ಐಗೂರು: ಕಿರುಗಂದೂರು ಗ್ರಾಮದ ದುರ್ಗಾ ನಗರದ ಸ್ಕಂದ ಯುವಕ ಸಂಘದ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅರ್ಚಕರಿಂದ ಪ್ರತಿಷ್ಠಾಪನ ಪೂಜಾ ವಿಧಿಗಳು ನಡೆದ ನಂತರ ಪ್ರಸಾದ ವಿನಿಯೋಗ ನಡೆಯಿತು. ಸಮಿತಿಯ ಅಧ್ಯಕ್ಷ ಗಗನ್, ಉಪಾಧ್ಯಕ್ಷ ಜೀವನ್ ಆರ್ ಮತ್ತು ಖಜಾಂಚಿ ಪ್ರಕಾಶ್, ಸದಸ್ಯರಾದ ಅಜಿತ್ ಆರ್, ಮಹೇಶ್, ಧರ್ಮ, ಗಿರೀಶ್, ಗೌತಮ್, ಮನೋಜ್, ರಮೇಶ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಗೂರು: ಐಗೂರಿನ ಮುತ್ತಪ್ಪ ದೇವಾಲಯದಲ್ಲಿ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅರ್ಚಕರು ವಿವಿಧ ಪೂಜಾ ಕೈಂಕರ್ಯಗಳ ಮೂಲಕ ಪ್ರತಿಷ್ಠಾಪನ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಜಿತ್, ಸದಸ್ಯರಾದ ಅಕ್ಷಯ್, ರೋಷನ್, ಸುನಿಲ್, ಪುನೀತ್, ದರ್ಶನ್, ಧನುಷ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಐಗೂರು: ಗರಗಂದೂರಿನ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅರ್ಚಕರಿಂದ ಪ್ರತಿಷ್ಠಾಪನ ಪೂಜೆಗಳು, ಭಕ್ತಾದಿಗಳಿಂದ ಹಣ್ಣು ಕಾಯಿ ಪೂಜೆಗಳು ನಡೆದವು. ಪ್ರಸಾದ ವಿನಿಯೋಗ ನಡೆಯಿತು. ಪ್ರತಿಷ್ಠಾಪನ ಕಾರ್ಯದಲ್ಲಿ ಅಧ್ಯಕ್ಷರಾದ ರೋಹಿತ್ ಪೂಜಾರಿ, ಉಪಾಧ್ಯಕ್ಷ ಸಜೇಶ್ ಪೂಜಾರಿ, ಸಮಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ೬೧ನೇ ವರ್ಷದ ಸ್ವರ್ಣ ಗಣೇಶ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಶ್ರೀರಾಮ ಮಂದಿರದಲ್ಲಿ ನಡೆಯಿತು. ದಿನದ ವಿಶೇಷ ಪೂಜಾ ಕೈಂಕರ್ಯಗಳನ್ನು ಹಿರಿಯರಾದ ಗಣೇಶ್ ಶರ್ಮಾ, ಮಂಜುನಾಥ್ ಶರ್ಮಾ ನೆರವೇರಿಸಿದರು. ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮಂಗಳಾರತಿ ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಆಶೋಕ್ ಶೇಟ್, ಟ್ರಸ್ಟಿ ಎ.ಲೋಕೇಶ್ ಕುಮಾರ್, ಶಾಂತರಾA ಕಾಮತ್, ಬಿ.ಎಂ ಸುರೇಶ್, ಧನು ಕಾವೇರಪ್ಪ, ಎಂ.ಎಸ್.ಸುನಿಲ್, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಸದಾಶಿವ, ಪಟ್ಟೆಮನೆ ಅನಿಲ್‌ಕುಮಾರ್, ಬಿ.ಕೆ.ಮೋಹನ್, ಗೌರಿ - ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಸ್ ವಿಘ್ನೇಶ್,÷ಉಪಾಧ್ಯಕ್ಷರುಗಳಾದ ಬಿ.ಕೆ.ಪ್ರಶಾಂತ್, ಸಿ.ಸಿ ಸುನಿಲ್ ಕುಮಾರ್, ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿ ಎಚ್.ಎಂ ನಿಖಿಲ್, ಖಜಾಂಚಿ ಪದ್ಮನಾಭ, ಪದಾಧಿಕಾರಿಗಳಾದ ಎಂ.ಪಾAಡ್ಯನ್, ಹೆಚ್ ನವೀನ್, ಜಿ.ಹೃತಿಕ್, ಆರ್.ಮಣಿ, ಕೆ.ಎಂ.ಅಜಿತ್, ಆರ್.ಪ್ರಶಾಂತ್, ಎಸ್.ರಾಜೇಶ್, ಬಿ.ಡಿ.ಅಶ್ವಥ್, ಹೆಚ್.ಸಿ.ಯೋಗೇಶ್, ಚೇತನ್, ಆರ್.ಪುನೀತ್, ಗುಣಶೇಖರ್, ತ್ರೀಜಲ್, ಮಹೇಶ್, ದಿನೇಶ್, ಮಿಥುನ್ ಸೇರಿದಂತೆ ನೂರಾರು ಭಕ್ತಾದಿಗಳು ನೆರೆದಿದ್ದರು.

