ಗೋಣಿಕೊಪ್ಪ ವರದಿ, ಆ. ೧೫: ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆಗೆ ಪ್ರೋತ್ಸಾಹ ನೀಡುತ್ತಿರುವ ಗೋಪಾಲಕೃಷ್ಣ ಮತ್ತು ದೇಚಮ್ಮ ಅವರುಗಳನ್ನು ಗೌರವಿಸಲಾಯಿತು. ಹಿರಿಯರಿಗೆ ಕಚೇರಿ ನಿರ್ವಹಣೆಗೆ ಉಚಿತವಾಗಿ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು.

ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತಿರ ಸೋಮಣ್ಣ, ಜೀವಾವಧಿ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಪ್ರಮುಖರಾದ ಬಿ. ಆಪ್ಪು, ಮಂಡೆಚAಡ ಗಣೇಶ್ ಗಣಪತಿ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಮಾಣಿಪಂಡ ಪಾರ್ವತಿ, ಕೇಚೆಟಿರ ಕಾಮುಣಿ ಪೂಣಚ್ಚ, ಮಾಚಿಮಾಡ ಲೌಲಿ ಸೋಮಯ್ಯ ಇದ್ದರು.