ಮಡಿಕೇರಿ, ಆ. ೨೬: ಬೆಳ್ಳಿಹಬ್ಬದ ಸಂಭ್ರಮ ದಲ್ಲಿರುವ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ ಕೊಡಗು ಶಾಖೆ, ರಾಜ್ಯಮಟ್ಟದ ಕ್ರೀಡೋತ್ಸವವನ್ನು ನಗರದ ಜಿಲ್ಲಾ ಶೆಟಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿತ್ತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ೫೦ಕ್ಕೂ ಹೆಚ್ಚಿನ ವೈದ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ವೈದ್ಯರಿಗಾಗಿ ಶಟಲ್‌ನಲ್ಲಿ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳ ವಿಭಾಗ ಹಾಗೂ ಸಂಘಟಿತ ವಿಭಾಗದಲ್ಲಿ ಕ್ರೀಡಾ ಸ್ಪರ್ಧೆಗಳು ಜರುಗಿದವು. ಇದರೊಂದಿಗೆ ಚೆಸ್ ಹಾಗೂ ಕೇರಂ ಸ್ಪರ್ಧೆಗಳು ಕೂಡ ಆಯೋಜಿಸಲ್ಪಟ್ಟಿದ್ದವು. ಅಕ್ಟೋಬರ್ ೧೮ ರಂದು ನಡೆಯಲಿರುವ ಬೆಳ್ಳಿಹಬ್ಬದ ಆಚರಣೆಯಂದು ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.