ಕುಶಾಲನಗರ: ಕುಶಾಲನಗರ ಶೈಲಜಾ ಬಡಾವಣೆಯ ನಿವಾಸಿಗಳ ಸಂಘದ ಆಶ್ರಯದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಿತು. ಬಡಾವಣೆಯ ಮಕ್ಕಳು ಮಹಿಳೆಯರಿಗೆ ಗಣೇಶ ಹಬ್ಬದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಣಪತಿಗೆ ಪೂಜಾ ಕಾರ್ಯಕ್ರಮಗಳ ನಂತರ ಮೆರವಣಿಗೆಯಲ್ಲಿ ತೆರಳಿ ಮೂರ್ತಿ ವಿಸರ್ಜನೆ ನಡೆಯಿತು.
ಕುಶಾಲನಗರ: ಕುಶಾಲನಗರ ಶೈಲಜಾ ಬಡಾವಣೆಯ ನಿವಾಸಿಗಳ ಸಂಘದ ಆಶ್ರಯದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆಯಿತು. ಬಡಾವಣೆಯ ಮಕ್ಕಳು ಮಹಿಳೆಯರಿಗೆ ಗಣೇಶ ಹಬ್ಬದ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗಣಪತಿಗೆ ಪೂಜಾ ಕಾರ್ಯಕ್ರಮಗಳ ನಂತರ ಮೆರವಣಿಗೆಯಲ್ಲಿ ತೆರಳಿ ಮೂರ್ತಿ ವಿಸರ್ಜನೆ ನಡೆಯಿತು.
ಮುಳ್ಳೂರು: ಸಮೀಪದ ಮಾಲಂಬಿ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿಯಿಂದ ೨೦ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು. ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಗೌರಿಮೂರ್ತಿಯನ್ನು ಮತ್ತು ಗಣೇಶನ ಮೂರ್ತಿಯನ್ನು ಗೌರಿ ಗಣೇಶ ಪ್ರತಿಷ್ಠಾಪನಾ ವೇದಿಕೆಯ ಮಂಟಪದಲ್ಲಿ ಶ್ರದ್ಧಾಭಕ್ತಿಯಿಂದ ಕೂರಿಸಲಾಯಿತು. ಮಂಗಳವಾರ ಬೆಳಗ್ಗೆ ಸೇವಾ ಸಮಿತಿಯವರು, ಮಹಿಳೆಯರು, ಮಕ್ಕಳು ಗೌರಿ ದೇವಿಯ ಮೂರ್ತಿಗೆ ಸಾಂಪ್ರದಾಯಿಕವಾಗಿ ಪೂಜಿಸಿದರು. ನಂತರ ಗೌರಿ ದೇವಿಯ ಮೂರ್ತಿ ಹಾಗೂ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ವೇದಿಕೆ ಮಂಟಪದಲ್ಲಿ ಕೂರಿಸಲಾಯಿತು. ನಂತರ ಗೌರಿ ಮತ್ತು ಗಣೇಶನಿಗೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ತಾ. ೨೬ ರಂದು ಗೌರಿಯನ್ನು ಪ್ರತಿಷ್ಠಾಪಿಸಿ ತಾ. ೨೭ ರಂದು ಹರದೂರು ಹೊಳೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಟ್ರಸ್ಟಿಗಳಾದ ಲೋಕೇಶ್ ಕುಮಾರ್, ವೀಣಾ, ವೈದ್ಯಾಧಿಕಾರಿಗಳಾದ ಧನಂಜಯ್, ಛಾಯಾದೇವಿ ಉತ್ಸವ ಸಮಿತಿ ಉಪಾಧ್ಯಕ್ಷರಾದ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಬಿ ಯಶೋಧರ ಹಾಗೂ ಸ್ಥಳೀಯರಾದ ಕಿಶೋರ್, ಮಧುರ, ಶಾಂತಿ, ಸಮಂತ್, ತಸ್ವಿನ್, ಅರ್ಜುನ್ ಹಾಗೂ ಭವೀಸ್ ಉಪಸ್ಥಿತರಿದ್ದರು.