ಕೂಡಿಗೆ, ಆ. ೨೩: ಹಾಸನ ಹೆದ್ದಾರಿ ಕೂಡಿಗೆಯಿಂದ ಕುಶಾಲ ನಗರಕ್ಕೆ ಹೋಗುವ ಕೂಡಿಗೆ ಮಾರ್ಗ ಮಧ್ಯೆ ಕೂಡ್ಲೂರು ಕೈಗಾರಿಕಾ ಕೇಂದ್ರದ ಸರ್ಕಲ್‌ನ ಹೆದ್ದಾರಿ ರಸ್ತೆಯಲ್ಲಿ ನೂತನ ತಂತ್ರಜ್ಞಾನದ ಎ.ಎನ್.ಪಿ.ಆರ್. ಕ್ಯಾಮರಾ ಅಳವಡಿಸಲಾಗಿದೆ.
ವಾಹನಗಳ ಚಾಲನೆ ಸಂದರ್ಭದಲ್ಲಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡುವುದು, ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸುವುದು, ಓವರ್ ಸ್ಪೀಡ್, ತ್ರಿಬ್ಬಲ್ ರೈಡಿಂಗ್, ಅತಿ ವೇಗವಾಗಿ ಡ್ರೆöÊವಿಂಗ್, ಯರ್ರಾಬಿರ್ರಿ ಪಾರ್ಕಿಂಗ್ ಇತ್ಯಾದಿ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕಡಿವಾಣ ಹಾಕಲು ಸಿ.ಸಿ. ಕ್ಯಾಮರಾ ಹಾಕಲಾಗಿದೆ.
ಬಯಲು ಬಸವೇಶ್ವರ ದೇವಾಲಯ ಹಿತರಕ್ಷಣಾ ಸಮಿತಿಯ ಯೋಜನೆಯ ಅನ್ವಯ, ಸುಕ್ಷನ್ ಕಾಫಿ ಕ್ಯೂರಿಂಗ್ ಪ್ರೆöÊವೇಟ್ ಲಿಮಿಟೆಡ್ ಅಂದಾಜು ರೂ. ೧.೪೭. ಲಕ್ಷ ವೆಚ್ಚದಲ್ಲಿ ಎ.ಎನ್.ಪಿ.ಆರ್. ಕ್ಯಾಮರಾವನ್ನು ಅಳವಡಿಸಲಾಗಿದ್ದು, ಇದು ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ನಿಗಾ ಇಡಲಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವುದು, ಕ್ಯಾಮರಾದಲ್ಲಿ ಸೆರೆ ಆದಲ್ಲಿ ಅದಕ್ಕೆ ಸಂಬAಧಿಸಿದ ದಂಡ ವಾಹನದ ಮಾಲೀಕರಿಗೆ ರವಾನೆ ಆಗಲಿದೆ.
ಹೀಗಾಗಿ ಕಡ್ಡಾಯವಾಗಿ ವಾಹನ ಸವಾರರು ಸಂಚಾರ ನಿಯಮವನ್ನು ಪಾಲಿಸುವಂತೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
ನೂತನ ತಂತ್ರಜ್ಞಾನದ ಕ್ಯಾಮರಾ ಅಳವಡಿಸುವ ಸಂದರ್ಭ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ರಾಮಚಂದ್ರನವರು ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲನೆ ಮಾಡುವ ಮೂಲಕ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.