ಮಡಿಕೇರಿ, ಆ. ೩೦: ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘÀದ ಅಧ್ಯಕ್ಷ ಮಂದ್ರೀರ ಎನ್.ತೇಜಸ್ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ೨೦೨೪-೨೫ನೇ ಸಾಲಿನಲ್ಲಿ ಹಾಕತ್ತೂರು ಕೃಷಿ ಪತ್ತಿನ ಸಹಕಾರ ಸಂಘವು ೪೩.೯೪ ಲಕ್ಷ ನಿವ್ವಳ ಲಾಭವನ್ನು ಪಡೆದುಕೊಂಡಿದೆ. ಲಭಾಂಶದಲ್ಲಿ ಸದಸ್ಯರಿಗೆ ಶೇ.೧೧.೫೦ ಡಿವಿಡೆಂಡನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸಂಘÀವು ಒಟ್ಟು ೧,೩೩೩ ಸದಸ್ಯರನ್ನು ಹೊಂದಿದ್ದು, ೧೮೧.೩೨ ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೩೦೬.೭೫ ಲಕ್ಷ ವ್ಯಾಪಾರ ವಹಿವಾಟು ನಡೆಸಿ, ೧೭.೬೧ ಲಕ್ಷ ವ್ಯಾಪಾರ ಲಾಭವನ್ನು ಗಳಿಸಿದೆ.
ಸಂಘದ ಒಟ್ಟಾರೆ ಸಾಲ ಮರುಪಾವತಿ ಕಳೆದ ಮಾರ್ಚ್ ಅಂತ್ಯಕ್ಕೆ ಶೇ.೯೯ ರಷ್ಟಿದೆ. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿAದ ಪಡೆದ ಕೃಷಿ ಸಾಲದ ಮರುಪಾವತಿ ಶೇ.೧೦೦ ರಷ್ಟಿದೆ ಎಂದು ವಿವರಿಸಿದರು.
ಸಂಘ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ಪ್ರಸಕ್ತ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ತರಗತಿಗೆ ವರ್ಗೀಕರಣವಾಗಿದೆಯೆಂದು ಇದೇ ಸಂದರ್ಭ ಅಧ್ಯಕ್ಷ ತೇಜಸ್ ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ-ಮಹಾಸಭೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಬಿಳಿಗೇರಿ ಗ್ರಾಮದ ನವೀನ್ ಕುಮಾರ್ ಎಂ.ಕೆ. ಅವರ ಪುತ್ರಿ ಪ್ರೇರಣ ಎಂ.ಎನ್., ಬಿಳಿಗೇರಿ ಗ್ರಾಮದ ವಸಂತ ಹೆಚ್.ಆರ್. ಅವರ ಪುತ್ರಿ ಮಾನ್ವಿತ ಹೆಚ್.ವಿ, ಪಿಯುಸಿಯಲ್ಲಿ ಮೇಕೇರಿಯ ನಾರುಕೋಡಿ ಯು.ಹಿಮೇಶ್ ಅವರ ಪುತ್ರ ಆಯುಷ್ ಎನ್.ಹೆಚ್, ಹಾಕತ್ತೂರಿನ ಶರೀಫ ಎಸ್.ಎ. ಅವರ ಪುತ್ರಿ ಶರ್ಫಿಯಾ ಪಿ.ಎಸ್., ಪದವಿಯಲ್ಲಿ ಬಿಳಿಗೇರಿ ನಿವಾಸಿ ಪರ್ಲಕೋಟಿ ಎ.ಭರತ್ ಕುಮಾರ್ ಅವರ ಪುತ್ರ ನಿಖಿತ್ ಪಿ.ಬಿ, ಬಿಳಿಗೇರಿ ಗ್ರಾಮದ ಎಸ್.ಜಿ. ಉಮೇಶ್ ಅವರ ಪುತ್ರ ತೇಜಸ್ ಎಸ್.ಯು. ಅವರಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘÀದ ಉಪಾಧ್ಯಕ್ಷರಾದ ಮಂಞÂÃರ ಕೆ.ಉಮೇಶ್, ನಿರ್ದೇಶಕರುಗಳಾದ ಪರ್ಲಕೋಟಿ ಎ.ಕಾವೇರಪ್ಪ, ತುಂತಜ್ಜಿರ ಆರ್. ತಿಮ್ಮಯ್ಯ, ತೋರೆರ ಎಂ. ಅಯ್ಯಪ್ಪ, ಮಂಞÂÃರ ಪಿ. ತಿಮ್ಮಯ್ಯ, ಉಳುವಾರನ ಜಿ. ಗೀತಾ, ಬಿದ್ದಂಡ ಡಿ. ಗಂಗಮ್ಮ, ಮಲೆಯರ ಆರ್. ಧರಣೇಶ್, ಚೋಂಡಿರ ಜಿ.ಚಂಗಪ್ಪ, ಟಿ.ವಿ. ಲೋಕೇಶ್, ಹೆಚ್.ಆರ್. ವಾಸಪ್ಪ, ಎಂ.ಜಿ. ಕೃಷ್ಣಪ್ಪ, ಕೆಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಎಸ್.ಡಿ. ನವೀನ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಂ. ತೀರ್ಥಕುಮಾರ್ ಉಪಸ್ಥಿತರಿದ್ದರು.