ಗೋಣಿಕೊಪ್ಪಲು, ಸೆ. ೧: ಗೋಣಿಕೊಪ್ಪ ಶ್ರೀ ಕಾವೇರಿದಸರಾ ಸಮಿತಿಯ ಮಹಾಸಭೆಯು ಗೊಂದಲದ ಗೂಡಾಗಿ ಮುಕ್ತಾಯಗೊಂಡಿತು.

ಅಧ್ಯಕ್ಷಗಾದಿಗೆ ಪರವಿರೋಧದ ಚರ್ಚೆ, ವಾಗ್ವಾದದ ನಡುವೆ ಅಂತಿಮವಾಗಿ ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯರಾದ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯ ಅವರನ್ನು ಹಾಲಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಘೋಷಣೆ ಮಾಡುವ ಮೂಲಕ ಸಭೆಯು ಮುಕ್ತಾಯಗೊಂಡಿತು, ಆದರೆ ಸಹಮತ ಕಂಡು ಬರಲಿಲ್ಲ. ಶ್ರೀ ಕಾವೇರಿ ದಸರಾ ಸಮಿತಿಯ ಮಹಾಸಭೆಯು ಗೋಣಿಕೊಪ್ಪಲುವಿನ ಗ್ರಾಮ ಪಂಚಾಯಿತಿ ಹಳೆಯ ಸಭಾಂಗಣದಲ್ಲಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿತು. ಕಳೆದ ಮಹಾ ಸಭೆಯ ವರದಿ ಸೇರಿದಂತೆ ೪ಏಳನೇ ಪುಟಕ್ಕೆ(ಮೊದಲ ಪುಟದಿಂದ)

ಲೆಕ್ಕಪತ್ರವನ್ನು ಮಂಡನೆ ಮಾಡಲಾಯಿತು. ಲೆಕ್ಕಪತ್ರದಲ್ಲಿ ಸಾಕಷ್ಟು ನ್ಯೂನತೆಗಳು ಇರುವುದು ಮೇಲ್ನೊಟಕ್ಕೆ ಕಂಡು ಬಂದ ಹಿನ್ನಲೆಯಲ್ಲಿ ಹಿರಿಯರಾದ ಶ್ರೀಧರ್ ನೆಲ್ಲಿತ್ತಾಯ, ಕೆ.ಬಿ. ಜಗದೀಶ್, ಕೆಲವು ಮಂದಿ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಹಣವನ್ನು ಪೋಲು ಮಾಡದೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ಮೂಡಿ ಬರಬೇಕು. ಅಲ್ಲದೆ ಗೌರವಧನವೂ ಕೂಡ ಹೆಚ್ಚಾಗಿ ಸ್ಥಳೀಯರಿಗೆ ನೀಡುವಂತಾಗಬೇಕು. ಸರ್ಕಾರದಿಂದ ರೂ. ೭೫ ಲಕ್ಷ ಅನುದಾನ ಬಂದರೂ ಲೆಕ್ಕಪತ್ರದಲ್ಲಿ ನಷ್ಟ ಆಗಿರುವ ಬಗ್ಗೆ ಉಲ್ಲೇಖ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ಸಭೆಗೆ ಸಮಗ್ರ ಮಾಹಿತಿ ನೀಡುವಂತೆ ಸಭೆಯಲ್ಲಿದ್ದ ಪ್ರಮುಖರು ಆಗ್ರಹಿಸಿದರು.

ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿದ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ದಸರಾ ಕಾರ್ಯಕ್ರಮದಲ್ಲಿ ನಡೆಯುವ ಎಲ್ಲಾ ಖರ್ಚು ವೆಚ್ಚಗಳು ಜಿಲ್ಲಾಡಳಿತದ ಮೂಲಕ ನಡೆಯುತ್ತವೆ. ಕಾರ್ಯಕ್ರಮ ರೂಪಿಸಿದ ಬಗ್ಗೆ ವಿವರಗಳನ್ನು ಮಾತ್ರ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತವೂ ಸಂಬAಧಿಸಿದವರಿಗೆ ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಗೆ ಜಮಾಮಾಡುತ್ತದೆ. ವೇದಿಕೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಕೂಡ ಜಿಲ್ಲಾಡಳಿತ ಕೈಗೊಳ್ಳುತ್ತದೆ. ಲೆಕ್ಕಪತ್ರದಲ್ಲಿ ಯಾವುದೇ ಲೋಪ ಆಗಿಲ್ಲವೆಂದು ಸಭೆಗೆ ತಿಳಿಸಿದರು. ಅಂತಿಮವಾಗಿ ಸಭೆಯು ಲೆಕ್ಕಪತ್ರಕ್ಕೆ ಅನುಮೋದನೆ ನೀಡಿ ಸಭೆ ಮುಂದುವರೆಸಲು ಅವಕಾಶ ನೀಡಿತು. ಕಳೆದ ಬಾರಿ ವಿಜೇತರಾದ ಮಂಟಪಗಳಿಗೆ ನಗದು ಬಹುಮಾನವನ್ನು ಈ ವೇಳೆ ವಿತರಿಸಲಾಯಿತು.

