ವೀರಾಜಪೇಟೆ, ಆ. ೨೬: ಸಮಾಜದಲ್ಲಿ ಅಗತ್ಯ ಇರುವವರಿಗೆ ಅನುಕೂಲ ಆಗಲಿ ಎಂದು ಸರಕಾರ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದರಿಂದ ಸಮಾಜವು ಉತ್ತಮ ದಿಕ್ಕಿನಲ್ಲಿ ಸಾಗಲು ಸಹಕಾರಿಯಾಗಲಿದೆ ಎಂದು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಅಮೃತ್ ನಗರೋತ್ಥಾನ ಕಾರ್ಯಕ್ರಮದ ಹಂತ-೪ರ ಅಡಿಯಲ್ಲಿ, ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮ ಶಾಸಕರ ಗೃಹ ಕಚೇರಿಯಲ್ಲಿ ನೆರವೇರಿತು. ಈ ಸಂದರ್ಭ ಆಯ್ದ ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ೪ಏ¼ (ಮೊದಲ ಪುಟದಿಂದ) ಮಾತನಾಡಿದ ಶಾಸಕರು, ಯೋಜನೆಯ ಪರಿಶಿಷ್ಟ ಪಂಗಡ ಹಾಗೂ ದಿವ್ಯಾಂಗರಿಗೆ ಹೆಚ್ಚಿನ ಸಹಾಯ ನೀಡಲಿದ್ದು, ಈ ಸಹಾಯಧನವನ್ನು ಪಡೆದುಕೊಂಡವರು ಇದರ ಸದ್ಬಳಕೆಯನ್ನು ಮಾಡಿ ತಮ್ಮ ಜೀವನವನ್ನು ಸುಸ್ಥಿತಿಯೆಡೆಗೆ ಕೊಂಡೊಯ್ಯಬೇಕೆAದು ಕರೆ ನೀಡಿದರು. ಈ ಯೋಜನೆ ಅಡಿಯಲ್ಲಿ ಅರ್ಹ ಪರಿಶಿಷ್ಟ ಪಂಗಡ ಹಾಗೂ ವಿಶೇಷಚೇತನ ಫಲಾನುಭವಿಗಳಿಗೆ, ಮನೆ ದುರಸ್ತಿಗೆ, ಕೃತಕ ಕಾಲು ಜೋಡಣೆಗೆ ಸಹಾಯಧನವನ್ನು ವಿತರಿಸಲಾಯಿತು.
ಈ ಸಂದರ್ಭ ಪುರಸಭೆ ಮುಖ್ಯಅಧಿಕಾರಿ ನಾಚಪ್ಪ, ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಸದಸ್ಯರಾದ ಮತೀನ್, ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.