ಕೂಡಿಗೆ, ಸೆ. ೧: ನಿವೇಶನ ರಹಿತರಿಗಾಗಿ ವಸತಿ ಸೌಕರ್ಯ ಕಲ್ಪಿಸಲು ಬ್ಯಾಡಗೊಟ್ಟ ಗ್ರಾಮದಲ್ಲಿ ಮೀಸಲಿಟ್ಟಿರುವ ಜಾಗದ ಸರ್ವೆ ಕಾರ್ಯವನ್ನು ಅಧಿಕಾರಿಗಳು ಕೈಗೊಂಡರು. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಸರ್ವೆ ನಂಬರ್ ೧/೧ರಲ್ಲಿ ೧.೫೦ ಎಕರೆ ಜಾಗದ ಸರ್ವೆ ಕಾರ್ಯವನ್ನು ಕಂದಾಯ ಇಲಾಖೆ ಸೂಚನೆ ಯಂತೆ ಇಲಾಖೆಯ ಅಧಿ ಕಾರಿಗಳು ನಡೆಸಿದರು. ಕಳೆದ ೧೦ ವರ್ಷಗಳ ಹಿಂದೆ ಗುರುತಿ ಸಲಾಗಿದ್ದ ಕಂದಾಯ ಇಲಾಖೆ ಜಾಗವನ್ನು ಇಲಾಖೆಯ ನಿಯಮಾನುಸಾರ ಸರ್ವೆ ನಡೆಸುವಂತೆ ಕ್ಷೇತ್ರದ ಶಾಸಕ ಡಾ. ಮಂತÀರ್ ಗೌಡ ಸೂಚನೆ ನೀಡಿದ್ದರು. ಈ ಸಂದರ್ಭದಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಸಿದ್ದರಾಜ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯದರ್ಶಿ ಪುನೀತ್, ಕರವಸೂಲಿಗಾರ ಅನಿಲ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.