ಕೊಡ್ಲಿಪೇಟೆ: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಮತ್ತು ಗ್ರಾಮ ಪಂಚಾಯತ್ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸಂಭ್ರಮದಿAದ ೭೯ ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು.
ಕರ್ನಾಟಕ ರಕ್ಷಾಣಾ ವೇದಿಕೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಬಸವರಾಜ್ ಧ್ವಜಾರೋಹಣ ನೆರವೇರಿಸಿದರು. ಮತ್ತೋರ್ವ ಯೋಧ ಮನು ಮತ್ತು ನಿವೃತ್ತ ಅರಣ್ಯಾಧಿಕಾರಿ ಗೊವಿಂದ್‌ರಾಜ್ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಕರವೇ ಅಯಕ್ಷ ರಾಜೇಶ್, ಕಾರ್ಯದರ್ಶಿ ವೇದಕುಮಾರ್, ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಪ್ಸರಿ ಬೇಗಂ, ಮಾಜಿ ಅಧ್ಯಕ್ಷ ಔರಂಗಜೇಬ್, ಕರವೇ ಪದಾಧಿಕಾರಿಗಳು, ವಿವಿಧ ಸಂಘಸAಸ್ಥೆಗಳ ಪ್ರಮುಖರು ಹಾಜರಿದ್ದರು.
ಪಟ್ಟಣದ ಮುಖ್ಯ ರಸ್ತೆಯ ಹನಫಿ ಜಾಮಿಯಾ ಮಸೀದಿ ಆವರಣದಲ್ಲಿ ಅಧ್ಯಕ್ಷ ಜಾಫರ್ ಸಾದಿಕ್ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಧರ್ಮಗುರುಗಳಾದ ಮಹಮ್ಮದ್ ನಾದೀರ್ ರಝಾ ಮತ್ತು ಮದ್ರಸ ಅಧ್ಯಾಪಕ ಅಬ್ದುಲ್ ಶುಕೂರ್ ಸಂದೇಶ ಭಾಷಣ ಮಾಡಿದರು. ಈ ಸಂದರ್ಭ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಮನ್ಸೂರ್ ಅಹ್ಮದ್, ಅಧ್ಯಕ್ಷ ಶಾಹಿದ್, ಫೈರೋಝ್, ಶಾಹಿದ್ ಖಾನ್ ಸೇರಿದಂತೆ ಇತರರು ಇದ್ದರು.ಸಮೀಪದ ಕಲ್ಲಾರೆಯಲ್ಲಿರುವ ಕೂರ್ಗ್ ಯುವಕ ಸಂಘದ ವತಿಯಿಂದ ಸಂಘದ ನೂತನ ಕಚೇರಿ ಮುಂಭಾಗ ಸಂಭ್ರಮದಿAದ ಸ್ವಾತಂತ್ರ‍್ಯ ದಿನಾಚರಣೆ ಆಚರಿಸಲಾಯಿತು.
ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಧ್ವಜಾರೋಹಣ ನೆರೆವೇರಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ಸಂಘದ ಅಧ್ಯಕ್ಷ ಚಿರಂಜೀವಿ, ಕಾರ್ಯದರ್ಶಿ ರಮೇಶ್ ಹಾಗೂ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ಸಮೀಪದ ಹ್ಯಾಂಡ್‌ಪೋಸ್ಟ್ ಜುಮ್ಮಾ ಮಸೀದಿ ವತಿಯಿಂದ ಮದ್ರಸ ಅವರಣದಲ್ಲಿ ಸಮಿತಿ ಅಧ್ಯಕ್ಷ ಜಿ.ಎಂ. ಸಿದ್ದೀಕ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಧರ್ಮಗುರುಗಳಾದ ಶಾಫಿ ಫೈಝಿ ಮತ್ತು ಮದ್ರಸ ಅಧ್ಯಾಪಕ ರಝಾಕ್ ಫೈಝಿ, ಝಹೀರ್ ನಿಝಾಮಿ, ಕಾರ್ಯದರ್ಶಿ ಮಹಮ್ಮದ್ ಹನೀಫ್ ಅವರುಗಳು ಮಾತನಾಡಿದರು.
