ವೀರಾಜಪೇಟೆ, ಆ. ೩೧: ಪಟ್ಟಣದ ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಸಾಂಸ್ಕöÈತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ ೩೫ ವರ್ಷಗಳಿಂದ ಸಮಿತಿ ಪ್ರತಿಭಾನ್ವಿತರಿಗೆ ವೇದಿಕೆ ಕಲ್ಪಿಸುತ್ತಿರುವುದು ಶ್ಲಾಘನೀಯ. ಜನರನ್ನು ಒಂದುಗೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆಚರಣೆ ಕೈಗೊಂಡರು. ಅದು ಮುಂದುವರಿದು ಈಗ ಎಲ್ಲೆಡೆ ಸಾರ್ವಜನಿಕವಾಗಿ ಆಚರಣೆ ನಡೆಯುತ್ತಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕಾಂತಿ ಸತೀಶ್ ಮಾತನಾಡಿ, ಹಿಂದೂಗಳ ಶ್ರದ್ಧಾಕೇಂದ್ರ ಹಾಗೂ ಹಿಂದೂ ಧರ್ಮದ ವಿರುದ್ಧ ದಾಳಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ನಾವೆಲ್ಲ ಒಂದಾಗಿ ಧರ್ಮ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದು ಕರೆ ನೀಡಿದರು.
ವಕೀಲ ಟಿ.ಪಿ. ಕೃಷ್ಣ ಮಾತನಾಡಿ, ಸಾಮೂಹಿಕ ಗಣೇಶೋತ್ಸವ ಆಚರಣೆ ಮಾಡುವುದು ಸುಲಭದ ಮಾತಲ್ಲ ಎಂದರು.
ವೇದಿಕೆಯಲ್ಲಿ ಕಾವೇರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಂಬುಡುಮಾಡ ಆನಂದ್ ರಾಜಪ್ಪ, ಉದ್ಯಮಿಗಳಾದ ರಘು ನಾಣಯ್ಯ, ರಾಹುಲ್, ಮಾಜಿ ಶಿಕ್ಷಕ ಶ್ರೀನಿವಾಸ್, ಸಾಯಿನಾಥ್ ನಾಯ್ಕ್, ಡಿಕ್ಕ, ಹಾಗೂ ಸಮಿತಿ ಕಾರ್ಯದರ್ಶಿ ವಿ.ಜಿ ರಾಕೇಶ್ ಇದ್ದರು.
ನಂತರ ವಿರಾಜಪೇಟೆ ನಾಟ್ಯಂಜಲಿ ಸಂಸ್ಥೆ ವತಿಯಿಂದ ನೃತ್ಯ ಕಾರ್ಯಕ್ರಮ ನಡೆಯಿತು.