ಮಡಿಕೇರಿ, ಆ. ೩೧: ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘ ೨೦೨೪-೨೦೨೫ರ ಸಾಲಿನಲ್ಲಿ ರೂ.೨೮.೯೬ ಲಕ್ಷ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸಂಘದಲ್ಲಿ ೨೧೪೩ ಸದಸ್ಯರಿದ್ದು, ಒಟ್ಟು ೮೫೬.೯೬ ಕೋಟಿ ದುಡಿಯುವ ಬಂಡವಾಳವಿದೆ. ಪಾಲುಹಣ ರೂ.೯೬.೬೧ ಲಕ್ಷವಿದ್ದು, ಮಿತವ್ಯಯ ಠೇವಣಿ ರೂ.೪.೪೦ ಕೋಟಿಯಿದೆ. ಕಳೆದ ೨೦ ವರ್ಷಗಳಿಂದ ಸಾಲನೀಡುತ್ತಿದ್ದು, ೨೦೨೪-೨೦೨೫ರ ಸಾಲಿನಲ್ಲಿ ೫೦೯ ಸದಸ್ಯರಿಗೆ ರೂ.೪.೫೦ ಕೋಟಿ ಸಾಲ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸದಸ್ಯರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅಲ್ಲದೇ, ಕಳೆದ ೭ ವರ್ಷಗಳಿಂದ ಕೊಡಗು ಸೌಹಾರ್ದ ಪತ್ತಿನ ಸಹಕಾರಿ ಸಂಘಕ್ಕೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ಪ್ರಥಮ ಬಹುಮಾನ ಮತ್ತು ರಾಜ್ಯ ಮಟ್ಟದಲ್ಲಿ ಕಳೆದ ವರ್ಷ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಲಭಿಸಿದೆ ಎಂದು ಮಾಹಿತಿ ನೀಡಿದರು.

ಮಹಾಸಭೆ : ಸೆ.೫ ರಂದು ನಗರದ ಕೊಡವ ಸಮಾಜ ಸಭಾಂಗಣದಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಲಿದೆ. ಅಂದು ಬೆಳಗ್ಗೆ ೧೧ ಗಂಟೆಗೆ ನಡೆಯುವ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸದಸ್ಯರಿಗೆ ಶೇ.೧೦ ರ ಡಿವಿಡೆಂಟ್ ನೀಡಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕುಡುವಂಡ ಬಿ. ಉತ್ತಪ್ಪ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಸಿ.ನೀಮಾ, ನಿರ್ದೇಶಕರಾದ ಅಂಜಪರವAಡ ಜಿ. ಉಷಾ, ನಂದೇಟಿರ ಪಿ. ರಾಜ ಮಾದಪ್ಪ, ಕೇಕಡ ಯು. ಸುಗುಣ ಉಪಸ್ಥಿತರಿದ್ದರು.