ಸುಂಟಿಕೊಪ್ಪ: ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ಶ್ರೀ ವೃಕ್ಷೋದ್ಭವ ಗಣಪತಿ ದೇವಾಲಯದಲ್ಲಿ ತಾ. ೨೬ ರಂದು ಗೌರಿಯನ್ನು ಪ್ರತಿಷ್ಠಾಪಿಸಿ ತಾ. ೨೭ ರಂದು ಹರದೂರು ಹೊಳೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಟ್ರಸ್ಟಿಗಳಾದ ಲೋಕೇಶ್ ಕುಮಾರ್, ವೀಣಾ, ವೈದ್ಯಾಧಿಕಾರಿಗಳಾದ ಧನಂಜಯ್, ಛಾಯಾದೇವಿ ಉತ್ಸವ ಸಮಿತಿ ಉಪಾಧ್ಯಕ್ಷರಾದ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಬಿ ಯಶೋಧರ ಹಾಗೂ ಸ್ಥಳೀಯರಾದ ಕಿಶೋರ್, ಮಧುರ, ಶಾಂತಿ, ಸಮಂತ್, ತಸ್ವಿನ್, ಅರ್ಜುನ್ ಹಾಗೂ ಭವೀಸ್ ಉಪಸ್ಥಿತರಿದ್ದರು.ಕುಶಾಲನಗರ: ಗಣೇಶೋತ್ಸವ ಅಂಗವಾಗಿ ಕುಶಾಲನಗರ ರಥಬೀದಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಾಸವಿ ಯುವಕ ಸಂಘದ ವತಿಯಿಂದ ಆರ್ಯವೈಶ್ಯ ಮಂಡಳಿ ಸಹಯೋಗದೊಂದಿಗೆ ೧೦೧ ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಲಾಯಿತು.
ಐಗೂರು: ಗರಗಂದೂರು ಬಿ. ಗ್ರಾಮದ ಹೊಸತೋಟದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ೭ನೇ ವರ್ಷದ ಗೌರಿ ಗಣೇಶ ಪ್ರಯುಕ್ತ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಗಣಪನಿಗೆ ಹಣ್ಣುಕಾಯಿ ಅರ್ಪಿಸಿದರು. ನಂತರ ಪ್ರಸಾದ ವಿನಿಯೋಗ ನಡೆಯಿತು. ಪ್ರತಿಷ್ಠಾಪನಾ ಕಾರ್ಯದಲ್ಲಿ ಸಮಿತಿ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.ಬಲ್ಯಮಂಡೂರು: ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಣ್ಣಿನ ಗಣೇಶನನ್ನು ತಯಾರಿಸಿದರು. ಮಣ್ಣಿನ ಗಣೇಶ ಪ್ರತಿಷ್ಠಾಪನೆ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬಹುದು ಎಂದು ಮುಖ್ಯ ಶಿಕ್ಷಕರಾದ ಕೆ.ಪಿ ಪವಿತ್ರ ತಿಳಿಸಿದರು. ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್ ಹಸೀನಾ, ಸುನೋಜಮ್ಮ ಹಾಜರಿದ್ದರು.ಕುಶಾಲನಗರ: ಇಲ್ಲಿನ ಸೂರ್ಯ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣಪತಿ ದೇವಾಲಯ ಬಳಿ ಐಬಿ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಯನ್ನು ಅದ್ಧೂರಿ ಮೆರವಣಿಗೆಯಲ್ಲಿ ಸಾಗಿಸಿ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.ಐಗೂರು: ಐಗೂರು ಗ್ರಾ.ಪಂ. ವ್ಯಾಪ್ತಿಯ ಯಡವಾರೆಯಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅರ್ಚಕ ರಿಂದ ಗಣಪನಿಗೆ ನೈವೇದ್ಯ, ಕುಂಕುಮಾರ್ಚನೆ ಪೂಜೆಗಳು ನಡೆದವು. ಸಮಿತಿ ಅಧ್ಯಕ್ಷರಾದ ರಕ್ಷಿತ್, ಉಪಾಧ್ಯಕ್ಷ ವಸಂತ, ಸದಸ್ಯರಾದ ಹರೀಶ್, ರವಿ, ಚೇತನ್, ವೈಶಾಖ ಮತ್ತು ಅಕ್ಷಯ್ ಉಪಸ್ಥಿತರಿದ್ದರು.
