ವೀರಾಜಪೇಟೆ: ವಿದ್ಯಾರ್ಥಿಗಳು ಉತ್ತಮ ವಿಚಾರಗಳನ್ನು ಮೈಗೂಡಿ ಸಿಕೊಂಡು ಮುಂದಕ್ಕೆ ಸಾಗ ಬೇಕೆಂದು ಬೆಳೆಗಾರ ಕೊಂಗAಡ ಎಸ್. ದೇವಯ್ಯ ಅಭಿಪ್ರಾಯಪಟ್ಟರು. ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾಜವು ವಿವಿಧ ರೀತಿಯಲ್ಲಿ ಮಲೀನವಾಗಿದ್ದು, ಅದನ್ನು ಮಾಲಿನ್ಯ ಮುಕ್ತ ಮಾಡುವ ಕೆಲಸ ಯುವ ಜನರಿಂದ ಆಗಬೇಕು. ದೇಶಭಕ್ತಿಯನ್ನು ಮೈಗೂಡಿಸಿಕೊಂಡು ಸ್ವಾಸ್ಥö್ಯ ಸಮಾಜದ ನಿರ್ಮಾಣ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕಿ ಪಳಂಗAಡ ವಾಣಿ ಚೆಂಗಪ್ಪ ನಾಯಕತ್ವ ಗುಣವೆಂಬುದು ಪ್ರತಿಯೊಬ್ಬರಲ್ಲೂ ಇರಬೇಕು. ಉತ್ತಮ ನಾಯಕನಾದವನು ಸೇವೆಯನ್ನು ಮಾಡುತ್ತಾನೆ ಹೊರತು ಆಜ್ಞೆಯನ್ನು ಮಾಡುವುದಿಲ್ಲ ಎಂದರು. ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ಸಂಘದ ಉಪಾಧ್ಯಕ್ಷನಾಗಿ ತೃತೀಯ ಬಿ.ಬಿ.ಎ ನಿರೂಪ್ ನಾಣಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಂತಿಮ ಬಿ.ಬಿ.ಎ ಕೀರ್ತನ್ ಕಾವೇರಪ್ಪ, ಕ್ರೀಡಾ ಕಾರ್ಯದರ್ಶಿಯಾಗಿ ಅಂತಿಮ ಬಿ.ಬಿ.ಎ ನಾಚಪ್ಪ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅಂತಿಮ ಬಿ.ಕಾಂ ಮುತ್ತಮ್ಮ, ಜಂಟಿ ಕಾರ್ಯದರ್ಶಿಗಳಾಗಿ ದ್ವಿತೀಯ ಬಿ.ಕಾಂ ಕಾವ್ಯ ಹಾಗೂ ಕುಶಾಲ್ ಗೋಕುಲ್ ಈ ಸಂದರ್ಭ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್. ಸಾಲ್ದಾನ, ಐಕ್ಯೂಎಸಿ ಹಾಗೂ ವಿದ್ಯಾರ್ಥಿ, ಕ್ಷೇಮಪಾಲನಾ ಸಮಿತಿ ಸಂಚಾಲಕಿ ಪ್ರಿಯ ಮುದ್ದಪ್ಪ ಉಪಸ್ಥಿತರಿದ್ದರು.

ವೇದಿಕೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಶನಿವಾರಸಂತೆ: ಪಟ್ಟಣದ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆ ಬಾಲಿಕಾ ಪ್ರೌಢಶಾಲೆಯಲ್ಲಿ ಸಿ.ವಿ. ರಾಮನ್ ವಿಜ್ಞಾನ ಸಂಘದ ವತಿಯಿಂದ ರಾಷ್ಟಿçÃಯ ಬಾಹ್ಯಾಕಾಶ ದಿನವನ್ನು ಆಚರಿಸಲಾಯಿತು. ವಿಜ್ಞಾನ ಶಿಕ್ಷಕಿ ಎಂ. ಸವಿತಾ ಮಾತನಾಡಿ, ಭಾರತದಲ್ಲಿ ರಾಷ್ಟಿçÃಯ ಬಾಹ್ಯಾಕಾಶ ದಿನವು ಚಂದ್ರಯಾನ-೩ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಸ್ಮರಣಾರ್ಥವಾಗಿದ್ದು, ಪ್ರತಿವರ್ಷ ತಾ. ೨೩ ರಂದು ಆಚರಿಸುತ್ತೇವೆ ಎಂದರು. ಶಿಕ್ಷಕ ಕೆ.ಪಿ. ಜಯಕುಮಾರ್ ಮಾತನಾಡಿ, ಬಾಹ್ಯಾಕಾಶದ ಪ್ರಾಮುಖ್ಯತೆಯನ್ನು ತಿಳಿಸಿದರು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಕೆ.ಎಸ್. ಸುಚಿತ್ರಾ, ಜೆ.ಆರ್. ಭವ್ಯಾ, ಇತರರು ಉಪಸ್ಥಿತರಿದ್ದರು.ವೀರಾಜಪೇಟೆ: ಕ್ರೀಡೆಗಳಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಲು ಸಾಧ್ಯ. ಕಲಿಕೆಯೊಂದಿಗೆ ಕ್ರೀಡೆಗೂ ಗೌರವ ನೀಡಿ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಕಾರ್ಯಕ್ರಮದಲ್ಲಿ ಹೇಳಿದರು. ಕರ್ನಾಟಕ ಸರ್ಕಾರ, ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವೀರಾಜಪೇಟೆ ತಾಲೂಕು ಮತ್ತು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ೨೦೨೫-೨೬ನೇ ಸಾಲಿನ ವೀರಾಜಪೇಟೆ ತಾಲೂಕುಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಕೊಡಗು ಜಿಲ್ಲೆ ಕ್ರೀಡೆಗಳ ತವರೂರು. ಜಿಲ್ಲೆಯು ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದು ರಾಷ್ಟçಮಟ್ಟದ ತಂಡಕ್ಕೆ ಆಯ್ಕೆ ಗೊಂಡು ಉತ್ತಮ ಪ್ರದರ್ಶನ ತೋರಿ ಜಿಲ್ಲೆಯ ಹೆಸರು ಉನ್ನತಮಟ್ಟಕ್ಕೇರಿಸಿದ್ದಾರೆ. ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಮಟ್ಟದಿಂದ ಬಂದ ವಿದ್ಯಾರ್ಥಿಗಳು ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದು ಉನ್ನತ ಪದವಿಗಳನ್ನು ಅಲಂಕರಿಸಿದ್ದಾರೆ.

ಕ್ರೀಡೆಗಳು ಸೋಲು ಮತ್ತು ಗೆಲುವುನ್ನು ಕಲಿಸುತ್ತದೆ. ಇದುವೇ ಜೀವನ ಪಾಠ ಎಂಬುದನ್ನು ಮರೆಯಬಾರದು. ಎಂದಿಗೂ ಗೆಲವು ನಮ್ಮದಾಗಬೇಕು ಎನ್ನುವ ಕನಸು ಇರಬೇಕು ಎಂದರು.

ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕ ಮಾದಂಡ ಎಸ್. ಪೂವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆಯ ಅಧ್ಯಕ್ಷೆ ಎಂ. ದೇಚಮ್ಮ ಕಾಳಪ್ಪ ಅವರು ಗೌರವ ವಂದನೆಯನ್ನು ಸ್ವೀಕರಿಸಿದರು. ಪುರಸಭೆಯ ಉಪಾಧ್ಯಕ್ಷರಾದ ಫಾಸಿಯ ತಬ್ಸುಂ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್, ಪಿ.ಎ. ಪ್ರವೀಣ್ ಅಧ್ಯಕ್ಷರು ದೈಹಿಕ ಶಿಕ್ಷಕರ ಸಂಘ ಕೊಡಗು ಜಿಲ್ಲೆ, ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಸೋಮಯ್ಯ ವೀರಾಜಪೇಟೆ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು ಎಂ.ಎಸ್. ತಮ್ಮಯ್ಯ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀರಾಜಪೇಟೆ ವಲಯ, ಪೊನ್ನಂಪೇಟೆ ವಲಯ, ಅಮ್ಮತ್ತಿ ವಲಯ, ಬಾಳೆಲೆ ವಲಯ, ಹುದಿಕೇರಿ ವಲಯ, ಶ್ರೀಮಂಗಲ ವಲಯದ ವಿವಿಧ ಶಾಲೆಗಳ ವಿಧ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಪ್ರಗತಿ ಶಾಲೆಯ ವಿದ್ಯಾರ್ಥಿಗಳಿಂದ ಕ್ರೀಡಾಜ್ಯೋತಿ ಬೆಳಗಿಸಲಾಯಿತು. ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಗಳಾದ ಮಾದಂಡ ತಿಮ್ಮಯ್ಯ, ಸುಶ್ಮಾ ತಿಮ್ಮಯ್ಯ, ಮುಖ್ಯ ಶಿಕ್ಷPಕರು ಸೇರಿದಂತೆ ವಿದ್ಯಾರ್ಥಿಗಳು ಶಾಲೆಯ ಶಿಕ್ಷಕ ವರ್ಗ, ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವಿಧ ಶಾಲೆಯ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.ಕೂಡಿಗೆ: ಹೆಬ್ಬಾಲೆ ಗ್ರಾ.ಪಂ. ವ್ಯಾಪ್ತಿಯ ಹಳೆಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕರ್ನಾಟಕ ಕಾವಲುಪಡೆ ಜಿಲ್ಲಾ ಅಧ್ಯಕ್ಷ ಎಂ. ಕೃಷ್ಣ ಸಮವಸ್ತçವನ್ನು ವಿತರಣೆ ಮಾಡಿದರು. ಈ ಸಂದರ್ಭ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ವೃಂದ ಕೃಷ್ಣ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಮೇಶ್, ಸಹ ಶಿಕ್ಷಕರಾದ ಮಣಿ, ಕವಿತ, ಪ್ರತಿಮಾ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಪ್ರಮೀಳಾ, ರಂಗಸ್ವಾಮಿ, ವೇಂಕಟೇಶ, ಪಲ್ಲವಿ, ಮತ್ತು ಕರ್ನಾಟಕ ಕಾವಲುಪಡೆ ಐಗೂರು: ಕಾಜೂರು ಶಾಲೆಯಲ್ಲಿ ನಡೆದ ಶಾಂತಳ್ಳಿ ವಲಯ ಮಟ್ಟದ ೧೪ರ ವಯೋಮಾನದ ಕ್ರೀಡಾಕೂಟದಲ್ಲಿ ಬಾಲಕಿಯರ ಶಾಟ್ ಪುಟ್ ವಿಭಾಗದಲ್ಲಿ ಕಾಜೂರು ಶಾಲೆಯ ಸಿಂಚನ ಪ್ರಥಮ ಸ್ಥಾನ, ಓ.