ಮಡಿಕೇರಿ, ಆ. ೩೧: ಬೆಂಗಳೂರು ಮೂಲದ ಟ್ರಾನ್ಸ್ಫಾರ್ಮಿಂಗ್ ಟುಮಾರೊ ಫೌಂಡೇಶನ್ ನೇತೃತ್ವದಲ್ಲಿ ಆಸ್ಟೆರ್ ವಾಲೆಂಟಿಯರ್ಸ್ ಹಾಗೂ ೦೯ ಸೊಲ್ಯೂಷನ್ಸ್ ಅವರ ಸಹಯೋಗದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮೊಬೈಲ್ ಮೆಡಿಕಲ್ ಯೂನಿಟ್ ಸಂಚಾರಿ ವಾಹನದ ಮೂಲಕ ವೈದ್ಯರು, ಸಿಬ್ಬಂದಿಗಳ ಒಳಗೊಂಡ ತಂಡದಿAದ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಚೆನ್ನಯ್ಯನಕೋಟೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು.
ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಬಿ. ಹೆಚ್. ಸಂಪ್ರೀತ್ ಮಾತನಾಡಿ, ಕೊಡಗಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಸುತ್ತಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಮುಂತಾದ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದರು. ಡಾ. ಮೇಘಾ ಮಾತನಾಡಿ, ಗ್ರಾಮೀಣ ಭಾಗದ ಜನರ ಆರೋಗ್ಯ ಕಾಳಜಿ ಹಾಗೂ ಆರೈಕೆಗಾಗಿ ಸಂಚಾರಿ ವಾಹನದ ಮೂಲಕ ಗ್ರಾಮ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು, ಕಣ್ಣಿನ ತಪಾಸಣೆ ಮೂಲಕ ಅವಶ್ಯಕತೆ ಇರುವವರಿಗೆ ಕನ್ನಡಕ ವಿತರಿಸಲಾಗಿದೆ ಇದರೊಂದಿಗೆ ಔಷಧಿಯನ್ನೂ ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿಜು, ಆರೋಗ್ಯ ಸಹಾಯಕಿ ವೀರಮ್ಮ, ಪ್ರಮೀಳಾ, ಆಶಾ ಕಾರ್ಯಕರ್ತೆ ಇಂದಿರಾ, ಲಿಖಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.