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನಾದ್ಯಂತ ಗಣೇಶ ಪ್ರತಿಷ್ಠಾಪನೆ ಅದ್ದೂರಿಯಿಂದ ನಡೆಯಿತು.

ಗೋಣಿಕೊಪ್ಪ ಒಂದನೇ ವಿಭಾಗ ಉಮಾಮಹೇಶ್ವರಿ ಬಡಾವಣೆಯ ಪ್ರಸನ್ನ ಗಣಪತಿ ಸೇವಾ ಸಂಘ ವತಿಯಿಂದ ೧೪ನೇ ವರ್ಷದ ಗಣೇಶ ಪ್ರತಿಷ್ಠಾಪನೆ ಅದ್ದೂರಿಯಾಗಿ ನಡೆಯಿತು. ಅನ್ನದಾನ, ಕ್ರೀಡಾಕೂಟ, ಸತ್ಸಂಗ, ಭಕ್ತಿ ಗೀತೆಗಳ ಗಾಯನ, ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಿದವು. ಗ್ರಾಮೀಣ ಆಟೋಟ ಸ್ಪರ್ಧೆಗೆ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್ ಹಾಗೂ ದಾನಿಗಳಾದ ನಾಗರಾಜ್ ಅವರು ಮಣ್ಣಿನ ಮಡಿಕೆ ಒಡೆಯುವ ಮೂಲಕ ಚಾಲನೆ ನೀಡಿದರು. ಭಗತ್ ಸಿಂಗ್ ಯುವಕ ಸಂಘ ಗೋಣಿಕೊಪ್ಪ, ವಿನಾಯಕ ಭಕ್ತ ವೃಂದ ವೆಂಕಟಪ್ಪ ಬಡಾವಣೆ, ನೇತಾಜಿ ಗಣೇಶೋತ್ಸವ ಸಮಿತಿ, ಶ್ರೀ ವಿಘ್ನೇಶ್ವರ ಸೇವಾ ಸಮಿತಿ, ಚೆನ್ನಂಗೊಲ್ಲಿ, ಸೇರಿದಂತೆ ಸುಮಾರು ೧೧ ಕಡೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಿತು.

ವಿನಾಯಕ ಮಿತ್ರಮಂಡಳಿ ಧನುಗಾಲ, ವರ ಸಿದ್ಧಿ ವಿನಾಯಕ ಭಕ್ತ ಮಂಡಳಿ ಹೊಸ ಬಡಾವಣೆ, ಸಿದ್ಧಿವಿನಾಯಕ ಭಕ್ತ ಮಂಡಳಿ ದೇವರಪುರ, ಶ್ರೀ ಗೌರಿ ಗಣೇಶ ಸೇವಾ ಸಮಿತಿ ಹೆಬ್ಬಾಲೆ, ಕಾರೇಹಡ್ಲು, ಭದ್ರಗೋಳ ಗ್ರಾಮ ಸೇರಿದಂತೆ ಇತರೆಡೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಯಿತು.