ಬ್ಯಾಡಗೊಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಮಿಶ್ರಿಯಾ ಧ್ವಜಾರೋಹಣ ನೆರವೇರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಹನೀಫ್ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಪಾವನ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಿ.ಆರ್. ವೇದಕುಮಾರ್, ಮುಖ್ಯ ಶಿಕ್ಷಕಿ ಭಾಗ್ಯ, ಸಹ ಶಿಕ್ಷಕರಾದ ರಿಜ್ವಾನ ಭಾನು, ತೇಜಾವತಿ, ದಾನಿಗಳಾದ ಬಿ.ಯು. ಲತೀಫ್, ಪುಟ್ಟಸ್ವಾಮಿ ಗೌಡ್ರು ಮತ್ತು ಬಿ.ಎ. ಇಬ್ರಾಹಿಂ ಸೇರಿದಂತೆ ಇತರರು ಇದ್ದರು.
ರೋಟರಿ ಹೇಮಾವತಿ ಕೊಡ್ಲಿಪೇಟೆ ವತಿಯಿಂದ ಸಮೀಪದ ಕಿರಿಕೊಡ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ರೋಟರಿ ಅಧ್ಯಕ್ಷ ಉಮೇಶ್ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭ ಜಂಟಿಯಾಗಿ ಧ್ವಜಾರೋಹಣ ನೆರೆವೇರಿಸಿದರು. ರೋಟರಿ ಕಾರ್ಯದರ್ಶಿ ಗಣೇಶ್ ಚೌದರಿ ಮತ್ತು ಪದಾಧಿಕಾರಿಗಳು, ಶಿಕ್ಷಕ ವೃಂದ, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಪೋಷಕರು ಇದ್ದರು.
ಹೋಬಳಿ ಸಂಜೀವಿನಿ ಕಟ್ಟಡ ಕಾರ್ಮಿಕ ಸಂಘದ ವತಿಯಿಂದ ಸ್ಥಳೀಯ ಕೃಷಿಪತ್ತಿನ ಸಹಕಾರ ಸಂಘದ ಕಚೇರಿ ಮುಂಭಾಗ ಧ್ವಜಾರೋಹಣ ನೆರವೇರಿಸಲಾಯಿತು. ಅಧ್ಯಕ್ಷ ನಾಗೇಶ್ ಧ್ವಜಾರೋಹಣ ಮಾಡಿದರು. ಉಪಾಧ್ಯಕ್ಷ ಶೇಖರ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಕಾಲೇಜುಗಳ ವತಿಯಿಂದ ಹಲಸಿನಮರ ಶ್ರೀಮತಿ ಗೌರಮ್ಮ ಶಾಂತಮಲ್ಲಪ್ಪ ಪದವಿ ಕಾಲೇಜಿನ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಉಪಾಧ್ಯಕ್ಷ ಶಂಭುಲಿAಗಪ್ಪ ಧ್ವಜಾರೋಹಣ ನೆರವೇರಿಸಿದರು.
