ಗೋಣಿಕೊಪ್ಪಲು. ಆ. ೨೪: ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾ ಸಂಸ್ಥೆಯಲ್ಲಿ ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ವಿವಿಧ ಕಾರ್ಯಕ್ರಮಗಳು ಜರುಗಿದವು, ಕಾರ್ಯಕ್ರಮದ ಅಂಗವಾಗಿ ಅಂತರ್ ಶಾಲಾ ಭಾಷಣ, ಹಾಗೂ ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾಕಮಾಡ ಎನ್. ನಾಣಯ್ಯ ಅವರ ಜ್ಞಾಪಕಾರ್ಥವಾಗಿ ಸ್ಪರ್ಧೆಯನ್ನು ನಡೆಸಲಾಯಿತು.
ಫ್ರೌಢ ಶಾಲಾ ವಿಭಾಗಕ್ಕೆ ಸ್ವಾತಂತ್ರö್ಯ ಹೋರಾಟದಲ್ಲಿ ಹೋರಾಡಿದ ಕೊಡಗಿನ ವೀರವನಿತೆಯರ ಸ್ಮರಣೆ ಎಂಬ ವಿಷಯದಲ್ಲಿ ಆಂಗ್ಲ ಹಾಗೂ ಕನ್ನಡದಲ್ಲಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕ್ಲಸ್ಟರ್ ಭಾಗದ ವಿವಿಧ ೧೦ ಶಾಲೆಗಳಿಂದ ಸ್ಪರ್ಧಾರ್ಥಿಗಳು ಪಾಲ್ಗೊಂಡರು.
ಆAಗ್ಲ ಭಾಷೆಯ ತೀರ್ಪುಗಾರರಾಗಿ ನಿವೃತ್ತ ಶಿಕ್ಷಕ ಕಿರಣ್ ನಾಚಪ್ಪ, ಲಯನ್ಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಆರತಿ ಸತ್ಯ, ಕನ್ನಡ ಭಾಷೆಯ ತೀರ್ಪುಗಾರರಾಗಿ ಕಾಲ್ಸ್ ಶಾಲೆಯ ಉಪನ್ಯಾಸಕಿ ಶಕು ಮಂದಣ್ಣ, ನಿವೃತ್ತ ಶಿಕ್ಷಕಿ ಪಾರ್ವತಿ ಜೋಯಪ್ಪ ಪಾಲ್ಗೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಂಗಾ ಚಂಗಪ್ಪನವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಂ.ಎಸ್. ಭಾರತೀಯರು ಕಾರ್ಯಕ್ರಮದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊAಡರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪೊನ್ನಿಮಾಡ ಎಸ್. ಸುರೇಶ್ ಉಪಾಧ್ಯಕ್ಷರಾದ ಮೂಕಳೇರ ಕಾವ್ಯ, ಗೌ, ಕಾರ್ಯದರ್ಶಿಯವರಾದ ಕೊಣಿಯಂಡ ಸಂಜು ಸೋಮಯ್ಯ, ಇಮ್ಮಿ ಉತ್ತಪ್ಪ, ಗುಮ್ಮಟ್ಟಿರ ಗಂಗಮ್ಮ ಕಳ್ಳಿಚಂಡ ಚಿಪ್ಪ ದೇವಯ್ಯ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು, ಸಹಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹ ಶಿಕ್ಷಕಿ ಎಂ.ಎನ್. ಕಾವೇರಮ್ಮ ನಿರೂಪಿಸಿ, ಸಹ ಶಿಕ್ಷಕಿ ಲಾಂಚನ್ ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯ ಕ್ರಮವು ಮುಕ್ತಾಯವಾಯಿತು.
ಪ್ರಶಸ್ತಿ ವಿಜೇತರು
ಹಿರಿಯ ಪ್ರಾಥಮಿಕ ಕನ್ನಡ ವಿಭಾಗದಲ್ಲಿ ಸಂತ ಅಂತೋಣಿ ಪ್ರಾಥಮಿಕ ಶಾಲೆಯ ಅಕ್ಷರ ತಂಗಮ್ಮ (ಪ್ರ), ಕಿರುಗೂರು ಸರಕಾರಿ ಹಿರಿಯ ಪ್ರಾxಮಿಕ ಶಾಲೆಯ ಬೃಂದ(ದ್ವಿ), ಅಪ್ಪಚ್ಚಕವಿ ವಿದ್ಯಾಲಯದ ಅನುಶ್ರೀ (ತೃ),
ಇಂಗ್ಲೀಷ್ ವಿಭಾಗದಲ್ಲಿ ಬೇಗೂರಿನ ಕೂರ್ಗ್ ಸಿಗ್ನೇಚರ್ ಶಾಲೆಯ ಆದ್ಯಪೂವಮ್ಮ (ಪ್ರ) ಹಾಗೂ ಎಂ.ಪಿ. ಯಾಶಿಕ (ದ್ವಿ), ಅಪ್ಪಚ್ಚಕವಿ ವಿದ್ಯಾಲಯದ ಪೊನ್ನಣ್ಣ (ತೃ), ಪ್ರೌಢಶಾಲಾ ಕನ್ನಡ ವಿಭಾಗದಲ್ಲಿ ಅಪ್ಪಚ್ಚಕವಿ ವಿದ್ಯಾಲಯದ ಎಂ.ಎಸ್. ಮೋಕ್ಷಿತ್(ಪ್ರ)., ಟಿ.ಪಿ. ನಿಶಾ (ದ್ವಿ) ಹಾಗೂ ಸಂತ ಅಂತೋಣಿ ಪ್ರೌಢಶಾಲೆಯ ಸಿಂಚನ ದೇಚಮ್ಮ (ತೃ),
ಇಂಗ್ಲಿಷ್ ವಿಭಾಗದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಜಾಗೃತಿ (ಪ್ರ), ಅಪ್ಪಚ್ಚಕವಿ ವಿದ್ಯಾಲಯದ ಎಸ್.ಕೆ. ಭವ್ಯ, (ದ್ವಿ) ಹಾಗೂ ಸಂತ ಅಂತೋಣಿ ಪ್ರೌಢಶಾಲೆಯ ಚಾರ್ವಿ ಚೋಂದಮ್ಮ, (ತೃ) ಸ್ಥಾನವನ್ನು ಪಡೆದರು. ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.