ವೀರಾಜಪೇಟೆ: ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಪುದುಪಾಡಿ ಶ್ರೀ ಅಯ್ಯಪ್ಪ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣಪತಿ ದೇಗುಲದಲ್ಲಿ ೪೩ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸ ಲಾಯಿತು. ಗಣೇಶೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಬಳಿಕ ಅರ್ಚಕರು ಪ್ರಾರ್ಥನೆ, ಅಭಿಷೇಕ, ಕುಂಕುಮಾರ್ಚನೆ, ಪಂಚಕಜ್ಜಾಯ ಪ್ರಸಾದ ಅರ್ಪಣೆ, ನೈವೇದ್ಯ ಪ್ರಸಾದವನ್ನು ಅರ್ಪಿಸಿ ಮಹಾಪೂಜೆ ನೆರವೇರಿಸಿದರು. ಬಳಿಕ ಪ್ರಸಾದ ವಿತರಣೆ ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣಾ ಸೇವೆ ಜರುಗಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ರುದ್ರಂ ಚಂಡೆ ಬಳಗದವರಿಂದ ಚಂಡೆ ಸೇವೆ ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವೀರಾಜಪೇಟೆ: ಬಿಳುಗುಂದ ಹೊಸಕೋಟೆ ಗ್ರಾಮದ ಶ್ರೀ ಕಾವೇರಿ ಸಂಘ ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಹೊಸಕೋಟೆ ಸಮುದಾಯ ಭವನದಲ್ಲಿ ೩ನೇ ವರ್ಷದ ಗೌರಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಗಣಪತಿ ಹೋಮ ಮತ್ತು ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಶೆಷ ಪೂಜೆ ನಡೆಯಿತು. ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಅಪರಾಹ್ನ ವಾದ್ಯಗೋಷ್ಠಿಗಳೊಂದಿಗೆ ಪುಷ್ಪ ಅಲಂಕೃತ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯನ್ನು ಗ್ರಾಮದಲ್ಲಿ ನಡೆಸಿ ಗೌರಿ ಗಣೇಶ ಮೂರ್ತಿಗಳನ್ನು ಕೆರೆಯಲ್ಲಿ ವಿಸರ್ಜಿಸಲಾಯಿತು. ಪೂಜಾ ಕೈಂಕರ್ಯಗಳನ್ನು ಬಿಳುಗುಂದ ಗ್ರಾಮದ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.
ಈ ಸಂದರ್ಭ ಸಮಿತಿ ಸದಸ್ಯರಾದ ಎ.ಎ ಸುಬ್ರಮಣಿ (ಸುರೇಶ್) ಉಪಾಧ್ಯಕ್ಷ ಮನೋಹರ ಪಿ.ಕೆ, ಕಾರ್ಯದರ್ಶಿ ಎಂ.ಎಸ್ ಸತೀಶ್, ಖಜಾಂಚಿ ಎ.ವಿ ನವೀನ್ ಹಾಗೂ ತಮ್ಮಯ್ಯ ಎಚ್.ಪಿ. ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವೀರಾಜಪೇಟೆ: ವೀರಾಜಪೇಟೆ ಸಮೀಪದ ಆರ್ಜಿ ಗ್ರಾಮದ ಪೆರುಂಬಾಡಿ ವಾಲ್ಮೀಕಿ ಭವನದಲ್ಲಿ ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ ಗಣೇಶೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿದ್ದರು.
ಪ್ರತಿಷ್ಠಾಪನೆ ಬಳಿಕ ಶ್ರೀದೇವರ ಪ್ರಸಾದವನ್ನು ಪಡೆದ ಶಾಸಕರು, ವಿಘ್ನನಿವಾರಕ ಶ್ರೀ ಗಣಪತಿ ನಾಡಿನ ಎಲ್ಲರಿಗೂ ಒಳಿತನ್ನು ಉಂಟುಮಾಡಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವೀರಾಜಪೇಟೆ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ಕಾಂಗ್ರೆಸ್ ಮುಖಂಡರಾದ ಜೋಕಿಂ, ಶಶಿ, ಕೆಡಿಪಿ ಸದಸ್ಯರು, ಪೊನ್ನಣ್ಣ ಸಿ ಕೆ, ಆರ್ಜಿ ಪಂಚಾಯಿತಿ ಸದಸ್ಯ ಉಪೇಂದ್ರ, ಅನೂಪ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.