ಪೊನ್ನಂಪೇಟೆ ಪಟ್ಟಣದ ೧೦ ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಬಸವೇಶ್ವರ ದೇವಸ್ಥಾನ ಸೇರಿದಂತೆ ಕೃಷ್ಣ ನಗರದ ಶ್ರೀ ಕೃಷ್ಣ ಯುವಕ ಸಂಘ, ಶಿವ ಕಾಲೋನಿಯ ಶ್ರೀ ಶಿವ ಯುವಕ ಸಂಘ, ಮಹಾತ್ಮಗಾಂಧಿ ನಗರದ ಯುವಶಕ್ತಿ ಯುವಕ ಸಂಘ, ವಿಘ್ನೇಶ್ವರ ವಾಹನ ಚಾಲಕ ಹಾಗೂ ಮಾಲೀಕರ ಸಂಘ, ಕಾಟ್ರಕೊಲ್ಲಿ ಗಜಮುಖ ಗೆಳೆಯರ ಬಳಗ, ಜೋಡುಬೀಟಿ ವಿನಾಯಕ ಯುವಕರ ಬಳಗ, ಕುಂದ ರಸ್ತೆಯ ಗಜಾನನ ಗೆಳೆಯರ ಬಳಗ, ಜನತಾ ಕಾಲೋನಿಯ ಜನತಾ ವಿನಾಯಕ ಬಳಗ ಹಾಗೂ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಸಮಿತಿಯವರು ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದರು.

ಐಗೂರು: ಐಗೂರಿನ ವಿಜಯನಗರದ ಗಜಾನನ ಯುವಕ ಸಂಘದ ವತಿಯಿಂದ ಗುಳಿಗಪ್ಪ ಸಮುದಾಯ ಭವನದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅರ್ಚಕರಾದ ರವಿ, ಪ್ರತಿಷ್ಠಾಪನ ಪೂಜೆಗಳನ್ನು ನೆರವೇರಿಸಿದರು. ಪ್ರಸಾದ ವಿನಿಯೋಗ ನಡೆಯಿತು. ಸಮಿತಿಯ ಅಧ್ಯಕ್ಷ ವಿನಯ, ಉಪಾಧ್ಯಕ್ಷ ರವಿ, ಕಾರ್ಯದರ್ಶಿ ಹರೀಶ್, ಖಜಾಂಚಿ ಚಂದ್ರು, ಗುಳಿಗಪ್ಪ ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಸುಂಟಿಕೊಪ್ಪ: ಶ್ರೀದೇವಿ ನಾರ್ಗಾಣೆ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿಯ ೧೨ನೇ ವರ್ಷದ ಗೌರಿ ಗಣೇಶೋತ್ಸವದ ಅಂಗವಾಗಿ ಅಣ್ಣಪ್ಪಸ್ವಾಮಿ ದೇವಸ್ಥಾನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ತಾ.೨೭ರ ಬೆಳಿಗ್ಗೆ ೧೦.೩೦ಕ್ಕೆ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊAಡು ೧೧ ಗಂಟೆಗೆ ತುಲಾ ಲಗ್ನದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ದಿನದ ವಿಶೇಷ ಪೂಜಾ ಕೈಂಕರ್ಯಗಳನ್ನು ಕೆದಕಲ್ ಈಶ್ವರ ಮಹದೇವ ದೇವಾಲಯದ ಆರ್ಚಕರಾದ ಲೋಕೇಶ್ ಆರಾಧ್ಯ ಹಾಗೂ ಅವಿನಾಶ್ ಆರಾಧ್ಯ ನೆರವೇರಿಸಿದರು.

