ಮಡಿಕೇರಿ, ಆ. ೩೧: ಮಡಿಕೇರಿ ದಸರಾ ಕ್ರೀಡಾ ಸಮಿತಿಯ ಪೂರ್ವಭಾವಿ ಸಭೆ ರಾಜ್ ದರ್ಶನ್ ಸಭಾಂಗಣದಲ್ಲಿ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ಸಮಿತಿಯ ಹಿರಿಯ ಸಲಹೆಗಾರ ರವಿ ಕರ್ಕೇರ ಉದ್ಘಾಟಿಸಿದರು. ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಸದಸ್ಯರು ಲಾಂಛನ ಬಿಡುಗಡೆ ಮಾಡಿದರು. ದಶಮಂಟಪ ಸಮಿತಿ ಅಧ್ಯಕ್ಷ ಹರೀಶ್, ಸಲಹೆಗಾರÀ ಮನು ಮಂಜುನಾಥ್, ಹಿರಿಯ ಸಲಹೆಗಾರÀ ಕೃಷ್ಣ, ಖಜಾಂಚಿ ಮನೋಹರ್ ಉಪಸ್ಥಿತರಿದ್ದರು. ಪ್ರದೀಪ್ ಮರಗೋಡು ಸ್ವಾಗತಿಸಿದರು, ಕ್ರೀಡಾ ಸಮಿತಿ ಸಹ ಕಾರ್ಯದರ್ಶಿ ನಿರಂಜನ್ ವಂದಿಸಿದರು.