ಮಡಿಕೇರಿ, ಆ. ೩೧: ನಗರದ ವಿಕಾಸ್ ಜನಸೇವಾ ಕೇಂದ್ರದಲ್ಲಿರುವ ೩೪ ಆಶ್ರಿತರಿಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಉಚಿತ ನೇತ್ರ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು. ನೇತ್ರ ತಜ್ಞರಾದ ಡಾ. ಎಸ್.ಎಂ. ಚೇತನ್, ಡಾ. ಸಿ.ಆರ್. ಪ್ರಶಾಂತ್ ನೇತ್ರ ತಪಾಸಣೆ, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಚೇತನ್ ಮತ್ತು ಡಾ. ಸುಹಾಸ್ ಆರೋಗ್ಯ ತಪಾಸಣೆ ನಡೆಸಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ನಿರ್ದೇಶಕರಾದ ಜಗದೀಶ್ ಪ್ರಶಾಂತ್, ಪ್ರಮೋದ್ ರೈ ಪ್ರಕಾಶ್ ಪೂವಯ್ಯ, ಪ್ರಸಾದ್ ಗೌಡ ಹಾಗೂ ತಾನ್ಯ ನಿರ್ವಹಿಸಿದರು.