ಶ್ರೀಮಂಗಲ, ಸೆ. ೧: ಕಟ್ಟೆರ ರೋಹನ್ ನಾಚಪ್ಪ ಅವರು ತಮ್ಮ ತಂದೆ ದಿ. ಸುಬ್ರಮಣಿ ಹಾಗೂ ಅಜ್ಜ ದಿ. ಮಚ್ಚಮಾಡ ಉತ್ತಯ್ಯ ಅವರ ಜ್ಞಾಪಕಾರ್ಥವಾಗಿ ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಏಳನೇ ತರಗತಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಎಂ.ಎA. ಸ್ಮಾರಕ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟಿ. ಶೆಟ್ಟಿಗೇರಿಯ ಏಳು ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಹಾಗೂ ಮಕ್ಕಳಿಗೆ ಟ್ರಾö್ಯಕ್ ಸೂಟ್ ಖರೀದಿಸಲು ರೂ. ೬೦ ಸಾವಿರ ನಗದನ್ನು ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಹಸ್ತಾಂತರಿಸಿದರು. ಸಮಾರಂಭದಲ್ಲಿ ದಾನಿಗಳಾದ ಕಟ್ಟೆರ ರೋಹನ್ ನಾಚಪ್ಪ, ಕಟ್ಟೆರ ಮೀರ ಸುಬ್ರಮಣಿ, ಕಟ್ಟೆರ ಮಾಚಯ್ಯ ಸುಬ್ರಮಣಿ, ಉಭಯ ಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.