ಮಡಿಕೇರಿ, ಆ. ೨೮: ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಗ್ರಾಮದ ಪೈಸಾರಿ ಜಾಗದಲ್ಲಿ ನೆಲೆಸಿರುವ ಬಡವರ್ಗದ ಜನರಿಗೆ ಆರ್‌ಟಿಸಿ ಹಾಗೂ ಪ್ರತ್ಯೇಕ ಖಾತೆ ವರ್ಗಾವಣೆ ಮಾಡಿಕೊಡುವಂತೆ ಬಹುಜನ ಸಮಾಜ ಪಾರ್ಟಿ ಆಗ್ರಹಿಸಿದೆ.

ಆರ್ಜಿ ಗ್ರಾಮದ ಸ.ನಂ.೨೧೩/೧ಪಿಕೆನಲ್ಲಿ ೨೯೫ ಎಕರೆ ಸರಕಾರದ ಪೈಸಾರಿ ಜಾಗವಿದ್ದು, ಈ ಜಾಗದಲ್ಲಿ ಹಲವು ವರ್ಷಗಳಿಂದ ಕೃಷಿಕರು, ಕೂಲಿ ಕಾರ್ಮಿಕರು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇದುವರೆಗೆ ಯಾವದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳು, ರಾಜಕೀಯ ಪಕ್ಷದವರು ಬಡ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿವೆ. ಅಲ್ಲದೆ ಕೆಲವು ಶ್ರೀಮಂತ ವ್ಯಕ್ತಿಗಳಿಗೆ ಬೇರೆ ಕಡೆ ಜಾಗವಿದ್ದರೂ ಇದೇ ಸ.ನಂಬರಿನಲ್ಲಿ ಜಾಗ ಮಂಜೂರು ಮಾಡಿರುವದು ಕಂಡು ಬಂದಿದ್ದು, ಇದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾ ಅಧ್ಯಕ್ಷ ದಿವಿಲ್‌ಕುಮಾರ್ ಆಟ್ರಂಗಡ ಆರೋಪಿಸಿದ್ದಾರೆ.

ಕೂಡಲೇ ಇಲ್ಲಿ ನೆಲೆಸಿರುವ ಬಡ ವರ್ಗದ ಜನತೆಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿರುವ ಅವರು, ಇಲ್ಲವಾದಲ್ಲಿ ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದ್ದಾರೆ. ಸಂಬAಧ ಪಕ್ಷದ ಪ್ರಮುಖರು ಹಾಗೂ ಗ್ರಾಮದ ನಿವಾಸಿಗಳೊಡಗೂಡಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪ್ರವೀಣ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.