ಭಾಗಮಂಡಲ ಕಾವೇರಿ ಕಾಲೇಜಿನ ಉಪನ್ಯಾಸಕ ಹೇಮಂತ್ ಕುಮಾರ್ ಮುಖ್ಯ ಭಾಷಣ ಮಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಅಬ್ದುಲ್ ರಬ್, ಆಡಳಿತ ಮಂಡಳಿ ನಿರ್ದೇಶಕÀ ಯತೀಶ್ ಬಿ.ಕೆ. ಮಾತನಾಡಿದರು. ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪರಮೇಶ್, ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಆರ್. ನಿರಂಜನ್, ಪ. ಪ್ರೋ. ಕಾಲೇಜಿನ ಪ್ರಾಂಶುಪಾಲ ಪವಾರ್ ಉಪಸ್ಥಿತರಿದ್ದರು. ಬ್ಯಾಡಗೊಟ್ಟ ಗ್ರಾಮ ಪಂಚಾಯತ್ ವತಿಯಿಂದ ಕಚೇರಿ ಆವರಣದಲ್ಲಿ ಅಧ್ಯಕ್ಷೆ ಪಾವನ ಗಗನ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರುಗಳಾದ ಹನೀಫ್, ದಿನೇಶ್ ಕುಮಾರ್, ಮೋಕ್ಷಿಕ್ ರಾಜ್, ರೇಣುಕಾ ಮೇದಪ್ಪ, ದೊಡ್ಡಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ಇದ್ದರು.ಶನಿವಾರಸಂತೆ: “ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದು ರಾಜಕಾರಣಿಗಳ ಸುದೀರ್ಘ ಭಾಷಣದಿಂದಲ್ಲ; ಸ್ವಾತಂತ್ರ‍್ಯ ಹೋರಾಟಗಾರರ ಬಲಿದಾನದಿಂದ.ರಾಜಕಾರಣಿಗಳ ಬೇಜವಾಬ್ದಾರಿತನದಿಂದ ಅತಿಯಾದ ಮಳೆಗೆ ಮೂದರವಳ್ಳಿ ಗ್ರಾಮದ ಶ್ರೀ ವಿನಾಯಕ ಸಂಘದ ಕಟ್ಟಡವನ್ನು ಕಳೆದುಕೊಂಡು, ಮೂದರವಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಿ) ಮುಚ್ಚಲ್ಪಟ್ಟು ಶಾಲಾ ಆವರಣದಲ್ಲಿ ಧ್ವಜಾರೋಹಣ ಮಾಡುತ್ತಿರುವುದು ವಿಷಾದನೀಯವಾಗಿದೆ’’ ಎಂದು ಶ್ರೀ ವಿನಾಯಕ ಯುವಕ ಸಂಘದ ಅಧಕ್ಷ ಎಂ.ಜೆ. ವಿನೋದ್ ಬೇಸರ ವ್ಯಕ್ತಪಡಿಸಿದರು.
ಸ್ವಾತ್ರೊö್ಯÃತ್ಸವ ಪ್ರಯುಕ್ತÀ ಸರ್ಕಾರದಿಂದ ಮುಚ್ಚಲ್ಪಟ್ಟ ಮೂದರವಳ್ಳಿ (ಬಿ) ಶಾಲೆ ಆವರಣದ ಸುತ್ತಮುತ್ತ ಬೆಳೆದಿದ್ದ ಕಳೆಸಸ್ಯವನ್ನು ಕಡಿದು, ಬೇಲಿ ಹಾಗೂ ಮೈದಾನವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಿದ ನಂತರ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಶಾಲಾ ಕಟ್ಟಡದಲ್ಲಿ ಉಳಿದಿರುವ ಅಂಗನವಾಡಿ ಕೇಂದ್ರದ ಸಹಭಾಗಿತ್ವದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಶಾಲೆಯ ಪಕ್ಕದ ಜಾಗದಲ್ಲೆ ಇದ್ದ ಶ್ರೀ ವಿನಾಯಕ ಸಂಘದ ಕಟ್ಟಡ ಕಳೆದ ವರ್ಷದ ಮಳೆಗೆ ನೆಲಸಮಗೊಂಡಿದ್ದು ಸಂಘಕ್ಕೆ ಕಟ್ಟಡವಿಲ್ಲದಂತಾಗಿದೆ. ಸದಸ್ಯರ ಕೋರಿಕೆ ಮೇರೆಗೆ ಸದಸ್ಯರೆಲ್ಲಾ ಶಾಲಾ ಆವರಣ ಸ್ವಚ್ಛಗೊಳಿಸಿ ಸ್ವಾತಂತ್ರ‍್ಯ ದಿನವನ್ನು ಬೇಸರದಿಂದ ಆಚರಿಸುತ್ತಿದ್ದೇವೆ ಎಂದರು.
