ಕುಶಾಲನಗರ, ಸೆ. ೧: ಕುಶಾಲನಗರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾದಪಟ್ಟಣ ಮತ್ತು ಜನತಾ ಕಾಲೋನಿಯಲ್ಲಿ ಗಣಪತಿ ವಿಸರ್ಜನೆ ಸಂದರ್ಭ ಹೆಚ್ಚಿನ ಶಬ್ದವನ್ನು ಹಾಕಿಕೊಂಡು ನಿಯಮ ಉಲ್ಲಂಘನೆ ಮಾಡಿ ಸಾರ್ವಜನಿಕರ ನೆಮ್ಮದಿಗೆ ಆರೋಗ್ಯಕ್ಕೆ ತೊಂದರೆ ಆಗುವ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರು, ಸಮಿತಿಗಳ ಮುಖಂಡರು ಧ್ವನಿವರ್ಧಕ ಆಪರೇಟರ್ ಮತ್ತು ವಾಹನ ಚಾಲಕರ ಮೇಲೆ ಕುಶಾಲನಗರ ಪೊಲೀಸರು ಕಾನೂನು ರೀತಿ ಕ್ರಮ ಕೈಗೊಂಡು ಬೃಹತ್ ಸೌಂಡ್ ಬಾಕ್ಸ್ಗಳು ಸೇರಿದಂತೆ ಐದು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ ಮಾದಪಟ್ಟಣ ಗಣಪತಿ ವಿಸರ್ಜನೆ ಕಾರ್ಯಕ್ರಮದ ಬಂದೋಬಸ್ತ್ ಕರ್ತವ್ಯದ ಉಸ್ತುವಾರಿಯಲ್ಲಿ ಪೊಲೀಸರು ಇದ್ದ ಸಂದರ್ಭ ಮಾದಪಟ್ಟಣ ಜೋಡಿ ಬಸವೇಶ್ವರ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನೆ ಸಂದರ್ಭ ಕ್ಯಾಂಟರ್ ವಾಹನದಲ್ಲಿ ಗಣಪತಿ ಮೂರ್ತಿಯ ವಿಸರ್ಜನೆ ವೇಳೆ ಬಿ.ಆರ್. ಅಂಬೇಡ್ಕರ್ ದಲಿತ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿ ವಾಹನಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವಂತೆ ಬೃಹತ್ ಗಾತ್ರದ ಸೌಂಡ್ ಬಾಕ್ಸ್ ಗಳನ್ನು ಅಳವಡಿಸಿಕೊಂಡು ಸಂಜೆ ೪ ಗಂಟೆಯಿAದ ರಾತ್ರಿ ೧೦ ಗಂಟೆವರೆಗೆ ರಸ್ತೆಗಳಲ್ಲಿ ಹೆಚ್ಚಿನ ಶಬ್ದವನ್ನು ಹಾಕಿಕೊಂಡು ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಇವರುಗಳ ಮೇಲೆ ಕಾನೂನು ರೀತಿಯ ಕಲಂ ೨೮೫, ೨೯೨ ಬಿ ಎನ್ ಎಸ್ ೨೦೨೩ ಜೊತೆಗೆ ೩೬,೧೦೯ ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪಟ್ಟಣ ಠಾಣೆ ಪೊಲೀಸ್ ಅಧಿಕಾರಿ ಗಣೇಶ್ ತಿಳಿಸಿದ್ದಾರೆ.
ಇದೇ ರೀತಿ ಭಾನುವಾರ ರಾತ್ರಿ ಮುಳ್ಳುಸೋಗೆ ಜನತಾ ಕಾಲೋನಿ ಶ್ರೀ ದ್ವಾರಕಾ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ವಾಹನಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ದೊಡ್ಡ ದೊಡ್ಡ ಸೌಂಡ್ ಬಾಕ್ಸ್ಗಳನ್ನು ಅಳವಡಿಸಿಕೊಂಡು ರಾತ್ರಿ ೧೦ ಗಂಟೆತನಕ ರಸ್ತೆಗಳಲ್ಲಿ ಸಂಚರಿಸುತ್ತಾ ಹೆಚ್ಚಿನ ಶಬ್ದವನ್ನು ಹಾಕಿಕೊಂಡು ಕಾನೂನನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರು, ಸಮಿತಿಗಳ ಮುಖಂಡರು, ಧ್ವನಿವರ್ಧಲ ಆಪರೇಟರ್, ವಾಹನ ಚಾಲಕರುಗಳ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಗಣೇಶ್ ತಿಳಿಸಿದ್ದಾರೆ. ಕಾರ್ಯಕ್ರಮ ಆಯೋಜಕರಿಗೆ ಹಲವು ಬಾರಿ ಇಲಾಖೆ ಮೂಲಕ ಮುನ್ನೆಚ್ಚರಿಕೆ ಹಾಗೂ ಸೂಚನೆ ನೀಡಿದರೂ ಯಾವುದೇ ರೀತಿಯ ಸ್ಪಂದನ ದೊರಕಿಲ್ಲ. ಪ್ರಕರಣಕ್ಕೆ ಸಂಬAಧಿಸಿದAತೆ ಮಾದಪಟ್ಟಣ ಗ್ರಾಮದಲ್ಲಿ ನಾಲ್ಕು ವಾಹನ ಮತ್ತು ಜನತಾ ಕಾಲೋನಿಯಲ್ಲಿ ಒಂದು ವಾಹನ ಸೇರಿದಂತೆ ಒಟ್ಟು ಐದು ವಾಹನಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿ ಗಣೇಶ್ ಮಾಹಿತಿ ನೀಡಿದ್ದಾರೆ.