“ಶಕ್ತಿ’’ಯ ಏಜೆಂಟರುಗಳಾದ ಗೌತಮ್ ಹಾಗೂ ಪ್ರೀತಂ ಇವರುಗಳ ತಂದೆ ಕಾರ್ಪೊರೇಷನ್ ಬ್ಯಾಂಕ್ ನಿವೃತ್ತ ಉದ್ಯೋಗಿ, ಮಡಿಕೇರಿಯ ಆರ್‌ಟಿಓ ಬಳಿಯ ನಿವಾಸಿ, ಬಿ.ಕೆ. ರಾಜಾ (೬೧) ಅವರು ಆ. ೩೧ ರಂದು ನಿಧನರಾದರು. ಅಂತ್ಯಕ್ರಿಯೆ ತಾ. ೧ ರಂದು (ಇಂದು) ಚೈನ್‌ಗೇಟ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.