ಸAಘದ ಕಾರ್ಯದರ್ಶಿ ಗಿರೀಶ್ ಕುಮಾರ್, ಖಜಾಂಚಿ ಎಂ.ಎA. ವಿಶ್ವನಾಥ್, ಸದಸ್ಯರಾದ ದುರ್ಗೇಶ್, ಚೇತನ್, ಶಾಶ್ವತ್, ಪವನ್, ಪುನೀತ್, ಸ್ವಾಗತ್, ರಾಕೇಶ್, ಪವನ್, ಶಶಿಧರ್, ಮದನ್, ಸುನೀಲ್, ದಿಲೀಪ್, ಅಂಗನವಾಡಿ ಶಿಕ್ಷಕಿ ಮೀನಾಕ್ಷಿ, ದಾನಿಗಳಾದ ದಿನೇಶ್, ರಘು, ಗ್ರಾಮ ಪ್ರಮುಖರಾದ ಪ್ರವೀಣ್, ರಘು, ಅಣ್ಣಯ್ಯ, ನಿಶಾಂತ್, ನಿಖಿಲ್ ಹಾಜರಿದ್ದರು.ಮಡಿಕೇರಿ: ಸ್ಟೋನ್ ಹಿಲ್ ಅಂಗನವಾಡಿಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪ್ರಸನ್ನ ಕುಮಾರ್, ಧ್ವಜಸ್ತಂಭ ದಾನಿ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರು ಕೆ.ಆರ್. ದಿನೇಶ್ ಶೆಟ್ಟಿ, ಉಪಾಧ್ಯಕ್ಷೆ ಶಶಿ, ಅಗ್ನಿ ಶಾಮಕದಳದ ಅಧಿಕಾರಿ ನಾಗರಾಜು, ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಹರೀಶ್, ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಅಂಗನವಾಡಿ ಕಾರ್ಯಕರ್ತೆ ನಾಗರತ್ನ ಮಕ್ಕಳು ಮತ್ತು ಪೋಷಕರು ಹಾಜರಿದ್ದರು.ಸುಂಟಿಕೊಪ್ಪ: ಕೊಡಗರಹಳ್ಳಿ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆ ಯನ್ನು ಆಚರಿಸಲಾಯಿತು. ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಂಜಿಲನ. ಎಸ್. ಮಂಜುನಾಥ್ ಧ್ವಜಾರೋಹಣವನ್ನು ನೇರವೇರಿಸಿದರು. ನಂತರ ಶಾಲಾ ಮಕ್ಕಳಿಗೆ ಛದ್ಮವೇಷ, ಭಾಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಕೆ.ಎಸ್. ಇಂದಿರಾ, ಆಡಳಿತ ಮಂಡಳಿ ಸದಸ್ಯರುಗಳಾದ ಸುರೇಶ್ ಚಂಗಪ್ಪ, ಕುಟ್ಟಪ್ಪ ಹಾಗೂ ಶಾಲಾ ಸಹಶಿಕ್ಷಕರು ಇದ್ದರು.ಚೆಯ್ಯಂಡಾಣೆ: ಸಮೀಪದ ಕಕ್ಕಬ್ಬೆ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ನಡೆದ ಸ್ವಾತಂತ್ರ‍್ಯೋತ್ಸವ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು.
ನಂತರ ನಡೆದ ಸÀಭಾಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ದೇಶಾಭಿಮಾನವನ್ನು ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಿದರೆ ಮಾತ್ರ ದೇಶದ ಸ್ವಾತಂತ್ರ‍್ಯಕ್ಕೆ ನಿಜವಾದ ಅರ್ಥ ಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗದವರಿದ್ದರು.ಮಡಿಕೇರಿ: ಮೇಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಶಾಲೆಯ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆ ಜರುಗಿತು. ಜಾದೂ ಪ್ರದರ್ಶನದ ಮೂಲಕ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರö್ಯ ಸಂಭ್ರಮವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಮ್ಯಾ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ರೋಟರಿ ಸಂಸ್ಥೆಯ ಸದಸ್ಯರು ಗ್ರಾಮದ ಮುಖ್ಯಸ್ಥರೊಂದಿಗೆ ಧ್ವಜಾರೋಹಣವÀನ್ನು ನೆರವೇರಿಸಿದರು.
ನಂತರ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ವಹಿಸಿದ್ದರು.
ವೇದಿಕೆಯಲ್ಲಿ ಮಾಜಿ ಸೈನಿಕ ಚೋಂಡಿರ ಸುರೇಶ್, ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಬಿ.ಕೆ. ಕಾರ್ಯಪ್ಪ, ನಿರ್ದೇಶಕ ಡಾ. ಚೇತನ್, ರೋಟರಿ ಮಿಸ್ಟಿಹಿಲ್ಸ್ ಸದಸ್ಯರು, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ, ಉಮೇಶ್, ರಫೀಕ್, ಸುಶೀಲಾ, ಮಧು ಉಪಸ್ಥಿತರಿದ್ದರು.
