ಪೆರಾಜೆ,ಆ.೩೦; ಕೇರಳ ರಾಜ್ಯದ ಪಾಣತ್ತೂರು ರಾಜ್ಯ ಹೆದ್ದಾರಿಯಿಂದ ಕಲ್ಲಪಳ್ಳಿ ಮಾರ್ಗವಾಗಿ ಕೊಡಗು ಜಿಲ್ಲೆಯ ಪೆರಾಜೆಗೆ ಸಂಪರ್ಕ ಕಲ್ಪಿಸುವ ಅಂತರರಾಜ್ಯ ರಸ್ತೆ ನಿರ್ಮಾಣ ಸಂಬAಧ ಸಾಧಕ-ಬಾಧಕಗಳ ಚರ್ಚೆ ನಡೆಸುವ ಸಲುವಾಗಿ ಸೆ.೧ರಂದು ಪೆರಾಜೆಯ ಕುಂಬಳಚೇರಿ ಗ್ರಾಮದ ಸಹಕಾರಿ ಪತ್ತಿನ ಸಭಾಭವನದಲ್ಲಿ ಮೊದಲ ಹಂತದ ಸಭೆ ಏರ್ಪಡಿಸಲಾಗಿದೆ.

ಕೇರಳ ರಾಜ್ಯದ ಪಾಣತ್ತೂರು ರಾಜ್ಯ ಹೆದ್ದಾರಿಯಿಂದ ಕಲ್ಲಪಳ್ಳಿ ಮಾರ್ಗವಾಗಿ ಕರ್ನಾಟಕ ರಾಜ್ಯದ ಸುಳ್ಯ ತಾಲೂಕಿನ ಬಡ್ಡಡ್ಕ ಮೂಲಕ ಪೆರಾಜೆ ಗ್ರಾಮದ ಕುಂದಲ್ಪಾಡಿಯಿAದ ಕುಂಬಳಚೇರಿ ಮುಖಾಂತರ ಕಾಸ್ಪಾಡಿ ಎಂಬಲ್ಲಿವರೆಗೆ ೨೭೫ನೇ ರಾಷ್ಟಿçÃಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ೧೩ ಮೀಟರ್ ಅಗಲದ ಅಂತರರಾಜ್ಯ ದ್ವಿಪಥ ರಸ್ತೆ ನಿರ್ಮಾಣ ಸಂಬAಧ ಕಾಸರಗೋಡು ಮಲೆನಾಡು ಜಂಟಿ ಕ್ರಿಯಾ ಸಮಿತಿ ವಿಶೇಷ ಸಭೆ ಈಚೆಗೆ ನಡೆಯಿತು. ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್ ಅವರ ಅಧ್ಯಕ್ಷತೆಯಲ್ಲಿ ಕೂರ್ನಡ್ಕ ಶಾಂತಾರಾA ಭಟ್ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಕೆಲವೊಂದು ತೀರ್ಮಾನ ಕೈಗೊಳ್ಳಲಾಯಿತು.

ಮಹತ್ವಾಕಾಂಕ್ಷೆಯ ರಸ್ತೆ ಹಾದು ಹೋಗುವ ಕಲ್ಲಪಳ್ಳಿ, ಬಡ್ಡಡ್ಕ, ಕೂರ್ನಡ್ಕ, ಪೆರಾಜೆ ಭಾಗದ ಎರಡು ಬದಿಯ ರಸ್ತೆಯ ಸಾಧಕ-ಬಾಧಕ ಚರ್ಚಿಸಿ ಭೂ ಮಾಲೀಕರ ಗಮನಕ್ಕೆ ತಂದು ಪೂರ್ಣ ಸಹಕಾರ ಪಡೆಯುವಂತೆ ತೀರ್ಮಾನಿಸಲಾಯಿತು. ರಸ್ತೆ ವಿಸ್ತರಣೆಗೊಳ್ಳುವ ಪ್ರದೇಶದಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಕಾರಿಡಾರ್ ಯೋಜನೆಗೆ ಪೂರಕವಾಗಿ ಮುಂದಿನ ಹೆಜ್ಜೆಯಿರಿಸಲು ನಿರ್ಣಯಿಸಲಾಗಿದೆ. ನಂತರದಲ್ಲಿ ರಸ್ತೆಯ ನೀಲ ನಕಾಶೆ ತಯಾರಿಸಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಕಾಸರಗೋಡು ಲೋಕಸಭಾ ಸದಸ್ಯ ರಾಜಶೇಖರ್, ಕೇರಳ ಸರಕಾರ ಅರಣ್ಯ ಸಚಿವ ಶಶಿಧರ್, ಕಾಞಂಗಾಡು ಶಾಸಕ ಚಂದ್ರಶೇಖರ್, ದ.ಕ. ಸಂಸದ ಬ್ರಜೇಶ್ ಚೌಟ, ಕೊಡಗು ಮೈಸೂರು ಸಂಸದ ಯದುವೀರ್ ಒಡೆಯರ್, ಸುಳ್ಯ ತಾಲೂಕು ಶಾಸಕಿ ಭಾಗೀರಥಿ ಮುರುಳ್ಯ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರುಗಳ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಕ್ರಿಯಾ ಸಮಿತಿ ಉಪಾಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಗ್ರಾ.ಪಂ. ಕಲ್ಲಪಳ್ಳಿ ವಾರ್ಡ್ ಸದಸ್ಯ ರಾಧಾಕೃಷ್ಣ, ಪೆರಾಜೆ ಗ್ರಾಮದ ಕೊಳಂಗಾಯ ಹರೀಶ್, ಪೆರುಮುಂಡ ಜಯಪ್ರಕಾಶ್, ಕರಿಕೆ ಗ್ರಾಮದ ಕೋಡಿ ಸೀತಾರಾಮ, ಕಲ್ಲಪಳ್ಳಿ ಜಾರ್ಜ್, ಟಿ.ಜಿ.ರವಿ, ಟಿ.ಜಿ. ಸೂರ್ಯನಾರಾಯಣ ಭಟ್ ಮುಂತಾದವರು ಪಾಲ್ಗೊಂಡಿದ್ದರು. ಪಿ. ಜಯಪ್ರಕಾಶ್ ಸ್ವಾಗತಿಸಿ, ವಂದಿಸಿದರು. -ಕೆ.ಸಿ. ಹರೀಶ್