ಸೋಮವಾರಪೇಟೆ, ಆ. ೧೫: ಇಲ್ಲಿನ ವಿಶ್ವ ಕರ್ಮ ಸಮಾಜದ ವತಿಯಿಂದ ಪಟ್ಟಣದ ಮಹಿಳಾ ಸಮಾಜದಲ್ಲಿ ಋಗುಪಾಕರ್ಮ ವಿಶೇಷ ಹೋಮ ಕಾರ್ಯಕ್ರಮ ನಡೆಯಿತು.
ಅರುಣ್‌ಶರ್ಮ ಪೌರೋಹಿತ್ವ ದಲ್ಲಿ ವಿಶೇಷ ಪೂಜೆ, ಹೋಮ, ಧಾರ್ಮಿಕ ಕೈಂಕರ್ಯಗಳು ನಡೆದವು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಸ್.ಎನ್. ಅಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್.ಪಿ. ರಾಜು, ಕಾರ್ಯದರ್ಶಿ ಎಸ್.ಎ. ಲೋಹಿತಾಶ್ವ, ಸಹ ಕಾರ್ಯದರ್ಶಿ ಕೆ.ವಿ. ಯೋಗೇಶ್, ಗೌರವಾಧ್ಯಕ್ಷ ಎಸ್.ಬಿ. ಲೀಲಾರಾಂ ಸೇರಿದಂತೆ ಸಮಾಜದ ಪ್ರಮುಖರು, ಸದಸ್ಯರು ಭಾಗವಹಿಸಿದ್ದರು.