ಖ್ಯಾತ ಜಾದೂಗರ ವಿಕ್ರಮ್ ಜಾದೂಗರ್ ಜಾದೂ ಪ್ರದರ್ಶನ ನೀಡಿ ಮಕ್ಕಳನ್ನು ರಂಜಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಬಿತಾ ಸ್ವಾಗತಿಸಿದರು. ಶ್ರೀಲತಾ ವಂದಿಸಿದರು. ವೀಣಾ ನಿರೂಪಿಸಿದರು ಕುಶಾಲನಗರ: ಸ್ವಾತಂತ್ರೊö್ಯÃತ್ಸವ ಅಂಗವಾಗಿ ಕುಶಾಲನಗರ ಪುರಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಜಯಲಕ್ಷಿö್ಮ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಹಾತ್ಮ ಗಾಂಧೀಜಿ ಮತ್ತು ಡಾ. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭ ಉಪಾಧ್ಯಕ್ಷೆ ಪುಟ್ಟಲಕ್ಷಿö್ಮ, ಸ್ಥಾಯಿ ಸಮಿತಿ ಅಧ್ಯಕ್ಷÀ ಎಂ.ಬಿ. ಸುರೇಶ್, ಮಾಜಿ ಅಧ್ಯಕ್ಷರಾದ ಜಯವರ್ಧನ್, ಹಿರಿಯ ಸದಸ್ಯರುಗಳಾದ ಪ್ರಮೋದ್ ಮುತ್ತಪ್ಪ, ಡಿ.ಕೆ. ತಿಮ್ಮಪ್ಪ, ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್, ಆರೋಗ್ಯ ಅಧಿಕಾರಿ ಉದಯಕುಮಾರ್, ನಾಮ ನಿರ್ದೇಶಕ ಸದಸ್ಯರು ಪುರಸಭೆ ಸಿಬ್ಬಂದಿ ಪೌರಕಾರ್ಮಿಕರು ಇದ್ದರು.ಮಡಿಕೇರಿ: ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದಲ್ಲಿ ೭೯ ನೇ ವರ್ಷದ ಸ್ವಾತಂತ್ರೊö್ಯÃತ್ಸವದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ, ಉಪಾಧ್ಯಕ್ಷರಾದ ಮಳವಂಡ ಅರವಿಂದ್ ಕುಟ್ಟಪ್ಪ, ನಿರ್ದೇಶಕರಾದ ಸಿ. ಕಾಳಯ್ಯ, ಸುಮನ್ ಬೆಳ್ಯಪ್ಪ, ವ್ಯವಸ್ಥಾಪಕರಾದ ಜೆ.ವಿ. ಹೇಮಂತ್ ಕುಮಾರ್ ಮತ್ತು ಸಂಘದ ನೌಕರರು ಹಾಜರಿದ್ದರು.ಗೋಣಿಕೊಪ್ಪಲು: ಗೋಣಿಕೊಪ್ಪ ಲಯನ್ಸ್ ಶಾಲಾ ಆವರಣದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಪಿ. ಬೋಪಣ್ಣ ಅವರು ಧ್ವಜಾರೋಹಣಗೈದರು. ವಿದ್ಯಾರ್ಥಿಗಳಿಂದ ಭಕ್ತಿಗೀತೆ ಹಾಗೂ ರಾಷ್ಟç ಭಕ್ತ್ತಿಗೀತೆ ಹಾಗೂ ರಾಷ್ಟçಗೀತೆ ಗಾಯನ ನೆರವೇರಿತು, ಲಯನ್ಸ್ ಸದಸ್ಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಶ್ರೀಮAಗಲ: ಹುದಿಕೇರಿಯ ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭ ವಿದ್ಯಾರ್ಥಿಗಳಿಂದ ಛದ್ಮ ವೆÀೆÃಷ ಸೇರಿದಂತೆ ವಿವಿಧ ಕಾರ್ಯಕ್ರಮ ಮಡಿಕೇರಿ: ಕಡಗದಾಳು ಶ್ರೀ ಬೊಟ್ಲಪ್ಪ ಯುವ ಸಂಘÀದ ವತಿಯಿಂದ ಸ್ವಾತಂತ್ರೊö್ಯÃತ್ಸವ ಆಚರಿಸಲಾಯಿತು. ಹಿರಿಯ ಸದಸ್ಯರಾದ ಬಿ.