ಕುಶಾಲನಗರ, ಆ. ೧೫: ಶೃಂಗೇರಿಯಲ್ಲಿ ನಡೆದ ಜೆಸಿಐ ಇಂಡಿಯಾ, ಜೋನ್ ೧೪ರ ವಲಯದ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ವಿಸ್ತಾರ ಕಾರ್ಯಕ್ರಮದಲ್ಲಿ ಜೆಸಿಐ ಕುಶಾಲನಗರ ಕಾವೇರಿ ಘಟಕ ೩ನೇ ಸ್ಥಾನಗಳಿಸಿದೆ. ಶೃಂಗೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ಕುಶಾಲನಗರದ ಜೆಸಿ ಪದಾಧಿಕಾರಿಗಳಿಗೆ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷೆ ತೇಜ ದಿನೇಶ್, ಬಿ. ಜಗದೀಶ್, ಜೋನ್ ಕೋ-ಆರ್ಡಿನೇಟರ್ ಎಂ.ಜೆ. ರಜನಿಕಾಂತ್, ಮಾಜಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ, ಕಾರ್ಯದರ್ಶಿ ಡಿ. ಪುನೀತ್, ಸದಸ್ಯರಾದ ಕಾವ್ಯ ಜಗದೀಶ್, ಕೋಮಲ ರಜನಿಕಾಂತ್, ಸಿ. ರವಿ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇದ್ದರು.