ಕೂಡಿಗೆ, ಆ. ೨೬: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ರೂ. ೮೧.೧೫ ಲಕ್ಷ ಲಾಭಾಂಶ ಗಳಿಸಿದೆ.
೨೦೨೪-೨೫ನೇ ಸಾಲಿಗೆ ಸದಸ್ಯರ ಪಾಲು ಬಂಡವಾಳ ರೂ. ೪೩೨.೭೭ ಲಕ್ಷಗಳಿದ್ದು, ಇದರಲ್ಲಿ ಠೇವಣಿ ರೂ. ೨೫೨೦.೩೬. ಲಕ್ಷ, ಇದರಲ್ಲಿ ಕೃಷಿ ಸಾಲವಾಗಿ ೮೯೩.೮೮ ಲಕ್ಷ ನೀಡಲಾಗಿದೆ. ಕೃಷಿ ಮಧ್ಯಾವಧಿ ಸಾಲವಾಗಿ ೬.೮೯ ಲಕ್ಷ, ಜಾಮೀನು ಸಾಲವಾಗಿ ೬೮೭.೭೧ ಲಕ್ಷ, ನಿರಖು ಠೇವಣಿ ೧೫.೧೬ ಲಕ್ಷ, ಪಿಗ್ಮಿಠೇವಣಿಯಾಗಿ ೧.೬೫.ಲಕ್ಷ, ಹಾಗೂ ಸ್ವಸಹಾಯ ಗುಂಪುಗಳಿಗೆ ೪೧.೬೫ ಲಕ್ಷ, ಆಭರಣ ಸಾಲವಾಗಿ ೧೬೮.೫೦ ಲಕ್ಷ, ವ್ಯಾಪಾರಾಭಿವೃದ್ದಿಗೆ ೩೦೫.೬೧ ಲಕ್ಷ, ಜಂಟಿ ಬಾಧ್ಯತಾ ಗುಂಪುಗಳಿಗೆ ೨೬ ಲಕ್ಷ, ಪಿಗ್ಮಿ ಸಾಮಾನ್ಯ ಸಾಲವಾಗಿ ೧೭೯೩ ಲಕ್ಷ, ಗೊಬ್ಬರ ಸಾಲವಾಗಿ ೯.೭೩ ಲಕ್ಷ, ಒಟ್ಟು ೩೯.೫೧ ಕೋಟಿ ಸಾಲ ಸೌಲಭ್ಯಗಳ ವ್ಯವಹಾರಗಳನ್ನು ನಡೆಸುವ ಮೂಲಕ ರೈತರಿಗೆ ಸಂಘ ಸಹಕಾರಿಯಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ.