ಮಡಿಕೇರಿ, ಆ. ೨೮: ಮಡಿಕೇರಿ ಮುರ್ನಾಡು ರಸ್ತೆಯ ಮೇಕೇರಿ ಬಳಿ ರಸ್ತೆ ಬದಿ ಮಣ್ಣು ಕುಸಿದಿದೆ. ಕೆಲ ವರ್ಷಗಳ ಹಿಂದೆ ಸಿಮೆಂಟ್ ರಸ್ತೆ ನಿರ್ಮಾಣಗೊಂಡಿದ್ದು, ಇದೀಗ ಸಿಮೆಂಟ್ ರಸ್ತೆಯ ಬದಿ ಮಣ್ಣು ಕುಸಿಯುತ್ತಿದೆ. ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಸಂಬAಧಿಸಿದ ಇಲಾಖೆ ಕೂಡಲೇ ಗಮನಹರಿಸಬೇಕಿದೆ.