. ಪಕ್ಕಾ ಜಾನಪದ ಸೊಗಡಿನ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಸಿಕೊಂಡರು. ತೆಂಗಿನ ಕಾಯಿಗೆ ಗುಂಡು ಹಾರಿಸುವುದು, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳು ಜರುಗಿದವು. ಕೆಲವು ಕಡೆ ಮಳೆಯಿಂದ ಕ್ರೀಡಾಕೂಟ ಮುಂದೂಡಲ್ಪಟ್ಟರೆ ಕೆಲವು ಕಡೆ ನಡೆದವು.ವೀರಾಜಪೇಟೆಯ ಕೂರ್ಗ್ ಮಾರ್ಕ್ಸ್ಮೆನ್ ಕ್ಲಬ್ ವತಿಯಿಂದ ಕೈಲ್‌ಪೊಳ್ದ್ ಅಂಗವಾಗಿ ೧೦ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.
ಕ್ಲಬ್ ಅಧ್ಯಕ್ಷ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮೈಸೂರಿನ ಬೃಂದಾವನ್ ಆಸ್ಪತ್ರೆ ಹಾಗೂ ವೀರಾಜಪೇಟೆ ಆಶೀರ್ವಾದ್ ಆಸ್ಪತ್ರೆಯ ಪ್ರಮುಖ ಡಾ. ಮಾತಂಡ ಆರ್. ಅಯ್ಯಪ್ಪ ಅವರು ಉದ್ಘಾಟಿಸಿದರು. ಅತಿಥಿಗಳಾಗಿ ಅಂತರರಾಷ್ಟಿçÃಯ ಹಾಕಿ ಆಟಗಾರ ಕೂತಂಡ ಪೂಣಚ್ಚ, ಟ್ರೋಫಿ ದಾನಿ ಪಟ್ಟಡ ಸಚಿನ್ ನಂಜಪ್ಪ ಪಾಲ್ಗೊಂಡಿದ್ದರು. .೨೨ ಸ್ಪರ್ಧೆಯಲ್ಲಿ ೧೨೫ ರಷ್ಟು ಮಂದಿ ಪಾಲ್ಗೊಂಡಿದ್ದರು.ಬಲAಬೇರಿ : ಬಲಂಬೇರಿಯಲ್ಲಿ ಅಲ್ಲಿನ ಮಹಾದೇವ ಕ್ರೀಡಾ ಮಂಡಳಿ ಸ್ಪೋರ್ಟ್ಸ್ ಕ್ಲಬ್‌ನ ವತಿಯಿಂದ ೭೩ನೇಯ ವರ್ಷದ ಕೈಲ್‌ಪೊಳ್ದ್ ಕ್ರೀಡಾಕೂಟ ಸ್ಥಳೀಯ ವ್ಯಾಪ್ತಿಯ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯೊಂದಿಗೆ ಸಂಭ್ರಮದಿAದ ಜರುಗಿತು. ಎಳ್‌ವದ್ ಒಕ್ಕ ಎಂದು (ನಾಲ್ಕೇರಿ) ಹೇಳಲಾಗುವ ಇಲ್ಲಿ ನಾಲ್ಕು ಕೇರಿಗಳಾದ ಪೇರಿಯಂಗಟ್ಟ್ಕೇರಿ, ಪಾಲಂಗಟ್ಟ್ಕೇರಿ, ನೆಟ್ಟುಕೇರಿ, ಕಣ್ಣಬಲಮುರಿ ಬರುತ್ತದೆ. ಈ ಕೇರಿಗಳ ನಡುವೆ ಅಂತರಕೇರಿ ಕ್ರೀಡಾಕೂಟ ಇಲ್ಲಿನ ವಿಶೇಷ. ತೆಂಗಿನಕಾಯಿಗೆ ಗುಂಡು ಹೊಡೆಯುವುದು ಪುರುಷ - ಮಹಿಳೆಯರಿಗೆ ಹಗ್ಗಜಗ್ಗಾಟ, ರಿಲೇ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಅಲ್ಲಿನ ಬಲಂಗಮುಡಿ ಬಾಣೆಯಲ್ಲಿ ಆಯೋಜಿಸಲಾಗಿತ್ತು.
ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟಿರ ಕಾಳಪ್ಪ, ಕ್ಲಬ್ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ಬೊಳ್ಳಚೆಟ್ಟಿರ ಚೆಟ್ಟಿಚ, ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸ್ಥಳೀಯ ವ್ಯಾಪ್ತಿಯ ಎಲ್ಲಾ ಜಾತಿ - ಜನಾಂಗದವರು ಈ ಸಂಭ್ರಮದಲ್ಲಿ ಭಾಗಿಗಳಾಗಿದ್ದರು.
ಈ ಸಂದರ್ಭ ರಾಜ್ಯ ಪ್ರಶಸ್ತಿ ಪಡೆದ ದೈಹಿಕ ಶಿಕ್ಷಣ ಶಿಕ್ಷಕ ಚೆಯ್ಯಂಡ ರಘು, ಹಗ್ಗಜಗ್ಗಾಟದಲ್ಲಿ ಸಾಧನೆ ಮಾಡಿರುವ ಬಲಂಬೇರಿ ಮಹಿಳಾ ಹಗ್ಗಜಗ್ಗಾಟ ತಂಡದವರನ್ನು ಸನ್ಮಾನಿಸಲಾಯಿತು. ಬಹುಮಾನ ವಿತರಣೆ, ವಾಲಗತಾಟ್‌ನ ಸಂಭ್ರಮದೊAದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಉಪಾಧ್ಯಕ್ಷ ಗುಡ್ಡೇರ ಲಕ್ಷÄ, ಕಾರ್ಯದರ್ಶಿ ಬೊಳ್ಳಚೆಟ್ಟಿರ ಜಯಂತಿ, ಸಹಕಾರ್ಯದರ್ಶಿ ಅಚ್ಚಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಥಮ ಬಹುಮಾನವನ್ನು (ರೂ.೧೫ ಸಾವಿರ) ಹಳ್ಳಿಗಟ್ಟುವಿನ ಚಿಮ್ಮಚ್ಚಿರ ನಾಸಿರ್, ದ್ವಿತೀಯ ಚೆಟ್ಟಳ್ಳಿಯ ಪುತ್ತರಿರ ನಂಜಪ್ಪ (ರೂ. ೧೦ ಸಾವಿರ) ಹಾಗೂ ತೃತೀಯ ಬಹುಮಾನವನ್ನು ಮೂರ್ನಾಡುವಿನ ಬಡುವಂಡ ಧನು ದೇವಯ್ಯ (ರೂ. ೫ ಸಾವಿರ) ಪಡೆದುಕೊಂಡರು. ಚಾಮರಾಜನಗರ ಸತ್ಯಭಾಮ ಹಾಗೂ ಬಡುವಂಡ ಶ್ಲೋಕ್ ಮೂರ್ನಾಡು ಸಮಾಧಾನಕರ ಬಹುಮಾನ ಗಳಿಸಿದರು.
ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯವರು ಐದು ಸಿಲ್ವರ್ ಕಾಯಿನ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಮೇರಿಯಂಡ ಬೋಪಣ್ಣ, ಕ್ಲಬ್‌ನ ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ, ಉಪಾಧ್ಯಕ್ಷ ಕಂಡ್ರತAಡ ಪ್ರವೀಣ್, ಜಂಟಿ ಕಾರ್ಯದರ್ಶಿ ಕೊಂಗಾAಡ ದರ್ಶನ್, ಖಜಾಂಚಿ ನಾಯಡ ಶ್ಯಾಮ್ ಸೋಮಣ್ಣ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.ಚೆಟ್ಟಳ್ಳಿ: ಕೊಡಗಿನ ಸಾಂಪ್ರದಾಯಿಕ ಕೈಲ್ ಪೊಳ್ದ್ ನಮ್ಮೆಯ ಆಚರಣೆಯನ್ನು ನೂರೊಕ್ಕ ನಾಡಿನ ಚೆಟ್ಟಳ್ಳಿಯಲ್ಲಿ ಆಚರಿಸಲಾಯಿತು.
ವಿಶೇಷ ಕಡುಂಬುಟ್ಟು ಪಂದಿಕರಿ ಸೇರಿ ವಿವಿಧ ಕುಟುಂಬದವರೆಲ್ಲಿ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಶೌರ್ಯ ಪ್ರದರ್ಶಿಸಲಾಯಿತು. ಊರಿನ ಮಂದ್‌ನಲ್ಲಿ ಸೇರಿ ತೆಂಗಿನಕಾಯಿಗೆ ಗುಂಡು ಹೊಡೆಯಲಾಯಿತು.