ವೀರಾಜಪೇಟೆ, ಆ. ೨೬: ೨೦೨೬ನೇ ಸಾಲಿನ ಚೇನಂಡ ಕುಟುಂಬ ಹಾಕಿ ಪಂದ್ಯಾವಳಿಯ ಕರಪತ್ರವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಬಿಡುಗಡೆಗೊಳಿಸಿದರು.

ವೀರಾಜಪೇಟೆಯ ಶಾಸಕರ ಗೃಹ ಕÀಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕರಪತ್ರ ಬಿಡುಗಡೆ ಮಾಡಿ ಶುಭಕೋರಿದ ಶಾಸಕರು, ಕೌಟುಂಬಿಕ ಹಾಕಿ ಪಂದ್ಯಾವಳಿಗಳು ಕೇವಲ ಕ್ರೀಡೆ ಮಾತ್ರವಲ್ಲದೆ ಪ್ರತಿಷ್ಠೆಯ ಸಂಕೇತ ಕೂಡ ಆಗಿದೆ. ಕೊಡಗು ಜಿಲ್ಲೆಯು ಅಂತರರಾಷ್ಟಿçÃಯ ಮಟ್ಟದ ಹಾಕಿಪಟುಗಳ ತವರೂರಾಗಿದ್ದು, ಈ ಹಾಕಿ ಪಂದ್ಯಾವಳಿ ಕೂಡ ಯಶಸ್ಸಿನ ಹಾದಿ ತುಳಿಯಲಿ ಹಾಗೂ ಅನೇಕ ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಚೇನಂಡ ಕುಟುಂಬದ ಅಧ್ಯಕ್ಷ ಕಂಬನಿ ಕರುಂಬಯ್ಯ, ಕುಟುಂಬದ ಸದಸ್ಯರುಗಳಾದ ಸಂಪನ್ ಅಯ್ಯಪ್ಪ, ವಿನೋದ್, ಪೊನ್ನಂಪೇಟೆ ತÀಹಶೀಲ್ದಾರ್ ಮೋಹನ್, ವೀರಾಜಪೇಟೆ ತಹಶೀಲ್ದಾರ್ ಪಿ.ಎ. ಪ್ರವೀಣ್, ಚೇನಂಡ ಕುಟುಂಬದ ಪಟ್ಟೆದಾರರು ಹಾಗೂ ಪ್ರಮುಖರು, ಹಾಕಿ ಪಂದ್ಯಾವಳಿಯ ಸಮಿತಿಯವರು ಮತ್ತಿತರ ಪ್ರಮುಖರು ಇದ್ದರು.