ಮಡಿಕೇರಿ, ಸೆ. ೫: ನಿಧಿ ಆಪ್ಕೆ ನಿಕಟ್ ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮವನ್ನು ಮೈಸೂರಿನ ಭವಿಷ್ಯನಿಧಿ ಕ್ಷೇತ್ರೀಯ ಕಚೇರಿ ಉಸ್ತುವಾರಿಯಲ್ಲಿ ಇತ್ತೀಚೆಗೆ ನಾಪೋಕ್ಲು-ಯವಕಪಾಡಿಯ ತಾಮರಾ ರೆಸಾರ್ಟ್ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ರೆಸಾರ್ಟ್ನ ಮಾನವ ಸಂಪನ್ಮೂಲ ವ್ಯವಸ್ಥಾಪಕರಾದ ನೇತಾಜಿ ರಾಜ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇ.ಪಿ.ಎಫ್.ಒ ವತಿಯಿಂದ ಮುರಳೀಧರನ್, ಸೌರಭ್, ಸ್ವಸ್ತಿಕ್, ತೇಜಸ್ ಕೃಷ್ಣ, ಇ.ಎಸ್.ಐ.ಸಿ ವತಿಯಿಂದ ತವನ್, ಚೇತನ್ ಅವರುಗಳು ಭಾಗವಹಿಸಿ ಉದ್ಯೋಗಿಗಳು ಹಾಗೂ ಉದ್ಯೋಗದಾತರ ಮತ್ತು ಪಿಂಚಣಿದಾರರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಸಹಕರಿಸಿದರು. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್‌ಗಾರ್ ಯೋಜನೆ ಬಗ್ಗೆ ವಿಚಾರ ಸಂಕಿರಣ ನಡೆಸಲಾಯಿತು. ಈ ತಿಂಗಳು ನಿವೃತ್ತಿಗೊಂಡ ಪಿಂಚಣಿದಾರರಿಗೆ ಪಿ.ಪಿ.ಒ ಪ್ರತಿಗಳನ್ನು ಈ ಸಂದರ್ಭ ನೀಡಲಾಯಿತು ಹಾಗೂ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ನವೀಕರಿಸಲಾಯಿತು.