ಮಹಾಮಂಗಳಾರತಿಯೊAದಿಗೆ ನೆರೆದಿದ್ದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ಸಮಿತಿ ಅಧ್ಯಕ್ಷ ಎಂ.ಜೆ ಆಕಾಶ್, ಸದಸ್ಯರಾದ ಕಿರಣ್, ಕಾರ್ತಿಕ್, ಸುಧಿ, ಮೋಹನ್, ಬಿ.ಕೆ.ರಾಜೇಶ್, ಬಿ.ಡಿ.ರಾಜುರೈ, ಶರತ್, ವಿವೇಕ್ ರೈ, ಕುಶಾಲಪ್ಪ ಪಿ.ಆರ್.ಸುನಿಲ್ ಕುಮಾರ್ ಮತ್ತಿತರರು ಇದ್ದರು.

ಸುಂಟಿಕೊಪ್ಪ: ೭ನೇ ಹೊಸಕೋಟೆ ಗಳೆಯರ ಬಳಗದ ವತಿಯಿಂದ ೪೦ನೇ ಉತ್ಸವ ಗಣೇಶ ಮೂರ್ತಿಯನ್ನು ಶ್ರೀ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.

ಎಮ್ಮೆಗುಂಡಿ ಶ್ರೀ.ಬಾಲಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶೋತ್ಸವದ ಪ್ರಯುಕ್ತ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಸುಂಟಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಗಣಹೋಮ ಮತ್ತು ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇದೇ ವೇಳೆ ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆಯೊಂದಿಗೆ ತೀರ್ಥ ಪ್ರಸಾದದೊಂದಿಗೆ ಭಕ್ತಾದಿಗಳಿಗೆ ಲಘುಉಪಹಾರ ನೀಡಲಾಯಿತು. ಸಮಿತಿಯ ಗೌರವಾಧ್ಯಕ್ಷ ಸಂಜೀವ, ಅಧ್ಯಕ್ಷ ಸಜಿತ್, ಕಾರ್ಯದರ್ಶಿ ಪ್ರವೀಣ ಹಾಗೂ ಗ್ರಾಮಸ್ಥರು ಇದ್ದರು.ಕುಶಾಲನಗರ: ಕುಶಾಲನಗರ ಇಂದಿರಾ ಬಡಾವಣೆಯ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ಹಾಗೂ ಗೋಲ್ಡನ್ ಗೆಳೆಯರ ಬಳಗದ ಆಶ್ರಯದಲ್ಲಿ ೨೩ ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಕಿರಿಯರು-ಹಿರಿಯರು ಎನ್ನದೆ ಜಾತಿ ಭೇದ ಮರೆತು ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿದರು.

ಸ್ಥಳೀಯ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಂಗೀತ ಕುರ್ಚಿ, ಪಾಸಿಂಗ್ ದ ಬಾಲ್, ಲೆಮೆನ್ ವಿತ್ ಸ್ಪೂನ್, ಕೆರೆ-ದಡ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಡಾವಣೆಯ ನಿವಾಸಿಗಳು ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ವಿದ್ಯುತ್ ದೀಪಾಲಂಕಾರ ಸೇರಿದಂತೆ ಭಕ್ತರ ಗಮನ ಸೆಳಯುವಂತೆ ಹಲವು ಹೂವುಗಳಿಂದ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮಂಟಪವನ್ನು ಅದ್ದೂರಿಯಾಗಿ ಸಿಂಗರಿಸಲಾಗಿತ್ತು. ಬಡಾವಣೆಯ ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು. ನಂತರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.

ಗಣೇಶೋತ್ಸವದ ಅಂಗವಾಗಿ ಸ್ಥಳೀಯ ಶರಣ್ ಸಾರಥ್ಯದ ಡ್ರೀಮ್ ಸ್ಟಾರ್ ನೃತ್ಯ ಸಂಸ್ಥೆ ಹಾಗೂ ನಿಶಿ ಸಾರಥ್ಯದ ಡಿ.ಸಿ. ಡ್ಯಾನ್ಸ್ ಸ್ಟುಡಿಯೋ ವತಿಯಿಂದ ನಡೆದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮ ನೆರೆದಿದ್ದವರ ಗಮನ ಸೆಳೆಯಿತು.

