ಮಡಿಕೇರಿ, ಆ. ೨೬: ಕಕ್ಕಡ ತಿಂಗಳಿನಲ್ಲಿ ವಿರಾಮ ಪಡೆದಿದ್ದ ಹಬ್ಬಾಚರಣೆಗಳು ಹಾಗೂ ತುಲಾಭಾರ ಸೇವೆಗಳನ್ನು ನಡೆಸಲು ಮುನ್ನುಡಿಯೆಂಬAತೆ ಪಾಡಿಯಲ್ಲಿ ಚಿಙÁ್ಯರ್ ಪತ್ತ್ ಆರಾಧನೆ ಅಥವಾ ಸಿಂಹಮಾಸದ ಆರಾಧನೆ ಇಂದು ಜರುಗಿತು.

ಸಂಪ್ರದಾಯದAತೆ ಬೆಳಿಗ್ಗೆ ದೇವತಕ್ಕರ ಹಾಗೂ ಇತರ ಊರು ನಾಡಿನ ತಕ್ಕರ ಐನ್‌ಮನೆಗಳಿಂದ ಪಾಲ್‌ಬೈವಾಡ್ ಆಗಮನವಾದ ಮೇಲೆ ಬೆಳಿಗ್ಗೆ ೧೧ ಗಂಟೆಗೆ ಪುಷ್ಪಾಲಂಕಾರದಿAದ ಕಂಗೊಳಿಸುತ್ತಿದ್ದ ಅಯ್ಯಪ್ಪ ಕಟ್ಟೆಯ ಮುಂದೆ ದೇವತಕ್ಕರು ಹಾಗೂ ಊರು ನಾಡಿನ ತಕ್ಕರು ಸೇರಿ ನಡೆಸುವ ಪಚ್ಚಿ ಪರೆವೊ ಪ್ರಾರ್ಥನೆಯೊಂದಿಗೆ ಹಬ್ಬಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.

ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದ ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ದೇವಾಲಯದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಬಾಚಮಂಡ ರಾಜಾ ಪೂವಣ್ಣ ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡಿದ್ದರು.

ತುಲಾಭಾರ ಸೇವೆ, ಮಹಾಪೂಜೆ, ನಿತ್ಯಪೂಜೆಯ ನಂತರ ಶ್ರೀ ಇಗ್ಗುತ್ತಪ್ಪನ ಉತ್ಸವಮೂರ್ತಿ ಸರ್ವಾಲಂಕಾರ ೪ಏಳನೇ ಪುಟಕ್ಕೆ(ಮೊದಲ ಪುಟದಿಂದ) ಭೂಷಿತವಾಗಿ ದೇವಸ್ಥಾನದ ಪ್ರಾಂಗಣದಲ್ಲಿ ಭಕ್ತರಿಗೆ ದರ್ಶನ ನೀಡಿದುದಲ್ಲದೆ, ನೃತ್ಯಬಲಿಯೊಂದಿಗೆ ಉತ್ಸವ ಸಂಪನ್ನಗೊAಡಿತು. ದೇವತಕ್ಕರಾದ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಕೊಡಗಿನ ಜನತೆಯ ಶ್ರೇಯೋಭಿವೃದ್ಧಿಗೆ, ನಾಡಿನ ಸುಭಿಕ್ಷೆಗೆ ಹಾಗೂ ಕೊಡಗನ್ನು ಪ್ರಾಕೃತಿಕ ವಿಕೋಪಗಳಿಂದ ರಕ್ಷಿಸಿ ಹರಸುವಂತೆ ಕುಲದೇವರಾದ ಇಗ್ಗುತ್ತಪ್ಪನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಉತ್ಸವ ಸಂಪನ್ನವಾಯಿತು. ಪೂಜಾ ವಿಧಿ ವಿಧಾನಗಳನ್ನು ಎಲ್ಚಿತ್ತಾಯ ಕುಶಭಟ್ ಹಾಗೂ ಜಗದೀಶ್ ನೆರವೇರಿಸಿದರು.

ದೇವಸ್ಥಾನದ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಪರದಂಡ ವಿಠಲ ಭೀಮಯ್ಯ, ಭಕ್ತಜನ ಸಂಘದ ಕಾರ್ಯದರ್ಶಿ ಬಟ್ಟೀರ ಚೋಂದಮ್ಮ ಮೇದಪ್ಪ, ದೇವತಕ್ಕರ ಕುಟುಂಬಸ್ಥರು, ಊರುನಾಡಿನ ತಕ್ಕಮುಖ್ಯಸ್ಥರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.