ಗೋಣಿಕೊಪ್ಪಲು, ಆ. ೨೮: ರಾಷ್ಟಿçÃಯ ಸಂಪತ್ತಾಗಿರುವ ಶ್ರೀಗಂಧದ ಮರವನ್ನು ನಡುರಾತ್ರಿ ವೇಳೆ ಬುಡ ಸಹಿತ ಕಡಿದು ಸಾಗಿಸಿರುವ ಘಟನೆ ಸಿದ್ದಾಪುರ ಬಳಿಯ ಫೇರ್‌ಲ್ಯಾಂಡ್ ಕಾಫಿ ಎಸ್ಟೇಟ್‌ನಲ್ಲಿ ನಡೆದಿದೆ. ಕಳ್ಳರು ಯಾರಿಗೂ ಶಬ್ದ ಹಾಗೂ ಸಂಶಯ ಬಾರದ ರೀತಿಯಲ್ಲಿ ಕಳವು ಮಾಡಿದ್ದಾರೆ.
ಶ್ರೀಗಂಧದ ಮರವನ್ನು ಉರುಳಿಸಿ ನಂತರ ತುಂಡುಗಳಾಗಿ ಮಾರ್ಪಡಿಸಿ ಅದನ್ನು ಕದ್ದೊಯ್ದಿದ್ದಾರೆ. ಮುಂಜಾನೆ ವೇಳೆ ಕಾಫಿ ತೋಟದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ತೋಟದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಗಂಧದ ಮರವನ್ನು ಅಪಹರಿಸಿರುವ ಬಗ್ಗೆ ಮಾಹಿತಿ ದೊರೆತಿದೆ.
ಶ್ರೀಗಂಧ ಮರದ ಉಳಿದ ಬೇರು ಹಾಗೂ ರೆಂಬೆಗಳನ್ನು ಪೊಲೀಸರು ಮಹಜರು ನಡೆಸಿದ್ದು ಇದನ್ನು ಕೊಠಡಿಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಶ್ರೀಗಂಧ ಮರದ ಕಳ್ಳತನದ ಬಗ್ಗೆ ಸಿದ್ದಾಪುರ ಪೊಲೀಸರಿಗೆ ತೋಟದ ವ್ಯವಸ್ಥಾಪಕರು ದೂರನ್ನು ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಶ್ರೀಗಂಧಕ್ಕೆ ಉತ್ತಮ ಬೆಲೆ ಲಭಿಸುತ್ತಿರುವ ಹಿನ್ನಲೆಯಲ್ಲಿ ಕಳ್ಳರು ಇದೀಗ ಇಂತಹ ದಂಧೆಯಲ್ಲಿ ಪಾಲ್ಗೊಳ್ಳುವ ಮೂಲಕ ತೋಟಗಳಲ್ಲಿ ಬೆಳೆದು ನಿಂತಿರುವ ಶ್ರೀಗಂಧದ ಮರಗಳನ್ನು ರಾತ್ರೋರಾತ್ರಿ ಕಡಿದು ಸಾಗಿಸುತ್ತಿದ್ದಾರೆ.
-ಹೆಚ್.ಕೆ. ಜಗದೀಶ್