ಈ ವೇಳೆ ಮಾತನಾಡಿದ ಗೋಲ್ಡನ್ ಗೆಳೆಯರ ಬಳಗದ ಅಧ್ಯಕ್ಷ ಭಕ್ತರಾಜು, ಗಣಪತಿ ಕಾರ್ಯಕ್ರಮಗಳು ಮೋಜು ಮಸ್ತಿ ಮಾಡುವ ಕಾರ್ಯಕ್ರಮಗಳಲ್ಲ. ಈ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಸಮಾಜದ ಜನರನ್ನು ಒಂದೆಡೆ ಬೆರೆಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ. ಜಾತಿ ಭೇದಗಳನ್ನು ಮರೆತು ಎಲ್ಲರೂ ಒಂದಾಗಿ ಈ ಕಾರ್ಯಕ್ರಮವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು. ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ನಡೆಸಿದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭ ಗೋಲ್ಡನ್ ಗೆಳೆಯರ ಬಳಗದ ಉಪಾಧ್ಯಕ್ಷ ರಿಯಾಜ್, ಕಾರ್ಯದರ್ಶಿ ಆದಂ, ಖಜಾಂಚಿ ಶರಣ್, ಪ್ರಮುಖರಾದ ಜಗದೀಶ್ ಕುಮಾರ್, ಗಿರೀಶ್, ಯತೀಶ, ಪೂರ್ಣಚಂದ್ರ, ಮನು, ಸಮೀವುಲ್ಲಾ, ಕುಮಾರ್, ರಿತಿನ್, ಧನು, ಮಂಜು, ಸೇರಿದಂತೆ ಮತ್ತಿತರರು ಹಾಜರಿದ್ದರು.

ಸುಂಟಿಕೊಪ್ಪ: ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ೭ನೇ ವರ್ಷದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.

ತಾ.೨೭ರ ಬೆಳಿಗ್ಗೆ ೫ ಗಂಟೆಗೆ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ನಂತರ ಮಹಾಮಂಗಳಾರತಿ ಯೊಂದಿಗೆ ಪ್ರಸಾದ ವಿನಿಯೋಗ ನಡೆಯಿತು.