ಎಂ. ಮೋಣಪ್ಪ, ಕೆ.ಪಿ. ಬೆಳ್ಯಪ್ಪ ಮತ್ತು ಪ್ರಸ್ತುತ ಸಂಘದ ಅಧ್ಯಕ್ಷರಾದ ಸಿ.ಕೆ. ಮಂಜು ಧ್ವಜಾರೋಹಣವನ್ನು ನೆರವೇರಿಸಿಕೊಟ್ಟರು. ಕಡಗದಾಳು ಶಾಲೆಯಲ್ಲಿ ೭ನೇ ಮತ್ತು ೧೦ನೇ ತರಗತಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಯುವ ಸಂಘದ ವತಿಯಿಂದ ಬಹುಮಾನ ನೀಡಲಾಯಿತು., ಕೆ.ಬಿ. ಆದಿತ್ಯ ಸ್ವಾಗತಿಸಿದರು, ಕೆ.ಎನ್. ಅವಿನಾಶ್ ವಂದಿಸಿದರು, ಸಿ.ಎಂ. ನಿಕೇಶ್ ನಿರೂಪಿಸಿದರು.
ಚೆಯ್ಯಂಡಾಣೆ: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ. ಸಮಿತಿಯ ವತಿಯಿಂದ ಸ್ವಾತಂತ್ರö್ಯ ದಿನಾಚರಣೆಯನ್ನು ಆಚರಿಸಲಾಯಿತು. ದುಬೈನ ದೇರದಲ್ಲಿರುವ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್‌ನ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಎ.ಇ. ಸಮಿತಿಯ ಅಧ್ಯಕ್ಷÀ ಅಹ್ಮದ್ ಚಾಮಿಯಾಲ ವಹಿಸಿದ್ದರು.
ಯು.ಎ.ಇ. ಸಮಿತಿಯ ವಕ್ತಾರರಾದ ಇಸ್ಮಾಯಿಲ್ ಮೂರ್ನಾಡು ಸ್ವಾತಂತ್ರ‍್ಯ ದಿನಾಚರಣೆ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ ಯು.ಎ.ಇ. ಯಲ್ಲಿರುವ ಆನಿವಾಸಿಗಳು ಹೆಚ್ಚಾಗಿ ಪಾಲ್ಗೊಂಡಿದರು. ಈ ಸಂದರ್ಭ ಕೊಡಗು ಸುನ್ನಿ ವೆಲ್ಫೇರ್ ಜಿ.ಸಿ.ಸಿ. ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ, ಹಮೀದ್ ನಾಪೋಕ್ಲು, ಪ್ರಧಾನ ಕಾರ್ಯದರ್ಶಿ ಝುಬೈರ್, ಮುಜೀಬ್ ಕಡಂಗ, ರಫೀಕ್ ಗುಂಡಿಕೆರೆ, ಅಶ್ರಫ್ ಕುಂಜಿಲ, ನಿಸಾರ್ ಗುಂಡಿಕೆರೆ, ರಿಯಾಜ್ ಕೊಂಡAಗೇರಿ, ಮುಝಮ್ಮಿಲ್ ಚಾಮಿಯಾಲ, ಅಶ್ವಾಕ್ ಚೋಕಂಡಳ್ಳಿ ಸಾದಿಕ್ ಹೊದವಾಡ, ನೌಶಾದ್ ಕೊಂಡAಗೇರಿ, ನಿಸಾರ್ ಚೋಕಂಡಳ್ಳಿ ಮುನೀರ್ ಕೊಟ್ಟಮುಡಿ ಉಪಸ್ಥಿತರಿದ್ದರು.
ಜುಬೈರ್ ಎಮ್ಮೆಮಾಡು ಸ್ವಾಗತಿಸಿ, ಮುಜೀಬ್ ಕಡಂಗ ವಂದಿಸಿದರು.