ಸಾಂಗವಾಗಿ ನಡೆಯುತ್ತಿದ್ದ ಸಭೆಯಲ್ಲಿ ಮುಂದಿನ ಸಾಲಿನ ಕಾವೇರಿ ದಸರಾ (ಮೊದಲ ಪುಟದಿಂದ)

ಸಾಂಗವಾಗಿ ನಡೆಯುತ್ತಿದ್ದ ಸಭೆಯಲ್ಲಿ ಮುಂದಿನ ಸಾಲಿನ ಕಾವೇರಿ ದಸರಾ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷಗಾದಿ ತಮ್ಮ ಪಕ್ಷದಲ್ಲಿಯೇ ಇರುವ ಗ್ರಾಮ ಪಂಚಾಯಿತಿ ಸದಸ್ಯರಾದ ಶರತ್‌ಕಾಂತ್ ಅವರಿಗೆ ಬಿಟ್ಟುಕೊಡುವುದಾದರೆ ನಮ ್ಮಒಪ್ಪಿಗೆ ಇದೆ ಎಂದು ಸ್ಪಷ್ಟನೆ ನೀಡಿದರು.

ಇವರ ಮಾತಿನಿಂದ ಸಭೆಯು ಕೆಲ ಕಾಲ ಸ್ತಬ್ಧಗೊಂಡಿತ್ತಾದರು ಗೊಂದಲಗಳು ಮತ್ತಷ್ಟು ಹೆಚ್ಚಾದವು. ಪರ ವಿರೋಧದ ಮಾತುಗಳು ತಾರಕಕ್ಕೇರಿದವು. ಕೆಲವು ಸದಸ್ಯರುಗಳು ಸಭೆಯಿಂದ ಹೊರನಡೆದರು. ಸಭೆಯಲ್ಲಿದ್ದ ಕೆಲವರು ಅಂತಿಮವಾಗಿ ಸಭೆಯ ತೀರ್ಮಾನ ತಿಳಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಕುಲ್ಲಚಂಡ ಪ್ರಮೋದ್ ಗಣಪತಿ, ಮುಂದಿನ ಸಾಲಿನ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಚೆಪ್ಪುಡೀರ ಧ್ಯಾನ್ ಸುಬ್ಬಯ್ಯನವರನ್ನು ನೇಮಿಸಿ ರುವುದಾಗಿ ಘೋಷಣೆ ಮಾಡಿದರು. ಇವರ ಮಾತಿಗೆ ಸಭೆಯು ತೀವ್ರ ವಿರೋಧ ವ್ಯಕ್ತಪಡಿಸಿತು. ಘೋಷಣೆ ಮಾಡಿದ ನಂತರ ಪ್ರಮೋದ್ ಗಣಪತಿ ಸಭೆಯಿಂದ ಹೊರ ನಡೆದರು. ಆದರೆ ಅಧೀಕೃತ ಅಧ್ಯಕ್ಷರಾಗಿ ಯಾರೆಂಬುದೇ ಇನ್ನೂ ಕೂಡ ಸ್ಪಷ್ಟತೆ ಲಭಿಸಿಲ್ಲ. ಸಭೆಯಲ್ಲಿ ಕಾವೇರಿ ದಸರಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಕಂದಾ ದೇವಯ್ಯ ಕಳೆದ ಮಹಾಸಭೆ ವರದಿ ಮಂಡಿಸಿದರು. ಖಜಾಂಜಿ ಧ್ಯಾನ್ ಸುಬ್ಬಯ್ಯ ಲೆಕ್ಕಪತ್ರ ನೀಡಿದರು. ಸಾಂಸ್ಕೃತಿಕ ಸಮಿತಿಯ ಪ್ರಮುಖರಾದ ಶೀಲಾ ಬೋಪಣ್ಣ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಮಂಜುಳ, ದಸರಾ ಸಮಿತಿಯ ಉಪಾಧ್ಯಕ್ಷರಾದ ಶಿವಾಜಿ, ಶರತ್‌ಕಾಂತ್, ಚಂದನ್‌ಕಾಮತ್, ಸೇರಿದಂತೆ ಪ್ರಮುಖರು ಹಾಜರಿದ್ದರು.ಸಭೆಯಲ್ಲಿ ಹಿರಿಯ ನಾಗರಿಕರಾದ ಕೆ.ಎಂ. ಅಜಿತ್ ಅಯ್ಯಪ್ಪ, ಎಂ.ಪಿ.ಕೇಶವ್ ಕಾಮತ್, ಧನಲಕ್ಷಿö್ಮ, ಎ.ಜೆ. ಬಾಬು, ಕುಪ್ಪಂಡ ತಿಮ್ಮಯ್ಯ, ಕಾಡ್ಯಮಾಡ ಚೇತನ್, ರಾಜಶೇಖರ್, ಕಡೇಮಾಡ ಕುಸುಮಾ ಜೋಯಪ್ಪ, ಟಿ.ಎಲ್. ಶ್ರೀನಿವಾಸ್, ಮುರುಗ ಪಿ.ಕೆ. ಪ್ರವೀಣ್, ನಾರಾಯಣ ಸ್ವಾಮಿ ನಾಯ್ಡು, ಅಬ್ದುಲ್ ಸಮ್ಮದ್, ಸುರೇಶ್ ರೈ, ನಾಮೇರ ಅಂಕಿತ್, ದಶಮಂಟಪದ ಅಧ್ಯಕ್ಷರಾದ ಶಾಜಿ ಅಚ್ಚುತ್ತನ್, ನಾಡ ಸಮಿತಿಯ ಪ್ರಭಾಕರ್ ನೆಲ್ಲಿತ್ತಾಯ, ಮತ್ತಿತರು ಹಾಜರಿದ್ದರು. - ಹೆಚ್.ಕೆ. ಜಗದೀಶ್