ಸಂಜೆ ೬ ಗಂಟೆಯಿAದ ಕೊಡಗರಹಳ್ಳಿ ಬೈತೂರಪ್ಪ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆದು ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸುಂಟಿಕೊಪ್ಪ: ಎಮ್ಮೆಗುಂಡಿ ಶ್ರೀ ಬಾಲ ಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶೋತ್ಸವ ಆಚರಣೆ ನಡೆಯಿತು. ಶ್ರೀ ಗೌರಿ ಗಣೇಶೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳು ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಕೇಸರಿ ತಳಿರು ತೋರಣಗಳಿಂದ ಸಿಂಗರಿಸಿ ಶ್ರೀ ಗಣೇಶ ಚತುರ್ಥಿಯಂದು ಗಣೇಶನನ್ನು ಪ್ರತಿಷ್ಠಾಪಿಸಿದರು. ಸುಂಟಿಕೊಪ್ಪ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕರಾದ ಗಣೇಶ್ ಭಟ್ ಗಣಪತಿ ಹೋಮ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಹಿಳೆಯರಿಂದ, ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಬಾಲ ಗಣಪತಿ ಮಿತ್ರ ಮಂಡಳಿ ಗೌರವ ಅಧ್ಯಕ್ಷ ಸಂಜೀವ, ಅಧ್ಯಕ್ಷ ಸಜೀತ್, ಉಪಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಜೀವನ್, ಸಹ ಕಾರ್ಯದರ್ಶಿ ಮಂಜು, ಸಮಿತಿ ಸದಸ್ಯರು ಇತರರು ಹಾಜರಿದ್ದರು.ಸುಂಟಿಕೊಪ್ಪ: ಎಮ್ಮೆಗುಂಡಿ ಶ್ರೀ ಬಾಲ ಗಣಪತಿ ಮಿತ್ರ ಮಂಡಳಿ ವತಿಯಿಂದ ಪ್ರಥಮ ವರ್ಷದ ಗೌರಿ ಗಣೇಶೋತ್ಸವ ಆಚರಣೆ ನಡೆಯಿತು. ಶ್ರೀ ಗೌರಿ ಗಣೇಶೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳು ದೇವಾಲಯವನ್ನು ವಿದ್ಯುತ್ ದೀಪ ಹಾಗೂ ಕೇಸರಿ ತಳಿರು ತೋರಣಗಳಿಂದ ಸಿಂಗರಿಸಿ ಶ್ರೀ ಗಣೇಶ ಚತುರ್ಥಿಯಂದು ಗಣೇಶನನ್ನು ಪ್ರತಿಷ್ಠಾಪಿಸಿದರು. ಸುಂಟಿಕೊಪ್ಪ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಅರ್ಚಕರಾದ ಗಣೇಶ್ ಭಟ್ ಗಣಪತಿ ಹೋಮ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಹಿಳೆಯರಿಂದ, ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು. ಶ್ರೀ ಬಾಲ ಗಣಪತಿ ಮಿತ್ರ ಮಂಡಳಿ ಗೌರವ ಅಧ್ಯಕ್ಷ ಸಂಜೀವ, ಅಧ್ಯಕ್ಷ ಸಜೀತ್, ಉಪಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ಜೀವನ್, ಸಹ ಕಾರ್ಯದರ್ಶಿ ಮಂಜು, ಸಮಿತಿ ಸದಸ್ಯರು ಇತರರು ಹಾಜರಿದ್ದರು.ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯದ ಸಾರ್ವಜನಿಕ ಗಣೇಶ ಉತ್ಸವ ಆಚರಣಾ ಸಮಿತಿ ವತಿಯಿಂದ ಪ್ರಥಮ ವರ್ಷದ ಗಣೇಶ ಉತ್ಸವವನ್ನು ನ್ಯೂ ಫ್ರೆಂಡ್ಸ್ ಕ್ಲಬ್ ಮೈದಾನದಲ್ಲಿ ಆಚರಿಸಲಾಯಿತು.

ಮಹಾಗಣಪತಿ ವಿಗ್ರಹ ಪ್ರತಿಷ್ಠಾಪನೆ ಬಳಿಕ ವಿವಿಧ ಪೂಜಾ ವಿಧಾನಗಳು ನಡೆದವು. ಬಳಿಕ ಅನ್ನದಾನ ನೆರವೇರಿತು. ಸಂಜೆÀ ಮೆರವಣಿಗೆಯಲ್ಲಿ ವಾದ್ಯಗೋಷ್ಠಿಯೊಂದಿಗೆ ತೆರಳಿ ಕರಿಕೆ ಹೊಳೆಯಲ್ಲಿ ವಿಸರ್ಜನೆ ಮಾಡಲಾಯಿತು.ಐಗೂರು: ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಐಗೂರಿನ ವಿವಿಧೆಡೆ ಪ್ರತಿಷ್ಠಾಪಿಸÀಲಾದ ಗಣೇಶ ಮೂರ್ತಿಯ ಸ್ಥಳಗಳಿಗೆ ಭೇಟಿ ನೀಡಿ ಧನಸಹಾಯ ನೀಡಿದರು. ವಿಜಯನಗರದ ಗಜಾನನ ಯುವಕ ಸಂಘ, ಏಕದಂತ ಗೆಳೆಯರ ಬಳಗ, ದುರ್ಗಾ ನಗರದ ಸ್ಕಂದ ಯುವಕ ಸಂಘ, ಕುಂಬಾರ ಬಾಣೆಯ ವಿನಾಯಕ ಸೇವಾ ಸಮಿತಿ ಮತ್ತು ಮಾದಾಪುರದ ಗಣಪತಿ ದೇವಾಲಯಗಳಿಗೆ ಭೇಟಿ ನೀಡಿದ ಶಾಸಕರು ಸಹಾಯಧನ ವಿತರಿಸಿದರು. ಗಣಪನಿಗೆ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಹಬ್ಬದ ಶುಭಾಶಯ ಕೋರಿದರು.