ಅಫ್ಘಾನಿಸ್ತಾನ, ಸೆ. ೧ : ಭಾನುವಾರ ತಡರಾತ್ರಿ ೧೧:೪೭ (ಅಫ್ಘಾನ್ ಸಮಯ) ಪೂರ್ವ ಅಫ್ಘಾನಿಸ್ತಾನವನ್ನು ಅಪ್ಪಳಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಟ ೮೦೦ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಮತ್ತು ೨೮೦೦ ಜನರು ಗಾಯಗೊಂಡಿದ್ದಾಗಿ ವರದಿಯಾಗಿದೆ. ಭೂಕಂಪನ ಪ್ರಭಾವಕ್ಕೆ ೩ ಹಳ್ಳಿಗಳು ಸಂಪೂರ್ಣ ಧ್ವಂಸವಾಗಿದ್ದು, ರಾಷ್ಟçದ ಕುನಾರ್ ಪ್ರದೇಶದಲ್ಲಿ ಒಂದೇ ಹಳ್ಳಿಯ ೩೫ ಮಂದಿ ಕೊನೆಯುಸಿರೆಳೆದಿದ್ದಾರೆ. ಭೂ-ಪದರದ ಕೇವಲ ೮ ಕಿ.ಮೀ ಆಳವು ಕಂಪನದ ಕೇಂದ್ರವಾಗಿದ್ದು, ಮ್ಯಾಗ್ನಿಟ್ಯೂಡ್ ೬ ರ ಪ್ರಬಲ ಭೂಕಂಪ ರಾಷ್ಟçದ ರಾಜಧಾನಿ ಕಾಬೂಲ್‌ನಿಂದ ೧೪೦ ಕಿ.ಮೀ ದೂರದಲ್ಲಿ ಸಂಭವಿಸಿದೆ ಎಂಬುದಾಗಿ ಅಲ್ಲಿನ ತಾಲಿಬಾನ್ ಸರಕಾರವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಭೂಕಂಪನವು ಪಶ್ಚಿಮ ಅಫ್ಘಾನಿನ ಕುನಾರ್ ಪ್ರದೇಶದಲ್ಲಿ ಸಂಭವಿಸಿದ್ದು, ಈ ಪ್ರದೇಶವು ಶೇ.೯೦ ರಷ್ಟು ಬೆಟ್ಟ-ಗುಡ್ಡ, ಪರ್ವತಗಳಿಂದ ಕೂಡಿರುವ ಕಾರಣ ಅಪಾರ ಹಾನಿಯುಂಟಾಗಿದೆ. ಈ ಭೂಪ್ರದೇಶದಲ್ಲಿ ರಸ್ತೆಗಳು ಸಣ್ಣದಾಗಿರುವ ಕಾರಣ ಭೂಕಂಪನದಿAದ ಗಾಯಗಳಾಗಿರುವ ಹಾಗೂ ನಿರಾಶ್ರಿತರಿಗೆ ರಕ್ಷಣಾ ಕಾರ್ಯ, ಆಹಾರ ಸರಬರಾಜು ಮಾಡಲೂ ಕಷ್ಟಸಾಧ್ಯವಾಗಿರುವುದು ಶೋಚನೀಯ. ನೂರ್ ಗುಲ್, ಸೋಕಿ, ವಾಟ್ಪುರ್, ಮನೋಗಿ ಮತ್ತು ಚಪದರೆ ಮುಂತಾದ ಜಿಲ್ಲೆಗಳಲ್ಲಿ, ನೂರಾರು ಮನೆಗಳು ಹಾನಿಗೊಳಗಾಗಿವೆ, ಕೆಲವು ಮನೆಗಳು ಸಂಪೂರ್ಣ ನಾಶವಾಗಿವೆ.
ಭಾನುವಾರ ರಾತ್ರಿ ಭೂಮಿಯು ೧೦-೧೨ ಬಾರಿ ಕಂಪಿಸಿದ್ದಾಗಿ ಅಲ್ಲಿನ ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಅಫ್ಘಾನಿಸ್ತಾನದಲ್ಲಿ ೨೦೨೨ರಲ್ಲಿ ೬.೧ ಮ್ಯಾಗ್ನಿಟ್ಯೂಡ್ ಕಂಪನದಿAದ ೧,೦೦೦ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಾದ ಬಳಿಕ ಭಾನುವಾರ ರಾತ್ರಿ ಸಂಭವಿಸಿದ ಭೂಕಂಪನವೇ ಅತಿ ಹೆಚ್ಚು ಪ್ರಭಾವದ್ದಾಗಿದೆ.
ಭಾರತದಿಂದ ಬೆಂಬಲ - ಪ್ರಧಾನಿ ಸಂತಾಪ
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು, ಭೂಕಂಪದಿAದ ಹಾನಿಗೊಳಗಾದವರಿಗೆ ಬೆಂಬಲ ಮತ್ತು ಸಂತಾಪ ಸೂಚಿಸಿದ್ದಾರೆ. “ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿAದ ಜೀವಹಾನಿಯಿಂದ ತೀವ್ರ ದುಃಖಿತರಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ನಮ್ಮ ಪ್ರಾರ್ಥನೆಗಳು ಮೃತರ ಕುಟುಂಬಗಳೊAದಿಗೆ ಇವೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿ ಕೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ಅವರು ಬರೆದಿದ್ದಾರೆ. “ಭಾರತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸಲು ಸಿದ್ಧವಾಗಿದೆ” ಎಂದು ಅವರು ಹೇಳಿದರು. ಬಲಿಪಶುಗಳ ಕುಟುಂಬಗಳಿಗೆ ನಮ್ಮ ಸಂತಾಪಗಳು ಮತ್ತು ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಬೇಕೆಂದು ನಮ್ಮ
ಪ್ರಾರ್ಥನೆಗಳು” ಎಂದು ಅವರು ಹೇಳಿದ್ದಾರೆ.