ಸೋಮವಾರಪೇಟೆ, ಆ. ೨೮: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಕಂದಕಕ್ಕೆ ಪಲ್ಟಿಯಾದ ಘಟನೆ ಸೋಮವಾರಪೇಟೆ-ಕುಶಾಲನಗರ ರಾಜ್ಯ ಹೆದ್ದಾರಿಯ ಯಡವನಾಡು ಬಳಿಯಲ್ಲಿ ನಿನ್ನೆ ನಡೆದಿದ್ದು, ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತೋಳೂರುಶೆಟ್ಟಳ್ಳಿ ಸಮೀಪದ ಸಿಂಗನಳ್ಳಿ ಗ್ರಾಮದ ಯುವರಾಜ್ ಎಂಬವರು ಚಾಲಿಸುತ್ತಿದ್ದ ಕಾರು, ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಪಲ್ಟಿಯಾಗಿದೆ. ಯುವರಾಜ್ ಅವರು ತಮ್ಮ ಪುತ್ರನನ್ನು ಕುಶಾಲನಗರಕ್ಕೆ ಬಿಟ್ಟು ವಾಪಸ್ ಆಗುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.
ಘಟನೆಯಿAದ ಕಾರು ಜಖಂಗೊAಡಿದ್ದು, ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.