ಎಲ್.ವಿ. ಶಾಲೆಯ ಪ್ರಕೃತಿ ದ್ವಿತೀಯ ಸ್ಥಾನ ಮತ್ತು ಓ.ಎಲ್.ವಿ. ಶಾಲೆಯ ರಿದಾ ಫಾತಿಮಾ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ಸಿಂಚನ ಮತ್ತು ದ್ವಿತೀಯ ಸ್ಥಾನ ಪಡೆದ ಪ್ರಕೃತಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ಗಳನ್ನು ವಿತರಿಸಲಾಯಿತು. ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರ ಮಕ್ಕಳಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ಗಳನ್ನು ನೀಡುತ್ತಿದೆ. ಮಕ್ಕಳ ಕಲಿಕೆ ಮತ್ತು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವುದು ಹಾಗೂ ಶಾಲೆಗೆ ಹಾಜರಾಗುವಂತೆ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್ ಈ ಸಂದರ್ಭ ಮಾಹಿತಿ ನೀಡಿದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡಬೀಟಿ, ಶಾಲೆಯ ಶಿಕ್ಷಕರು ಹಾಜರಿದ್ದರು.ಪಾಲಿಬೆಟ್ಟ: ಪಾಲಿಬೆಟ್ಟ ಲೂರ್ಡ್ಸ್ ಶಾಲೆಯಲ್ಲಿ ೯೦-೯೧ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿದ್ದರು. ಖಾಸಗಿ ರೆಸಾರ್ಟ್ ಒಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ೩೫ನೇ ವರ್ಷದ ಸ್ನೇಹ ಸಮ್ಮಿಲನದ ಅಂಗವಾಗಿ ಶಾಲೆಯಲ್ಲಿ ಅಂದಿನ ಸಮವಸ್ತçದೊಂದಿಗೆ ಬೆಂಚಿನ ಮೇಲೆ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳ ಮಾದರಿಯಲ್ಲಿ ಕೇಕ್ ಒಂದನ್ನು ವಿಭಿನ್ನವಾಗಿ ತಯಾರಿಸಿ ಕಟ್ ಮಾಡುವುದರ ಮೂಲಕ ಪರಸ್ಪರ ಹಂಚಿಕೊAಡು ಸಂಭ್ರಮಿಸಿದರು.

ಹಳೆ ವಿದ್ಯಾರ್ಥಿಗಳ ಸಂಘವು, ಇಂದಿಗೂ ಕಲಿತ ಶಾಲೆ, ಅಕ್ಷರ ಕಲಿಸಿಕೊಟ್ಟ ಗುರುಗಳು, ಜೊತೆಗಿದ್ದ ಸಹಪಾಠಿಗಳನ್ನು ಮರೆಯದೆ ಕಳೆದ ೩೫ ವರ್ಷಗಳಿಂದ ಸಹಪಾಠಿಗಳನ್ನು ಒಗ್ಗೂಡಿಸಿ ಆರೋಗ್ಯ, ಶಿಕ್ಷಣ, ಸಂಕಷ್ಟದಲ್ಲಿರುವವರಿಗೆ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ನಿರ್ವಾಹಕರಾದ ಕಿರಣ್ ಜೋಸೆಫ್, ಅಸ್ಮಾ ಜಬೀನ್, ಶುಭಾ ಕುಶಾಲಪ್ಪ, ಪ್ರಶಾಂತ್ ಮಾತನಾಡಿ, ಸ್ನೇಹ ಸಮ್ಮಿಲನದ ಮೂಲಕ ಕುಟುಂಬದ ಸದಸ್ಯರ ಹಾಗೆ ಪರಸ್ಪರ ಸ್ನೇಹತ್ವ ಮತ್ತು ಸಂತೋಷದ ಭಾವನೆಯು ಮೂಡುವಂತಾಗುತ್ತದೆ. ಹಾಗೆಯೇ ನಾವುಗಳು ನಮ್ಮ ಬದುಕಿನುದ್ದಕ್ಕೂ ದೊರೆತ ಅನುಭವ, ಹಳೆಯ ನೆನಪು ಹಂಚಿಕೊಳ್ಳುವುದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ ಎಂದರು.

