ಕಣಿವೆ, ಆ. ೨೮: ಮದಲಾಪುರ ಬಳಿ ಇರುವ ಬೆಂಡೆಬೆಟ್ಟ ಗಿರಿಜನ ಹಾಡಿಯಲ್ಲಿರುವ ಅಂಗನ ವಾಡಿಯಲ್ಲಿ ಮಕ್ಕಳಿಗೆ ಕಂಬಳಿ ಹುಳು ಕಾಟ ಎದುರಾಗಿದೆ. ಕಟ್ಟಡದ ಮೇಲ್ಛಾವಣಿ ಹಾಗೂ ಗೋಡೆಯ ಮೇಲೆ ಹರಡಿ ರುವ ಕಂಬಳಿ ಹುಳು ಗಳು ಮಕ್ಕಳಿಗೆ ಭಯ ಉಂಟು ಮಾಡಿರುವುದಾಗಿ ಅಲ್ಲಿನ ಮಕ್ಕಳ ಪೋಷಕರು ದೂರಿದ್ದಾರೆ.
ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಟಿ.ಪಿ. ಹಮೀದ್ ಸ್ಥಳಕ್ಕೆ ಭೇಟಿ ನೀಡಿದ್ದು, ಕೂಡಲೇ ಅಂಗನವಾಡಿ ಕಟ್ಟಡದ ಹೊರಗೆ ಹಾಗೂ ಒಳಭಾU Àದಲ್ಲಿ ಔಷಧಿ ಸಿಂಪಡಿಸಿ ಕಂಬಳಿಹುಳು ಬಾಧೆ ನಿರ್ಮೂಲನೆ ಮಾಡಬೇಕೆಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿರುವುದಾಗಿ ಹಮೀದ್ “ಶಕ್ತಿ’’ಗೆ ಮಾಹಿತಿ ನೀಡಿದ್ದಾರೆ.ಮಳೆ ಹೆಚ್ಚಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಾರಕವಾದ ಕಂಬಳಿ ಹುಳುಗಳು ಎಲ್ಲೆಡೆ ಬಾಧಿಸಿದ್ದು ಶಾಲೆಗಳು ಹಾಗೂ ಅಂಗನವಾಡಿಗಳ ಸುತ್ತ ಔಷಧಿ ಸಿಂಪಡಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.