ಭಾಗಮಂಡಲ, ಆ. ೩೧: ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪ _ ೨೫ರ ಸಾಲಿನಲ್ಲಿ ೧೪೪.೦೭ ಕೋಟಿ ರೂಪಾಯಿ ವ್ಯವಹಾರ ನಡೆಸಿ ರೂ ೫೫.೧೭ ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ೩೮೭೫ ಮಂದಿ ಸದಸ್ಯರಿದ್ದು ಷೇರು ಹಣ ರೂ ೨೫೫.೫೦ ಲಕ್ಷ ರೂ ಇದೆ. ೨೦೨೪-೨೫ರ ಸಾಲಿನಲ್ಲಿ ೫೫೮ ಜನ ಸದಸ್ಯರಿಗೆ ೧೨೮೩.೮೮ ಲಕ್ಷ ರೂ ಕೃಷಿ ಸಾಲ ವಿತರಿಸಲಾಗಿದೆ .೧೧೭೦ ಜನ ಸದಸ್ಯರಿಗೆ ೧೧೮೭.೩೫ ಲಕ್ಷ ವಿವಿಧ ರೀತಿಯ ಸಾಲಗಳನ್ನು ವಿತರಿಸಲಾಗಿದೆ. ಸಂಘದಿAದ ೯೨೩.೧೮ ಟನ್ ಗೊಬ್ಬರ ಮಾರಾಟ ಮಾಡಲಾಗಿದೆ. ರೈತರಿಗಾಗಿ ಕಾಫಿ ಔಟ್ ಟರ್ನ್ ಹಾಗೂ ತೇವಾಂಶ ಪರಿಶೀಲನಾ ಯಂತ್ರ ಪಹಣಿ ಮತ್ತು ಮಣ್ಣು ಪರೀಕ್ಷಾ ಕೇಂದ್ರ ಸಂಘದಲ್ಲಿದ್ದು ಗ್ರಾಹಕರಿಗೆ ಸೇಫ್ ಲಾಕರ್ ಸಾಲವನ್ನು ಒದಗಿಸಲಾಗಿದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿAದ ಮೂಲಭೂತ ಸೌಕರ್ಯಕ್ಕಾಗಿ ರೂ. ೭೫೦೦೦ ಅನುದಾನ ಬಂದಿರುತ್ತದೆ. ಈ ಅನುದಾನವನ್ನು ಸಂಘದ ಕಚೇರಿಗೆ ಸೈರನ್ ಅಲರಾಂ ಅಳವಡಿಸಿರುವ ಬಳಸಿಕೊಳ್ಳಲಾಗಿದೆ ಎಂದರು.
ಸಂಘಕ್ಕೆ ಅನುಕೂಲವಾಗುವಂತೆ ಪಿಕಪ್ ವಾಹನ ಖರೀದಿಸಲು ಹಾಗೂ ವಾಹನ ಚಾಲಕರ ನೇಮಕಾತಿ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅತಿವೃಷ್ಟಿಯಿಂದ ವಾಸದ ಮನೆ ಹಾನಿಗೊಳಗಾದ ಇಬ್ಬರು ಸದಸ್ಯರ ಅರ್ಜಿಗಳನ್ನು ಸ್ವೀಕರಿಸಿ ತಲಾ ೫,೦೦೦ ರೂ.ಗಳನ್ನು ಮಹಾಸಭೆಯಲ್ಲಿ ಪಾವತಿಸಲಾಯಿತು. ಸಂಘದಿAದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಶ್ರೀ ವಿನಾಯಕ ಟ್ರಸ್ಟ್, ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಅಂಜನಿಪುತ್ರ ಗೆಳೆಯರ ಬಳಗಕ್ಕೆ ಆ್ಯಂಬುಲೆನ್ಸ್ ಸೇವೆಗೆ ವಾಹನ ಖರೀದಿಸಲು ಹಾಗೂ ಅರೆಭಾಷಿಕ ಗಡಿನಾಡ ಉತ್ಸವಕ್ಕೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು.
ವೇದಿಕೆಯಲ್ಲಿ ಭಾಗಮಂಡಲ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ನಾರಾಯಣ್ ಉಪಾಧ್ಯಕ್ಷ ಸೀತಾರಾಮ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ್ ಎಡಿಕೇರಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಬ್ಯಾಂಕಿನ ಸಿಬ್ಬಂದಿ ಗಂಗಾಧರ ಪ್ರಾರ್ಥಿಸಿ, ನಿರ್ದೇಶಕ ಕುಯ್ಯಮುಡಿ ಮನೋಜ್ ವಂದಿಸಿದರು.