*ಗೋಣಿಕೊಪ್ಪ, ಆ. ೨೪: ಪೊನ್ನಂಪೇಟೆ ತಾಲೂಕು ವಲಯ ಮಟ್ಟದ ಕ್ರೀಡಾಕೂಟಕ್ಕೆ ಅರುವತೊಕ್ಲು ಸರ್ವದೈವತಾ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಾ. ಸೋಮಯ್ಯ ಕ್ರೀಡಾ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸೋಲು, ಗೆಲವು ನಡೆಯಲಿ ಪ್ರಾಮುಖ್ಯತೆ ಆಗುವುದಿಲ್ಲ. ಮನಸ್ಸಿನ ಆರೋಗ್ಯ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವುದು ಕ್ರೀಡೆಯ ಬದ್ಧತೆ ಆಗಬೇಕು ಎಂದು ಹೇಳಿದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್ ಮಾತನಾಡಿ, ಜ್ಞಾನಕ್ಕಾಗಿ ಓದು, ಅರೋಗ್ಯಕ್ಕಾಗಿ ಕ್ರೀಡೆ ಎಂಬ ಎರಡು ವಿಚಾರಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.
ಗೋಣಿಕೊಪ್ಪ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಮಾತನಾಡಿ, ಓದು ಕ್ರೀಡೆ ಇವೆಲ್ಲವೂ ಮನುಷ್ಯನ ಜೀವಿತಕ್ಕೆ ಬೇಕಾದ ಅಮೂಲ್ಯ ವಸ್ತು ಇಂತಹ ಗಳಿಕೆಗಳನ್ನು ಗಳಿಸಿದ ನಂತರ ವಿದಯತೆಯಿಂದ ವಿದ್ಯಾರ್ಥಿಗಳು ವರ್ತಿಸಬೇಕು ಹಿರಿಯರಿಗೆ ಗುರುಗಳಿಗೆ ತಂದೆ-ತಾಯಿಗಳಿಗೆ ಗೌರವಿಸುವುದನ್ನು ಪ್ರಮುಖವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸರ್ವದೈವತಾ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಕಾಡ್ಯಮಾಡ ಪ್ರಕಾಶ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮೊಳಗೆ ಅಡಗಿರುವ ಧೈರ್ಯವನ್ನು ಹೊರತರಲು ಕ್ರೀಡೆ ಸಹಕಾರಿಯಾಗುತ್ತದೆ. ಮಾನಸಿಕ ಯಾತನೆಗಳಿಂದ ಹೊರಬರಲು, ಮತ್ತು ಬೇಡದ ಹವ್ಯಾಸಗಳಿಂದ ದೂರವಿರಲು ಕ್ರೀಡೆಯಿಂದ ಸಾಧ್ಯ ಎಂದು ಸಲಹೆ ನೀಡಿದರು.
ಸರ್ವದೈವತಾ ವಿದ್ಯಾಸಂಸ್ಥೆಯ ಪ್ರಥಮಿಕ ಶಾಲೆ, ಮುಖ್ಯೋಪಾಧ್ಯಾಯಿನಿ ಮನೆಯಪಂಡ ಶೀಲಾ ಬೋಪಣ್ಣ ಪ್ರಾಸ್ತವಿಕ ನುಡಿಗಳಲ್ಲಿ ಸಂಸ್ಥೆ ನಡೆದು ಬಂದ ಹಾದಿ, ಕ್ರೀಡಾ ಚಟುವಟಿಕೆಯಲ್ಲಿರುವ ಕ್ರಿಯಾತ್ಮಕತೆಗಳ ಬಗ್ಗೆ ವಿವರಿಸಿದರು.
ನಂತರ ದೈಹಿಕ ಶಿಕ್ಷಣ ಶಿಕ್ಷಕರಿಗೆ ಜರ್ಸಿ, ಟೋಪಿಗಳನ್ನು ನೀಡಲಾಯಿತು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಾಲಿಬಾಲ್ ಮತ್ತು ಥ್ರೋಬಾಲ್ ಕ್ರೀಡೆಗಳಲ್ಲಿ ಭಾಗವಹಿಸಿದರು.
ಶಿಕ್ಷಕಿ ರೋಷಿ, ಅತ್ತೂರು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಹೇಮಾವತಿ, ಸರ್ವ ದೈವತ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ನವೀನ್, ಸುಬ್ಬಯ್ಯ ಸರಿದಂತೆ ಶಾಲೆಯ ಶಿಕ್ಷಕರುಗಳು ದೈಹಿಕ ಶಿಕ್ಷಣ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.