ಸ್ನೇಹ ಸಮ್ಮಿಲನದ ಅಂಗವಾಗಿ ವಿವಿಧ ಸ್ವರ್ಧಾ ಕಾರ್ಯಕ್ರಮಗಳು ನಡೆದವು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಈ ಸಂದರ್ಭ ಹಳೆ ವಿದ್ಯಾರ್ಥಿಗಳಾದ ಶಾಲಿನಿ, ಉಮೇಶ್, ದಿಲನ್, ರೀನಾ, ಅಂಜು, ಪೂಣಚ್ಚ, ಆದಿಲ್, ನಿರ್ಮಲ, ಅಜೀಜ್, ಮಮತ, ವಿನ್ಸೆಂಟ್, ವಿವೇಕ್, ಸಿಂದು, ಸೇರಿದಂತೆ ೩೦ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಹಾಜರಿದ್ದರು.ಮಡಿಕೇರಿ: ಮಡಿಕೇರಿ ನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಸೇವಾದಳದ ಸದಸ್ಯರಿಗೆ ಮಡಿಕೇರಿ ರೋಟರಿ ವತಿಯಿಂದ ಉಚಿತ ಬಿಳಿ ಸಾಕ್ಸ್ ಮತ್ತು ಬಿಳಿ ಕ್ಯಾನ್ವಾಸ್ ಪಾದರಕ್ಷೆಗಳನ್ನು ನೀಡಲಾಯಿತು.

ಸೇವಾದಳದÀ ಸಮವಸ್ತçದ ಭಾಗವಾದ ಬಿಳಿ ಸಾಕ್ಸ್ ಮತ್ತು ಪಾದರಕ್ಷೆಗಳೊಂದಿಗೆ ಸ್ವಾತಂತ್ರೊö್ಯÃತ್ಸವದ ಕವಾಯತುವಿನಲ್ಲಿ ಭಾಗವಹಿದ ಸೇವಾದಳ ತಂಡ ದ್ವಿತೀಯ ಬಹುಮಾನ ಪಡೆದಿರುವುದಾಗಿ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ರೋಟರಿ ಮಡಿಕೇರಿಗೆ ಧನ್ಯವಾದ ಅರ್ಪಿಸಿದರು.

ರೋಟರಿ ಅಧ್ಯಕ್ಷೆ ಲಲಿತಾ ರಾಘವನ್, ಕಾರ್ಯದರ್ಶಿ ಎಂ.ಬಿ. ಸೋಮಣ್ಣ ಅನಂತ ಸುಬ್ಬರಾವ್ ಹಾಗೂ ಸುದಯ್ ನಾಣಯ್ಯ ಅವರು ಪಾದರಕ್ಷೆಯ ಪ್ರಾಯೋಜಕರಾಗಿದ್ದಾರೆ.ಗೋಣಿಕೊಪ್ಪಲು: ಇಲ್ಲಿನ ಲಯನ್ಸ್ ಕ್ಲಬ್ ವತಿಯಿಂದ ಕಳತ್ಮಾಡು ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಪುಟ್ಟ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಕ್ಲಬ್ ಅಧ್ಯಕ್ಷ ಸಿ.ಪಿ. ಬೋಪಣ್ಣ ಹಾಗೂ ಕೊಲ್ಲಿರ ಧರ್ಮಜ ಮಾತನಾಡಿ, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯದರ್ಶಿ ಸೌಮ್ಯಾ ಎಂ.ಬಿ., ಖಜಾಂಚಿ ಸೋಮಣ್ಣ ಐ.ಎಂ., ಸದಸ್ಯರು ಧನು ಉತಯ್ಯ, ಕೆ.ಪಿ. ಸುಬ್ಬಯ್ಯ, ಕೆ.ಎಂ. ಕಾವೇರಿಯಪ್ಪ ಮತ್ತು ಎಂ.ಎ. ಬಾಲಕೃಷ್ಣ ಹಾಜರಿದ್ದರು.

ಸ್ಥಳೀಯರಾದ ಕೊಲ್ಲಿರ ವಿಜು ಬೋಪಣ್ಣ, ಧನು ಪೂಣಚ್ಚ, ಬಲ್ಯಮಂಡ ವೇಣು ಮಂದಣ್ಣ, ಕತ್ರಿಕೊಲ್ಲಿ ಚಂದ್ರಶೇಖರ್ ಹಾಜರಿದ್ದರು. ಮುಖ್ಯೋಪಾಧ್ಯಾಯಿನಿ ಭಾಗ್ಯವತಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಮಡಿಕೇರಿ: ಕೊಂಡಗೇರಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿರುತ್ತಾರೆ. ವಿದ್ಯಾರ್ಥಿಗಳಾದ ಸಣ್ಣುವಂಡ ರಶ್ಮಿ ಪೊನ್ನಮ್ಮ, ಬೊಳ್ಳೆಪಂಡ ದೀಪ್ತಿ ತಂಗಮ್ಮ, ಪಳೆಯಂಡ ಕಾಜಲ್ ಪಿ.ಸಿ., ಸೃಷ್ಟಿ ಬಿ.ಸ್., ಹೈಜಾ ಬಿ.ಐ., ನಿಲ್ಮಾಡ್ ತನ್ಯಾ ರೈ, ಕುಟ್ಟನ ಎಂ. ಯಶ್ಮಿತ, ಪುಚ್ಚಿಮಂಡ ಯು. ತನಿಶಾ ತಂಡದಲ್ಲಿದ್ದರು. ಇವರಿಗೆ ಶಾಲೆಯ ದೈಹಿಕ ಶಿಕ್ಷಕರುಗಳಾದ ಮೋನಿಕಾ ಬಿ.ಎಸ್. ಹಾಗೂ ಲಾವಣ್ಯ ಮಾರ್ಗದರ್ಶನವನ್ನು ನೀಡಿದ್ದಾರೆ.ಪೊನ್ನಂಪೇಟೆ: ಪ್ರೌಢಶಾಲಾ ವಿಭಾಗದ ಪೊನ್ನಂಪೇಟೆ ವಲಯ ಮಟ್ಟದ ಕ್ರೀಡಾಕೂಟವು ತಿತಿಮತಿಯಲ್ಲಿ ನಡೆಯಿತು.

ತಿತಿಮತಿ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಸ್ಥಳೀಯ ಮೈದಾನದಲ್ಲಿ ನಡೆದ ಕ್ರೀಡಾಕೂಟವನ್ನು ತಿತಿಮತಿ ಗ್ರಾ.ಪಂ. ಅಧ್ಯಕ್ಷರಾದ ಪೊನ್ನು ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಎ.ಪಿ. ಮಂಗಳ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಡ್ಯಾನಿ, ಹರಿಣಿ, ಡ್ಯಾನಿ ದೇವಯ್ಯ ರಾಘವೇಂದ್ರ, ಪ್ರಮೋದ್ ಶಿಕ್ಷರರಾದ ಸೋಮಶೇಖರ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ವಲಯದ ಒಟ್ಟು ೭ ಪ್ರೌಢಶಾಲಾ ತಂಡಗಳು ಭಾಗವಹಿಸಿತ್ತು.ಗುಡ್ಡೆಹೊಸೂರು: ನಿವೃತ್ತಿಗೊಂಡ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ನಂಜರಾಯಪಟ್ಟಣ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತಿಗೊಂಡ ಆಶಾ ಕಾರ್ಯಕರ್ತೆಯರಾದ ಕೆ.ಸಿ.ರುಕ್ಮಿಣಿ, ಲಲಿತಾ, ಸ್ವಾತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ವೈದ್ಯರಾದ ಪ್ರತಾಪ್ ಸಾಗರ್, ಸಿ.ಎಚ್,ಓ ಪ್ರೀಯಾ, ಅರೋಗ್ಯ ಸಹಾಯಕಿ ಭವಾನಿ, ಸುಮಿತ್ರ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಹಾಜರಿದ್ದರು.