ಂಟಪದ ಶತಮಾನ ಭವನದಲ್ಲಿನಡೆದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ೨೦೨೪ -೨೫ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ೨೦೨೫- ೨೬ರ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು.

ರಾಮಚಂದ್ರ ಮೂಗೂರು, ಕೆ.ಎಸ್. ರಾಜಶೇಖರ್, ಬಿ.ಕೆ. ಜಗದೀಶ್, ಜಿ.ಆರ್. ರವಿಶಂಕರ್, ವಿ.ವಿ. ಮಂಜುನಾಥ್, ಅಶೋಕ್, ಶ್ಯಾಮಲಾ, ಬಿ.ಕೆ. ಅರುಣ್ ಕುಮಾರ್, ಭರತೇಶ್ ಖಂಡಿಗೆ, ಜೆ.ಡಿ. ಶಿವಶಂಕರ್, ಸವಿತಾ ಭಟ್, ಲಲಿತಾ ರಾಘವನ್ ಹಾಗೂ ಮಂಜುಳ ರಾಮಕೃಷ್ಣ ಭಟ್ ನಿರ್ದೇಶಕರಾಗಿ ಆಯ್ಕೆಯಾದರು.

ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ ಶತಮಾನ ಭವನದ ಮೇಲ್ಭಾಗ ಸಭಾಂಗಣ ನಿರ್ಮಾಣ, ವಾಹನ ನಿಲುಗಡೆ ಸ್ಥಳದಲ್ಲಿ ಶೀಟ್ ಅಳವಡಿಕೆ, ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹೆಚ್ಚಳ, ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ೨೦೨೫-೨೬ ರ ಸಾಲಿನ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ದ್ಯೇಯೋದ್ಧೇಶಗಳಾಗಿವೆ ಎಂದರು.

ನಿಧಿಯ ಸದಸ್ಯರ ಸಹಕಾರದಿಂದ ನಿಧಿಯ ಬೆಳವಣಿಗೆ ಸಾಧ್ಯವಾಗಿದೆ. ಸಾಂಸ್ಕೃತಿಕ ಸಮಿತಿ, ಕಟ್ಟಡ ಸಮಿತಿ, ಕ್ರೀಡಾ ಸಮಿತಿ, ಧಾರ್ಮಿಕ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಸದಸ್ಯತ್ವ ನೋಂದಣಿ, ನಿಧಿ ಸಂಗ್ರಹಣೆ ಸೇರಿದಂತೆ ವಿವಿಧ ಸಮಿತಿಗಳ ನೇತೃತ್ವ ವಹಿಸಿದ ಆಡಳಿತ ಮಂಡಳಿ ಸದಸ್ಯರು ಪೂರಕವಾಗಿ ಸ್ಪಂದಿಸಿದ್ದರಿAದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಅಭಿವೃದ್ಧಿ ಸಾಧಿಸಿದೆ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ನಿಧಿಯ ಹಿರಿಯ ಸದಸ್ಯ ಜಿ.ಟಿ ರಾಘವೇಂದ್ರ ಮಾತನಾಡಿ ಸಲಹೆ ನೀಡಿದರು.

ಶ್ರೀಧರ ನೆಲ್ಲಿತ್ತಾಯ ಮಾತನಾಡಿ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಚಟುವಟಿಕೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಹೆಚ್ಚಾಗಲು ಜಿಲ್ಲಾ ಬ್ರಾಹ್ಮಣ ಒಕ್ಕೂಟವನ್ನು ರಚಿಸಬೇಕಾದ ಅಗತ್ಯವಿದೆ ಎಂದರು. ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎಸ್ ರಾಜಶೇಖರ್ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಬಿ.ಕೆ ಜಗದೀಶ್ ವಂದಿಸಿದರು.